ಮಡಿಕೇರಿ, ಮೇ ೨೮ : ಅಬ್ಬಾ ನೋಡಿ... ಇದೊಂದು ಬೃಹತ್ ಗಾತ್ರದ ಬಟರ್ ಫ್ರೂಟ್..... ಈ ಬಡಾ ಬಟರ್ ಫ್ರೂಟ್ ಸರಿಸುಮಾರು ೧ ಕೆ.ಜಿ. ೧೧೦ ಗ್ರಾಂ ತೂಕವಿದೆ. ಈ ಹಣ್ಣು ಮಡಿಕೇರಿಯ ಪೆನ್‌ಶನ್‌ಲೇನ್‌ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿರುವ ಪೊಲೀಸ್ ಅಧಿಕಾರಿ ಪ್ರಸ್ತುತ ಶ್ರೀಮಂಗಲ ಠಾಣೆಯಲ್ಲಿರುವ ಎ.ಎಸ್.ಐ. ಲಿಂಗರಾಜ್ ಅವರ ಮನೆಯ ಹಿತ್ತಲಲ್ಲಿನ ಮರದಲ್ಲಿ ದೊರೆತಿದೆ.