ಮಡಿಕೇರಿ, ಮೇ ೨೮: ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನ ಮಾಡುವುದು ತನ್ನ ಆದ್ಯತೆಯಾಗಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ೧೪ ಮೆಡಿಕಲ್ ಕಾಲೇಜು, ೩೦ ಇಂಜಿನಿಯರಿAಗ್ ಕಾಲೇಜು, ನೂರಾರು ಶಿಕ್ಷಣ ಸಂಸ್ಥೆಗಳಿವೆ. ೨೦ ಲಕ್ಷಕ್ಕೂ ಹೆಚ್ಚು ಪದವೀಧರರು ಕ್ಷೇತ್ರ ವ್ಯಾಪ್ತಿಯಲ್ಲಿದ್ದಾರೆ. ಈ ಪೈಕಿ ೧.೮೫ ಲಕ್ಷ ಮಾತ್ರ ಪದವೀಧರ ಮತದಾರರಿದ್ದು, ಎಲ್ಲರ ಧ್ವನಿಯಾಗಿ ಕೆಲಸ ಮಾಡುವ ಉತ್ಸಾಹ ಹೊಂದಿದ್ದೇನೆ ಎಂದರು.

ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಕೃಷಿ ಉತ್ಪಾದನಾ ವಲಯದಿಂದ ಶೇ ೩೮, ಕೈಗಾರಿಕ ವಲಯದಿಂದ ಶೇ ೧೮ ರಷ್ಟು ಆದಾಯ ಬರುತ್ತಿದ್ದು, ಸೇವಾ ವಲಯದಿಂದ ಬಾಕಿ ಆದಾಯ ಬರುತ್ತಿದೆ. ಈ ಹಿನ್ನೆಲೆ ಉದ್ಯೋಗ ಸೃಷ್ಟಿಯಾಗುವ ಕೆಲಸಗಳಾಗಬೇಕು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಇದಕ್ಕೆ ಪೂರಕವಾಗಿ ಹತ್ತು ಹಲವು ಕಾರ್ಯಕ್ರಮ ರೂಪಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸವಾಗಬೇಕಾಗಿದೆ. ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿ ಚಟುವಟಿಕೆ ನಡೆಯುತ್ತಿದ್ದು, ಇದರ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕಾಗಿದೆ. ಇದರಿಂದ ಅನುಭವ, ಜ್ಞಾನ ದೊರೆತು ಉದ್ಯೋಗಗಳು ಲಭ್ಯವಾಗುತ್ತವೆ ಎಂದು ಹೇಳಿದರು.

ಉದ್ಯೋಗಿಗಳಿಗೆ ಇಎಸ್‌ಐ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯಲು ರೂ. ೧೮ ಸಾವಿರ ವೇತನ ಮಿತಿ ಇದ್ದು, ಅದನ್ನು ರೂ. ೨೧ ಸಾವಿರಕ್ಕೆ ಏರಿಸುವ ಪ್ರಸ್ತಾಪವಿದೆ. ಈ ನಿಟ್ಟಿನಲ್ಲಿ ವೇತನದ ಮಿತಿ ಮತ್ತಷ್ಟು ಹೆಚ್ಚಿಸಿ ಖಾಸಗಿ

(ಮೊದಲ ಪುಟದಿಂದ) ವಲಯದ ಸಿಬ್ಬಂದಿಗೆ ಉಚಿತ ಆರೋಗ್ಯ ಸೇವೆ ದೊರಕಿಸಿಕೊಡುವ ಕೆಲಸ ಮಾಡಲಾಗುವುದು. ಅದರೊಂದಿಗೆ ಸರಕಾರಿ ಉದ್ಯೋಗಿಗಳಿಗಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಸೇವೆ ಅನುದಾನಿತ, ಅನುದಾನ ರಹಿತ ಶಿಕ್ಷಕರಿಗೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಸ್ಪಂದಿಸುವ ಕೆಲಸ ತನ್ನಿಂದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ಸೇನೆಗೆ ಸೇರುವ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರ, ಪ್ರವಾಸೋದ್ಯಮ ಬೆಳವಣಿಗೆ ಸಾಧಿಸುತ್ತಿರುವ ಕಾರಣ ಕೊಡಗಿನಲ್ಲಿ ಟೂರಿಸಂ ತರಬೇತಿ ಕಾಲೇಜು ಅವಶ್ಯಕತೆ ಇದೆ. ಈ ಬಗ್ಗೆಯೂ ಗಮನ ಹರಿಸಲಾಗುವುದು. ಜೊತೆಗೆ ಕೇಂದ್ರದ ಮುದ್ರಾ, ಸ್ಟಾö್ಯಂಡ್ ಅಪ್ ಇಂಡಿಯಾ ಸೇರಿದಂತೆ ವಿವಿಧ ಮೂಲದ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿದ್ದು, ನಿರುದ್ಯೋಗಿಗಳು ಸ್ವಂತ ಉದ್ಯಮ ಸೃಷ್ಟಿಗೆ ವಿಪುಲ ಅವಕಾಶಗಳಿವೆ. ಇದರ ಸದ್ಬಳಕೆಯಾಗುವ ನಿಟ್ಟಿನಲ್ಲಿ ಪ್ರಚಾರ ಮಾಡಿ ಸೆಳೆಯುವ ಕೆಲಸ ಮಾಡಲಾಗುತ್ತದೆ ಎಂದ ಅವರು, ಕೊಡಗಿನಲ್ಲಿ ಪದವೀಧರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಕಣದಲ್ಲಿದ್ದು, ಗೆಲ್ಲುವ ವಿಶ್ವಾಸವಿದೆ. ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಎಸ್.ಎಲ್. ಭೋಜೇಗೌಡ ಅವರು ಈ ಬಾರಿಯೂ ಗೆಲ್ಲಲಿದ್ದಾರೆ. ಧನಂಜಯ ಸರ್ಜಿ ಸಾಮಾಜಿಕ ಕೆಲಸಗಳಿಂದ ಅವರೂ ವಿಜಯ ಸಾಧಿಸುವುದು ನಿಶ್ಚಯ ಎಂದು ಭವಿಷ್ಯ ನುಡಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಚಿಂತಕರ ಚಾವಡಿಯಾಗಿರುವ ಮೇಲ್ಮನೆಗೆ ಉತ್ತಮ ಚಿಂತನೆ ಹೊಂದಿರುವವರು ಪ್ರವೇಶಿಸಬೇಕು. ಧನಂಜಯ ಸರ್ಜಿ ಹಾಗೂ ಭೋಜೇಗೌಡ ಅವರು ಸಮರ್ಥ ಅಭ್ಯರ್ಥಿಗಳು ಎಂದರು.

ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚುರಂಜನ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಧನಂಜಯ ಸರ್ಜಿ ರಾಜಕೀಯ ಪ್ರವೇಶದಿಂದ ಮತ್ತಷ್ಟು ಸೇವೆ ಅವರಿಂದ ದೊರೆಯಲಿದೆ. ಹಾಗೆಯೇ ಭೋಜೇಗೌಡ ಅವರು ಕೂಡ ಶಿಕ್ಷಕರ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯಾಗಿದ್ದು, ಉತ್ತಮ ಸಂಸದೀಯ ಪಟು ಕೂಡ ಎಂದು ಪ್ರಶಂಸಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ರಾಜ್ಯ ಸರಕಾರ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ. ಸೂಕ್ತ ಅನುದಾನವಿಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ. ಕೋಮು ಸಂಘರ್ಷ ಹೆಚ್ಚುತ್ತಿದ್ದು, ತುಷ್ಟೀಕರಣ ನೀತಿ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡುವ ಕೆಲಸವಾಗಿದೆ. ಚನ್ನಗಿರಿಯಲ್ಲಿ ನಡೆದ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬAಧ ವೀಡಿಯೋ ಸಾಕ್ಷಾö್ಯಧಾರ ನೀಡಿದರೂ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಮಾತನಾಡಿ, ಪದವೀಧರ, ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ನೆಲ್ಲೀರ ಚಲನ್, ಮಹೇಶ್ ಜೈನಿ, ವಕ್ತಾರ ತಳೂರು ಕಿಶೋರ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ ಹಾಜರಿದ್ದರು.