ಮಡಿಕೇರಿ, ಮೇ ೨೯: ನಿರುದ್ಯೋಗ ಸಮಸ್ಯೆ ಹೋಗ ಲಾಡಿಸಿ ಉದ್ಯೋಗ ಸೃಷ್ಟಿ ಮಾಡಬೇ ಕೆಂಬ ಹೆಬ್ಬಯಕೆಯಿಂದ ಚುನಾವಣೆ ಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಶೇಖ್ ಬಾವ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಗಳಲ್ಲಿರುವ ಖಾಲಿ ಹುದ್ದೆ ಭರ್ತಿ ಮೂಲಕ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು. ಸರಕಾರಿ ನೇರ ಹಾಗೂ ಗುತ್ತಿಗೆ ಆಧಾರಿತ ನೇಮಕಾತಿಗಳಲ್ಲಿಯೂ ಕಡ್ಡಾಯ ವಾಗಿ ಮೀಸಲಾತಿ ಅನುಷ್ಠಾನ ಗೊಳಿಸಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು, ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೂ ಅರ್ಹ ವೇತನ ನೀಡಿ ಉದ್ಯೋಗಾ ರ್ಥಿಗಳಿಗೆ ಸೇವಾ ಭದ್ರತೆ ನೀಡುವುದು, ಪ್ರತಿ ತಾಲೂ ಕುಗಳಲ್ಲಿ ರಾಷ್ಟಿçÃಯ, ಅಂತರರಾ ಷ್ಟಿçÃಯ ಮಟ್ಟದ ಸಂಸ್ಥೆ ಮೂಲಕ ಉದ್ಯೋಗ ಮೇಳ ಏರ್ಪಡಿಸಿ ಉದ್ಯೋಗಾ ವಕಾಶ ಕಲ್ಪಿಸುವುದು, ‘ಕಲಿಕೆ ಯೊಂದಿಗೆ ಸಂಪಾದಿಸಿ’ ಎಂಬ ಯೋಜನೆಯನ್ನು ಕಾರ್ಯ ಗತಗೊಳಿಸುವುದು, ಗುತ್ತಿಗೆ ಆಧಾರದಲ್ಲಿ ನಿಯೋಜಿತಗೊಂಡ ಶಿಕ್ಷಕರನ್ನು ಖಾಯಂಗೊಳಿಸು ವುದರೊಂದಿಗೆ ತುಳು, ಕೊಡವ ಹಾಗೂ ಬ್ಯಾರಿ ಭಾಷೆಗಳಿಗೆ ಮಾನ್ಯತೆ ನೀಡುವ ಉದ್ದೇಶ ಹೊಂದಿದ್ದೇನೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹಂಸ ಹಾಜು, ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ರಫೀಕ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಎಸ್. ಕರೀಂ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶದ್ ಮಲರ್ ಹಾಜರಿದ್ದರು.