ಮಡಿಕೇರಿ, ಮೇ ೨೯: ೨೦೨೩-೨೪ನೇ ಸಾಲಿನಲ್ಲಿ ಆರ್.ಎಸ್.ಪಿ.ಡಿ. ಲೆಕ್ಕ ಶೀರ್ಷಿಕೆಯಡಿಯಲ್ಲಿ ಬೆಳೆಸಿರುವ ಸಸಿಗಳನ್ನು ೨೦೨೪ನೇ ಸಾಲಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಚಾಲ್ತಿಯಲ್ಲಿರುವ ಕಾನೂನು ನಿಯಮಗಳಿಗೆ ಅನುಸಾರ ವಾಗಿ ವಿತರಿಸಲು ಉದ್ದೇಶಿಸಲಾಗಿದ್ದು, ಅದರಂತೆ ವೀರಾಜಪೇಟೆ ವಿಭಾಗದ ತಿತಿಮತಿ, ವಲಯದ ಮಜ್ಜಿಗೆಹಳ್ಳ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲು ಬೆಳೆಸಲಾದ ೬x೯ ಗಾತ್ರದ ೭೫,೦೦೦, ೮x೧೨ ಗಾತ್ರದ ೫೦೦೦ ಸೇರಿ ಒಟ್ಟು ೮೦,೦೦೦ ಸಸಿಗಳು ದಾಸ್ತಾನಿಡಲಾಗಿದೆ.

ಆಸಕ್ತ ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳಾದ ಗುರುತಿನ ಚೀಟಿ, ಆರ್.ಟಿ.ಸಿ., ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಜೂ. ೧ ರಿಂದ ವಲಯ ಅರಣ್ಯ ಅಧಿಕಾರಿಗಳು, ತಿತಿಮತಿ ವಲಯ, ಇವರ ಕಚೆೆÃರಿಗೆ ತೆರಳಿ ಸಸಿಗಳನ್ನು ಪಡೆದುಕೊಳ್ಳುವಂತೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೆÉÃರಿ ಪ್ರಕಟಣೆ ತಿಳಿಸಿದೆ.