ಕಡಂಗ, ಮೇ ೨೯: ವೀರಾಜಪೇಟೆಯಿಂದ ನಾಪೋಕ್ಲುವಿಗೆ ಹೋಗುವಾಗ ಕಡಂಗದಿAದ ೪ ಕಿ.ಮೀ. ದೂರ ಸಾಗಿದಾಗ ಸಿಗುವ ಗ್ರಾಮ ಕುಂಜಲಗೇರಿ. ಈ ಗ್ರಾಮವು ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಕುಂಜಲಗೇರಿ ಗ್ರಾಮದಿಂದ ಕಾಕೋಟುಪರಂಬುವಿಗೆ ಒಂದು ಸಂಪರ್ಕ ರಸ್ತೆ ಇದ್ದು ಕೇವಲ ೫ ಕಿ.ಮೀ. ಇದೆ.

ಆದರೆ ಈ ರಸ್ತೆಯಲ್ಲಿ ಯಾವುದೇ ವಾಹನ ಚಲಾಯಿಸಲು ಸಾಧ್ಯವಿಲ್ಲದಂತೆ ದುಸ್ಥಿತಿಯಲ್ಲಿದೆ. ಇದರಿಂದಾಗಿ ನತದೃಷ್ಟ ಕುಂಜಲಗೇರಿ ಗ್ರಾಮದ ಜನರು ಗ್ರಾಮ ಪಂಚಾಯಿತಿಗೆ ಪ್ರಸ್ತುತ ಬೆಳ್ಳುಮಾಡು ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಬೆಕಾಗುತ್ತದೆ. ಕುಂಜಲಗೇರಿ, ಕಾಕೋಟುಪರಂಬು ಸಂಪರ್ಕ ಕಲ್ಪಿಸುವ ಮಂಡೆಟಿಕಡವು ರಸ್ತೆಯನ್ನು ದುರಸ್ತಿಗೊಳಿಸುವ ವಿಚಾರವಾಗಿ ಕಳೆದ ೧೪-೧೫ ವರ್ಷಗಳಿಂದ ಪ್ರತಿ ವರ್ಷ ಸತತವಾಗಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು ಹೀಗೆ ಎಲ್ಲಾ ರೀತಿಯ ಜನಪ್ರತಿನಿಧಿಗಳ ಬಳಿ ತೆರಳಿ ಅರ್ಜಿ ಸಲ್ಲಿಸಲಾಗಿದ್ದು, ಯಾರೂ ಕೂಡ ಸ್ಪಂದನ ನೀಡದಿರುವುದು ಕುಂಜಿಲಗೇರಿ ಗ್ರಾಮಸ್ಥರ ದುರದೃಷ್ಟ.

ಕಡಂಗ-ಪಾರಾಣೆ ಮುಖ್ಯ ರಸ್ತೆಯಲ್ಲಿ ಹೋಗುವಾಗ ಕುಂಜಲಗೇರಿಯ ವಲ್ಲಂಡ ಕೊಟ್ಟ್ ಎಂಬಲ್ಲಿ ಮುಖ್ಯ ರಸ್ತೆಯು ಸಹ ಈ ಕಚ್ಚಾ ರಸ್ತೆಯಿಂದ ಮಳೆಗಾಲದಲ್ಲಿ ಬರುವ ಕೆಸರಿನಿಂದ ದುಸ್ಥಿತಿಯಲ್ಲಿದ್ದು, ಎಲ್ಲ ಜನಪ್ರತಿನಿಧಿಗಳನ್ನು ಭೇಟಿ ಮಾಡಿದಾಗಲೂ ಭರವಸೆ ಅಷ್ಟೇ ನೀಡಿದ್ದಾರೆ ಎಂದು ಕುಂಜಲಗೇರಿ ಗ್ರಾಮಸ್ಥ ಗಿರೀಶ್ ರೈ ತಿಳಿಸಿದ್ದಾರೆ.

- ನೌಫಲ್ ಕಡಂಗ