ಮಡಿಕೇರಿ, ಮೇ ೨೯ : ಖಾತೆ ವರ್ಗಾವಣೆಗಾಗಿ ಲಂಚದ ಬೇಡಿಕೆಯೊಡ್ಡಿದ್ದ ಆರೋಪ ಹೊತ್ತು ಅಮಾನತ್ತುಗೊಂಡಿದ್ದ ಮಡಿಕೇರಿ ಉಪ ನೋಂದಣಾಧಿಕಾರಿ ಕಚೇರಿಯ ಸಬ್‌ರಿಜಿಸ್ಟಾçರ್ ಸೌಮ್ಯಲತಾ ಮರುನೇಮಕಗೊಂಡಿದ್ದಾರೆ.
ಮಾರ್ಚ್ ೨೦ ರಂದು ಕೋರಂಗಾಲದ ಕುಮಾರ್ ಎಂಬವರ ಜಾಗದ ವಿಚಾರದಲ್ಲಿ ಖಾತೆ ವರ್ಗಾವಣೆಗೆ ರೂ. ೫೦ ಸಾವಿರ ಲಂಚ ಬೇಡಿಕೆಯೊಡ್ಡಿ ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ಹರಿದತ್ ಮೂಲಕ ಹಣ ಪಡೆದ ಆರೋಪದಡಿ ಸೌಮ್ಯಲತಾ ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದರು. ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭ ಸೌಮ್ಯಲತಾ ಸಿಕ್ಕಿಬಿದ್ದಿರಲಿಲ್ಲ. ಹಣ ಪಡೆದ ಹರಿದತ್ ಬಲೆಗೆ ಬಿದ್ದಿದ್ದ. ಈ ಸಂಬAಧ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿ ಸೆರೆಸಿಕ್ಕಿದ್ದ ಹರಿದತ್ ಬಂಧನಗೊAಡ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಪರಾರಿಯಾಗಿದ್ದ ಸೌಮ್ಯಲತಾ ಕೆಲ ದಿನಗಳಲ್ಲಿಯೇ ಜಾಮೀನು ಪಡೆದುಕೊಂಡಿದ್ದರು. ಅನಂತರ ಲೋಕಾಯುಕ್ತ ಅಧಿಕಾರಿಗಳು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು.
ಸಾಕ್ಷö್ಯ ನಾಶಗೊಳಿಸುವುದು ಅಥವಾ ತನಿಖೆಗೆ ಅಡ್ಡಿಯಾಗಬಹುದೆಂಬ ಅಂಶದ ಮೇರೆಗೆ ಮೇ ೧೭ ರಂದು ಶಿಸ್ತು ಪ್ರಾಧಿಕಾರಿ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾಗಿರುವ ಡಾ.ಬಿ.ಆರ್. ಮಮತಾ ಅವರು ಸೌಮ್ಯಲತಾರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಲ್ಲದೆ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ
ಅಮಾನತ್ತುಗೊಂಡಿದ್ದ ಮಡಿಕೇರಿ ಸಬ್‌ರಿಜಿಸ್ಟಾçರ್ ಮರು ನೇಮಕ
(ಮೊದಲ ಪುಟದಿಂದ) ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ಎಚ್ಚರಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಬ್‌ರಿಜಿಸ್ಟಾçರ್ ಸೌಮ್ಯಲತಾ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆಎಸ್‌ಎಟಿ) ಯಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆಗೆ ಕೋರಿದ್ದರು. ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯ ಮಂಡಳಿ ಪೀಠ ಆದೇಶಕ್ಕೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಜೂ. ೨೪ಕ್ಕೆ ಮುಂದೂಡಿದೆ.
ಈ ಕುರಿತು ಜಿಲ್ಲಾ ಹೆಚ್ಚುವರಿ ಸಬ್‌ರಿಜಿಸ್ಟಾçರ್ (ಪ್ರಬಾರ) ವಿಜಯಲಕ್ಷಿö್ಮ ಅವರನ್ನು ‘ಶಕ್ತಿ’ ಪ್ರತಿಕ್ರಿಯೆ ಬಯಸಿದ ಸಂದರ್ಭ ಆದೇಶಕ್ಕೆ ತಡೆ ದೊರೆತಿರುವ ಕಾರಣ ಮರು ನೇಮಕಗೊಂಡು ಇಂದು ಕರ್ತವ್ಯ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.