ಮಡಿಕೇರಿ, ಮೇ ೨೯: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭ ವಾಗಿದ್ದು ಇದೀಗ ಜನತೆಯಲ್ಲಿ ಮತ್ತೆ ರಾಜಕೀಯ ಕೌತುಕ ಹೆಚ್ಚಾಗುತ್ತಿದೆ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತಸಮರ ನಡೆದಿತ್ತು. ಚುನಾವಣೆ ಮುಗಿದು ಇದೀಗ ಒಂದು ತಿಂಗಳು ದಾಟಿದ್ದು. ಮತ ಚಲಾವಣೆ ದಿನ ಬೆರಳಿಗೆ ಹಾಕಿದ ಶಾಹಿ ಗುರುತೂ ಕೂಡ ಮರೆಯಾದಂತಿದೆ. ಮತ ಚಲಾವಣೆಯ ಬಳಿಕ ಮತ ಎಣಿಕೆಯ ದಿನಕ್ಕೆ ಸುಮಾರು ೩೮ ದಿನಗಳ ಅಂತರವಿದ್ದ ಕಾರಣ ರಾಜಕೀಯ ಲೆಕ್ಕಾಚಾರಗಳು ಇದೀಗ ಮತ್ತು ಬಿರುಸು ಕಾಣುತ್ತಿದೆ. ಜೂನ್ ೪ರಂದು ಮತ ಎಣಿಕೆ ನಡೆಯಲಿದ್ದು, ಇನ್ನೇನು ಕೇವಲ ೬ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಸೋಲು-ಗೆಲುವಿನ ಚರ್ಚೆಗಳು ಇದೀಗ ಆರಂಭಗೊAಡಿವೆ. ರಾಜಕೀಯ ಪಕ್ಷಗಳು ಸೇರಿದಂತೆ ಅಭ್ಯರ್ಥಿಗಳು, ಮತದಾರರು ತಮ್ಮದೇ ವಿಶ್ಲೇಷಣೆಗಳ ಮೂಲಕ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಕೊಡಗು-ಮೈಸೂರು ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ಕಣದಲ್ಲಿದ್ದರೂ ನೇರ ಹಣಾಹಣಿ ಇರುವುದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಜವಂಶಸ್ಥರಾದ ಯಧುವೀರ್ ಹಾಗೂ ಕಾಂಗ್ರೆಸ್‌ನ ಹುರಿಯಾಳು ಎಂ. ಲಕ್ಷö್ಮಣ್ ಅವರುಗಳ ನಡುವೆ ಎಂಬದರಲ್ಲಿ ಎರಡು ಮಾತಿಲ್ಲ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದೊಂದಿಗೆ ಸೇರ್ಪಡೆಗೊಂಡ ಬಳಿಕ ಇದು ನಾಲ್ಕನೆಯ ಚುನಾವಣೆಯಾಗಿದೆ. ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಡಗೂರು ಎಚ್. ವಿಶ್ವನಾಥ್ ಲೋಕಸಭೆಗೆ ಪ್ರವೇಶಿಸಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಆದರೆ ಈ ಬಾರಿ ಪ್ರತಾಪ್ ಸಿಂಹ ಕಣದಲ್ಲಿಲ್ಲ. ನೇರ ಸ್ಪರ್ಧೆಯಲ್ಲಿರುವ ಇಬ್ಬರು ಅಭ್ಯರ್ಥಿಗಳೂ ಹೊಸಬರಾಗಿದ್ದಾರೆ. ಜತೆಗೆ ಈ ಕ್ಷೇತ್ರ ಈ ಹಿಂದಿನ ಚುನಾವಣೆಗಳಿಗಿಂತಲೂ ಈ ಬಾರಿ ‘ಹೈವೋಲ್ಟೇಜ್’ ಕ್ಷೇತ್ರವಾಗಿಯೂ ಮಾರ್ಪಟ್ಟಿದೆ. ಕಳೆದ ಚುನಾವಣೆ ಸಂದರ್ಭ ಇದ್ದ ರಾಜಕೀಯ ಸ್ಥಿತಿಗತಿಯೂ ಈ ಬಾರಿ ಬದಲಾಗಿದೆ. ಬಹುತೇಕ ಮೂರು ಚುನಾವಣೆಗಳಲ್ಲೂ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇದ್ದದ್ದು ಬಿಜೆಪಿಯ ಶಾಸಕರು. ಆದರೆ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರು ಚುನಾಯಿತರಾಗಿರುವುದು ಕೊಡಗಿನಲ್ಲಿ ಮಹತ್ತರ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿಗೆ ಬಹುಮತ ಒದಗಿಸಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಏನಾಗಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಕೊಡಗಿನಲ್ಲಿನ ಬಹುಮತ ಈ ತನಕದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿತ್ತು.
ಇದು ಈ ಬಾರಿಯೂಬಿಜೆಪಿಗೆ ಪರವಾಗಿ ಬರಲಿದೆಯೇ ಅಥವಾ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಕಾಂಗ್ರೆಸ್‌ನತ್ತ ವಾಲಲಿದೆಯೇ ಎಂಬ ಪ್ರಶ್ನೆ ಈಗಿನ ರಾಜಕೀಯ ಸನ್ನಿವೇಶದಲ್ಲಿನ ಬಿಸಿಬಿಸಿ ಚರ್ಚೆಯಾಗಿ ಮಾರ್ಪಟ್ಟಿದೆ. ಕೆಲವು ಕಡೆಗಳಲ್ಲಿ ಆಯಾ ಪಕ್ಷದ ಬೆಂಬಲಿಗರ ನಡುವೆ ‘ಬೆಟ್ಟಿಂಗ್’ ಕೂಡ ನಡೆಯುತ್ತಿದೆ ಎಂದೂ ತಿಳಿದುಬಂದಿದೆ. ಎಲ್ಲದಕ್ಕೂ ಜೂನ್ ೪ರಂದು ಉತ್ತರ ಸಿಗಲಿದೆ.
-ಶಶಿ