ಕೇರಳದಲ್ಲಿ ಮೇಘಸ್ಫೋಟ: ೧ ಗಂಟೆಯಲ್ಲಿ ೧೦೩ ಮಿ.ಮೀ. ಮಳೆ

ಕೊಚ್ಚಿ, ಮೇ ೨೯: ಕೇರಳದಲ್ಲಿ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವAತೆಯೇ ಕೊಚ್ಚಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೇವಲ ೧ ಗಂಟೆ ಅವಧಿಯಲ್ಲಿ ಬರೋಬ್ಬರಿ ೧೦೩ ಮಿ.ಮೀ. ಮಳೆ ಸುರಿದ ಪರಿಣಾಮ ಭಾರಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಮುಂದಿನ ೨೪ ಗಂಟೆಗಳಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿ ಮುಂದುವರಿಯುತ್ತದೆ ಮತ್ತು ಅದೇ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ನಡುವೆ ಕೇರಳದ ಕೊಚ್ಚಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇಲ್ಲಿ ಕೇವಲ ೧ ಗಂಟೆ ಅವಧಿಯಲ್ಲಿ ಬರೊಬ್ಬರಿ ೧೦೩ ಮಿ.ಮೀ. ಮಳೆ ಸುರಿದ ಪರಿಣಾಮ ಭಾರೀ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಳೆ ಮಾಪಕದಲ್ಲಿ ಕೇವಲ ಒಂದು ಗಂಟೆಯಲ್ಲಿ ಸುಮಾರು ೧೦೩ ಮಿ.ಮೀ. ಮಳೆ ದಾಖಲಾಗಿದೆ. ಈ ಪರಿ ಮಳೆಗೆ ಮೇಘಸ್ಫೋಟವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ರಾಜ್ಯದಲ್ಲಿ ಯಾವುದೇ ಮೇಘಸ್ಫೋಟವನ್ನು ಹವಾಮಾನ ಇಲಾಖೆ ದೃಢಪಡಿಸಿಲ್ಲವಾದರೂ ಒಂದು ಗಂಟೆಯಲ್ಲಿ ೧೦೩ ಮಿ.ಮೀ. ಮಳೆಯನ್ನು ದಾಖಲಿಸುವುದು ಸಾಮಾನ್ಯವಾಗಿ ಮೇಘಸ್ಫೋಟದ ಘಟನೆ ಎಂದು ವರ್ಗೀಕರಿಸುತ್ತದೆ ಎಂದು ಹೇಳಿದೆ. ಕೊಚ್ಚಿ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೇರಳದಾದ್ಯಂತ ಮಳೆ ಸಂಬAಧಿ ದುರಂತಗಳಲ್ಲಿ ೬ ಮಂದಿ ಸಾವನ್ನಪ್ಪಿದ್ದು, ತಿರುವನಂತಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು, ಆಲಪ್ಪುಳ, ಎರ್ನಾಕುಳಂ ಮತ್ತು ಕೋಟ್ಟಾಯಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಕಳಮಶ್ಶೇರಿ ಪ್ರದೇಶದಲ್ಲಿ ಸರಿಸುಮಾರು ಇನ್ನೂರು ಮನೆಗಳಿಗೆ ಮಳೆನೀರು ನುಗ್ಗಿದ್ದು, ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೆಹಲಿಯಲ್ಲಿ ದಾಖಲೆಯ ತಾಪಮಾನ

ನವದೆಹಲಿ, ಮೇ ೨೯: ದೆಹಲಿ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹೆಚ್ಚಿನ ತಾಪಮಾನವನ್ನು ಇಂದು ಕಂಡಿದೆ. ೫೨.೩ ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಝಳ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ ೮,೩೦೨ ಮೆಗಾ ವ್ಯಾಟ್(ಎಂಡಬ್ಲ್ಯು)ಗಳಿಗೆ ಏರಿಕೆಯಾಗಿದೆ. ಉಷ್ಣಾಂಶವನ್ನು ತಡೆದುಕೊಳ್ಳುವುದಕ್ಕಾಗಿ ನಿವಾಸಿಗಳು ವಿದ್ಯುತ್-ತೀವ್ರ ಹವಾ ನಿಯಂತ್ರಣವನ್ನು ಚಾಲೂ ಮಾಡುತ್ತಿದ್ದಾರೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ೫೧ ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ರಾಜಸ್ಥಾನದಲ್ಲಿ ಸುಡುಬೇಸಿಗೆ ಇದ್ದು, ಬಿಎಸ್‌ಎಫ್ ಯೋಧರು ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು ಬಲಿ

ಬಿಜಾಪುರ (ಛತ್ತೀಸ್‌ಗಢ), ಮೇ ೨೯: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊAದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ. ಬಳಿಕ ಇಬ್ಬರು ನಕ್ಸಲರ ಮೃತದೇಹಗಳು ಮತ್ತು ಶಸ್ತಾçಸ್ತçಗಳನ್ನು ಸ್ಥಳದಿಂದ ವಶಪಡಿಸಿ ಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ ೨೩ ರಂದು ನಾರಾಯಣಪುರ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯೊAದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರು ಸಾವಿಗೀಡಾಗಿದ್ದರು. ಏಪ್ರಿಲ್ ೩೦ ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ೧೦ ನಕ್ಸಲರು ಬಲಿಯಾಗಿದ್ದರು. ಅದಕ್ಕೂ ಮೊದಲು, ಏಪ್ರಿಲ್ ೧೬ ರಂದು ರಾಜ್ಯದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್‌ನಲ್ಲಿ ೨೯ ನಕ್ಸಲನ್ನು ಹೊಡೆದುರುಳಿಸಲಾಯಿತು.

ಜಾಮೀನು ಅವಧಿ ವಿಸ್ತರಣೆಗೆ ಕೇಜ್ರಿವಾಲ್ ಅರ್ಜಿ: ಸುಪ್ರೀಂಕೋರ್ಟ್ ನಕಾರ

ನವದೆಹಲಿ, ಮೇ ೨೯: ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಅರ್ಜಿಯನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್ ರಿಜಿಸ್ಟಾçರ್, ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅವರಿಗೆ ಸ್ವತಂತ್ರ ನೀಡಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹಠಾತ್ ತೂಕದಲ್ಲಿ ಏರಿಳಿತ ಮತ್ತು ಮೂತ್ರಪಿಂಡದ ಗಂಭೀರತೆ ಸೂಚಿಸುವ ಕೆಲವೊಂದು ಲಕ್ಷಣಗಳಿಂದಾಗಿ ಪಿಇಟಿ- ಸಿ ಸ್ಕಾö್ಯನ್ ಸೇರಿದಂತೆ ಕೆಲವೊಂದು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ತಮ್ಮ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ಕೇಜ್ರಿವಾಲ್ ಕೋರಿದ್ದಾರೆ. ಜೂನ್ ೨ ರ ಬದಲಿಗೆ ಜೂನ್ ೯ ರಂದು ಜೈಲಿನ ಅಧಿಕಾರಿಗಳ ಮುಂದೆ ಶರಣಾಗುವುದಾಗಿ ಮೇ ೨೬ ರಂದು ಸಲ್ಲಿಸಿರುವ ಹೊಸ ಅರ್ಜಿಯಲ್ಲಿ ದೆಹಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಕುಟುಂಬದ ೮ ಮಂದಿಯನ್ನು ಕೊಂದು ನೇಣಿಗೆ ಶರಣು!

ಮಧ್ಯಪ್ರದೇಶ, ಮೇ ೨೯: ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೊಡಲ್ ಕಚ್ಚರ್ ಎನ್ನುವ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅವಿಭಕ್ತ ಕುಟುಂಬವೊAದರಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ ಎಂದು ಮಹುಲ್‌ಜಿರಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿAದ ನೂರು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದ್ದು, ಛಿಂದ್ವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರಕರಣ ಸಂಬAಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆ ಹೊಂದಿರುವ ಈ ವ್ಯಕ್ತಿ ತನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚಿಂದ್ವಾರಾದ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಖತ್ರಿ ಹೇಳಿದ್ದಾರೆ.

ಜೂನ್ ೪ರ ನಂತರ ಭ್ರಷ್ಟರ ವಿರುದ್ಧ ಕ್ರಮ : ಪ್ರಧಾನಿ

ರಾಂಚಿ/ಕೋಲ್ಕತ್ತಾ, ಮೇ ೨೯: ಜಾರ್ಖಂಡ್‌ನ ದುಮ್ಕಾದಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಜೂನ್ ೪ ರ ನಂತರ ದೇಶದಲ್ಲಿ ಭ್ರಷ್ಟರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಪಶ್ಚಿಮ ಬಂಗಾಳದ ಅಶೋಕನಗರ, ಉತ್ತರ ೨೪ ಪರಗಣದಲ್ಲಿ ನಡೆದ ಮತ್ತೊಂದು ಪ್ರಚಾರ ಸಭೆಯಲ್ಲಿ, ಒಬಿಸಿಗಳ ನಂಬಿಕೆಗೆ ದ್ರೋಹ ಮಾಡಿದ್ದಕ್ಕಾಗಿ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ೭೭ ಮುಸ್ಲಿಂ ಸಮುದಾ ಯಗಳಿಗೆ ಒಬಿಸಿ ಪ್ರಮಾಣಪತ್ರ ನೀಡುವುದು ಅಸಾಂವಿಧಾನಿಕ ಎಂದು ಕೊಲ್ಕತ್ತಾ ಹೈಕೋರ್ಟ್ ಘೋಷಿಸಿದೆ. ಟಿಎಂಸಿ ಸರ್ಕಾರವು ಅಂಬೇಡ್ಕರ್ ಅವರ ಪರವಾಗಿ ನಿಂತಿದ್ದಕ್ಕೆ ವಿರುದ್ಧವಾಗಿ ಲಕ್ಷಾಂತರ ಒಬಿಸಿ ಯುವಕರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿದರು. ಜಾರ್ಖಂಡ್‌ನ ದುಮ್ಕಾದಲ್ಲಿ ಮಾತನಾಡಿದ ಅವರು, ಹಗರಣಗಳನ್ನು ಮುಂದುವರಿಸಲು ತಮ್ಮನ್ನು ಅಧಿಕಾರದಿಂದ ತೆಗೆದುಹಾಕಬೇಕೆಂದು ಕಾಂಗ್ರೆಸ್ ಮತ್ತು ಜೆಎಂಎA ಬಯಸಿವೆ. ಇಂಡಿಯಾ ಮೈತ್ರಿಕೂಟದ ನಾಯಕರು ಇದನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ನುಸುಳುಕೋರರಿಂದ ಬುಡಕಟ್ಟು ಹೆಣ್ಣುಮಕ್ಕಳನ್ನು ಗುರಿಯಾಗಿಸಲಾಗುತ್ತಿದೆ. ಅವರನ್ನು ಜೀವಂತವಾಗಿ ಸುಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ನಂತರ ಬಂಗಾಳದ ಪ್ರಚಾರ ಸಭೆಯಲ್ಲಿ, ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ ಸಿಎಂ ಹೇಳಿಕೆ ನೀಡಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ಮಮತಾ ಅವರು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಬೆಂಬಲಿಸುವುದಾಗಿ ಹೇಳಿದ್ದಕ್ಕಾಗಿ ಟೀಕಿಸಿದ ಪ್ರಧಾನಿ, ನೀವು ಸಿಪಿಎಂಗೆ ಒಂದು ಮತ ನೀಡಿದರೆ ಅದು ಟಿಎಂಸಿಗೆ ಹೋಗುತ್ತದೆ ಎಂದು ಅವರು ಹೇಳಿದರು.