ಸAದರ್ಶನ : ಕಾಯಪಂಡ

ಶಶಿ ಸೋಮಯ್ಯ

ಮಡಿಕೇರಿ, ಮೇ ೨೯: ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತ ಸಂದರ್ಭದಲ್ಲಿ ಹಾಗೂ ಶಾಸಕರಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರಗತಿ ಕುರಿತಾಗಿ ತಮ್ಮದೇ ಆದ ಹಲವು ಚಿಂತನೆಗಳನ್ನು ಮಾಡಿದ್ದು, ಪ್ರಗತಿಯ ಚಿಂತನೆಯ ಹಾದಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಕೆಲಸ ಕಾರ್ಯದ ಬಗ್ಗೆ ಜನರೂ ಪ್ರೀತಿ-ವಿಶ್ವಾಸ ತೋರಿದ್ದು, ಇದು ಇನ್ನಷ್ಟು ಹೆಚ್ಚುತ್ತಿರುವ ಸಂತಸ ತಮಗಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಹೇಳಿದ್ದಾರೆ.

ಶಾಸಕರಾಗಿ ಆಯ್ಕೆಗೊಂಡು ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ‘ಶಕ್ತಿ’ ಅವರನ್ನು ಸಂದರ್ಶಿಸಿದಾಗ ಶಾಸಕರು ತಮ್ಮ ಮನದಾಳವನ್ನು ಹಂಚಿಕೊAಡರು.

ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರಿಯಾಶೀಲರಾಗಿ ಸಂಚರಿಸಿ ಜನರ ಅಗತ್ಯತೆಗಳಿಗೆ, ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇನೆ. ಜನರೊಟ್ಟಿಗೆ ನಿಂತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ತಮ್ಮದು. ಶಾಸಕರಾಗಿ ನಿರ್ವಹಿಸಬೇಕಾದ ಕೆಲಸ ಕಾರ್ಯದೊಂದಿಗೆ ಇನ್ನಿತರ ರೀತಿಯಲ್ಲೂ ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಕೈಲಾದಷ್ಟು ಸಹಾಯ-ಸಹಕಾರ ನೀಡುತ್ತಿರುವುದಾಗಿ ಪೊನ್ನಣ್ಣ ಸಂತೃಪ್ತಿ ವ್ಯಕ್ತಪಡಿಸಿದರು.

ಪ್ರಾಮಾಣಿಕತೆ-ಬದ್ಧತೆ-ಕಠಿಣ ಪರಿಶ್ರಮದ ಮಂತ್ರದ ಆಧಾರದಲ್ಲಿ ತಾವು ಕೆಲಸ ನಿರ್ವಹಿಸಿಕೊಂಡು ಬರುತ್ತಿರುವುದಾಗಿ ಹೇಳಿದ ಅವರು, ಇದರಿಂದ ಜನರ ಒಲವೂ ಹೆಚ್ಚಾಗುತ್ತಿದೆ. ಎಲ್ಲೂ ತಮ್ಮ ಪ್ರಾಮಾಣಿಕತೆ, ಬದ್ಧತೆಯನ್ನು ಪ್ರಶ್ನಿಸಿಕೊಳ್ಳುವಂತಹ ರೀತಿಯಲ್ಲಿ ತಾವು ನಡೆದಿಲ್ಲ ಎಂದರು.

ಕಳೆದ ಅವಧಿಯ ಶಾಸಕರಿಗೂ ತಮಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದಿನ ಅವಧಿ ಶಾಸಕರು ಹಿರಿಯರಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದ ಅನುಭವವೂ ಇತ್ತು. ತಾನು ಈ ಸ್ಥಾನಕ್ಕೆ ಹೊಸಬನಾಗಿದ್ದು ಯಾವುದೇ ಟೀಕೆ ಟಿಪ್ಪಣಿ ಮಾಡಲಾರೆ, ಅವರ ಅವಧಿಯಲ್ಲಿ ಅವರೂ ಕೆಲಸ ಮಾಡಿದ್ದಾರೆ. ನಾನು ನನ್ನ ಕೆಲಸ ನಿರ್ವಹಿಸುತ್ತಿರುವೆ, ತೀರ್ಮಾನಗಳು ಜನತೆಗೆ ಬಿಟ್ಟ ವಿಚಾರ ಎಂದರು.

ತಮಗೆ ಕಾನೂನು ವಿದ್ಯೆಯ ನೆರವು, ಈ ಹಿಂದೆ ಅಡ್ವೋಕೇಟ್ ಜನರಲ್ ಆಗಿ ಕೆಲಸ ನಿರ್ವಹಿಸಿರುವುದು, ರಾಜ್ಯಮಟ್ಟದಲ್ಲಿನ ಆಡಳಿತಾತ್ಮಕವಾದ ಅನುಭವ ಇರುವುದು ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಲು, ಅಭಿವೃದ್ಧಿಗೆ ಸಹಕಾರವಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಅಧಿಕಾರಿಗಳ ಸ್ಪಂದನವೂ ಇದಕ್ಕೆ ಪೂರಕವಾಗಿವೆ ಇದರೊಂದಿಗೆ ಮುಖ್ಯವಾಗಿ ಆಡಳಿತದ ಮೇಲೆ ಹಿಡಿತವನ್ನು ಹೊಂದಿರುವುದು ಕ್ಷೇತ್ರದ, ಜಿಲ್ಲೆಯ ಪ್ರಗತಿಗೆ ಪ್ರಯೋಜನವಾಗುತ್ತದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿಯ ಬಗ್ಗೆ ಅಸಮಾಧಾನ

ಬಿಜೆಪಿ ಪಕ್ಷ ಬಹುತೇಕ ವಿಚಾರಗಳಲ್ಲಿ ಕೇವಲ ರಾಜಕಾರಣ ಮಾಡುತ್ತಿದೆ. ಜನಪರ ಕಾಳಜಿ ಇಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೊನ್ನಣ್ಣ ಅವರು ನಮ್ಮದು ಜನರಿಗೆ

(ಮೊದಲ ಪುಟದಿಂದ) ಬದುಕುಕಟ್ಟಿಕೊಡುವ ಪ್ರಯತ್ನವಾದರೆ, ಅವರದ್ದು ಭಾವನೆಗಳನ್ನು ಕೆರಳಿಸುವ ರಾಜಕಾರಣವಾಗಿದೆ ಎಂದರು. ವನ್ಯಜೀವಿ ಉತ್ಪನ್ನಗಳ ಹಿಂತಿರುಗಿಸುವಿಕೆ ವಿಚಾರದಲ್ಲಿ ಇದನ್ನು ವಾಪಸಾತಿ ಮಾಡಲು ಜನರಿಗೆ ಅವಕಾಶ ಕಲ್ಪಿಸಿರುವುದು ನಿಜ. ಆದರೆ ಇದನ್ನು ನಾನು ಸರಿ ಅನ್ನುವುದಿಲ್ಲ. ನಾನೇ ನೇರವಾಗಿ ಟೀಕೆ ಮಾಡಿರುವುದಲ್ಲದೆ ತಡೆಯಾಜ್ಞೆಯನ್ನೂ ತಂದಿದ್ದೇನೆ. ಬಿಜೆಪಿಯವರು ಈ ಬಗ್ಗೆ ಎಲ್ಲೂ ವ್ಯವಹರಿಸಿಲ್ಲ, ಇಷ್ಟಕ್ಕೂ ಈ ಕಾನೂನು, ಸುತ್ತೋಲೆ ಹಳೆಯದ್ದಾಗಿದ್ದು, ಕೇಂದ್ರದ ವಿಚಾರವೂ ಹೌದು ಎಂಬದನ್ನು ಅರ್ಥೈಸಿಕೊಳ್ಳಬೇಕಿದೆ. ಇದನ್ನು ಸರಿಪಡಿಸುವುದಾಗಿ ತಾವು ಹೇಳಿದ್ದು ಪ್ರಯತ್ನ ಮುಂದುವರೆದಿದೆ ಎಂದರು.

ಮರದ ವಿಚಾರ

ಇತ್ತೀಚೆಗೆ ಖಾಸಗಿ ಜಾಗದಲ್ಲಿ ವಾರಗಳ ಸರ್ವೆ ನಡೆಸಲು ಮುಂದಾಗಿದ್ದನ್ನು ನಿಲ್ಲಿಸಲಾಗಿದೆ. ಆದರೆ ಈ ವಿಚಾರವನ್ನು ಬಿಜೆಪಿ ತಪ್ಪಾಗಿ ಪ್ರತಿಬಿಂಬಿಸಿ ರಾಜಕೀಯ ಲಾಭಕ್ಕೆ ಯತ್ನ ನಡೆಸಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಸ್ತುತ ಯಾವುದೇ ವಿಚಾರಗಳು ಸಿಗದಿರುವುದರಿಂದ ಇಂತದ್ದನ್ನು ದೊಡ್ಡದು ಮಾಡಲಾಗುತ್ತಿದೆ. ತಮ್ಮ ಮೇಲೆ ಕಾನೂನು ಸಲಹೆಗಾರರಾಗಿದ್ದರೂ ಸುತ್ತೋಲೆಗಳು ಬರುತ್ತಿರುವ ಬಗ್ಗೆ ಆರೋಪ ಮಾಡುವುದು ಸಮಂಜಸವಲ್ಲ. ಸರಕಾರದ ಮೂಲಕವೂ ಆಡಳಿತಾತ್ಮಕವಾಗಿ ಕೆಲವಾರು ಕ್ರಮಗಳು ಆಗಿಂದಾಗ್ಗೆ ಆಗುತ್ತಿರುತ್ತದೆ. ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳ ಮೂಲಕ ಜಾರಿಯಾಗುವುದು ಸಾಮಾನ್ಯ. ಎಲ್ಲವನ್ನೂ ಕಾನೂನು ಸಲಹೆಗಾರರ ಗಮನಕ್ಕೆ ತಂದು ಮಾಡುವುದಿಲ್ಲ. ಕೆಲವು ಸಂದರ್ಭದಲ್ಲಿ ಅಗತ್ಯತೆ ಇದ್ದಾಗ ಮಾತ್ರ ಕಾನೂನು ಸಲಹೆ ಕೇಳುವುದು ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಜೀತದಾಳು ಎಂಬ ವಿಚಾರವನ್ನು ತಾವೇ ಮುಂದೆ ನಿಂತು ಸರಿಪಡಿಸಲಾ ಗಿದೆ. ಇದರಲ್ಲಿ ಸಂತ್ರಸ್ತರು ಎನಿಸಿಕೊಂಡವರು ತಮಗೆ ಅಭಿನಂದನೆ ಸಲ್ಲಿಸುತ್ತಾ ತಮ್ಮೊಂದಿಗಿದ್ದಾರೆ. ಆದರೆ ಇದನ್ನೂ ಬೇರೆ ಪಕ್ಷ ವಿಚಾರಾಂತರ ಮಾಡುವ ಪ್ರಯತ್ನ ನಡೆಸುತ್ತಿರುವುದಾಗಿ ಪೊನ್ನಣ್ಣ ಟೀಕಿಸಿದರು. ಕ್ಷೇತ್ರದ ಅಭಿವೃದ್ಧಿ-ಜನರ ಆಶೋತ್ತರಕ್ಕೆ ಸರಿಯಾಗಿ ಸ್ಪಂದಿಸಿ ಕೆಲಸ ನಿರ್ವಹಿಸುವುದು ತಮ್ಮ ಧ್ಯೇಯವಾ ಗಿದ್ದು, ಇದರಂತೆ ಮುಂದುವರಿಯುವುದಾಗಿಯೂ ಅವರು ಭರವಸೆಯಿತ್ತರು.