ಮಡಿಕೇರಿ, ಮೇ ೨೯: ಕರ್ನಾಟಕ ವಿಧಾನ ಪರಿಷತ್ತಿನ ದ್ವೆöÊವಾರ್ಷಿಕ ಚುನಾವಣೆಗೆ ಸಂಬAಧಿಸಿದAತೆ ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಇದೇ ಜೂನ್ ೩ ರಂದು ನಡೆಯಲಿದೆ.
ಅಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆಯಲಿದೆ. ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ ಸಂಬAಧ ಮತದಾನ ನಡೆಯುವ ಮತಗಟ್ಟೆ ವಿವರ ಇಂತಿದೆ. (ಕೊಡಗು ಜಿಲ್ಲೆಗೆ ಸಂಬAಧಿಸಿದAತೆ).
ಜಿಲ್ಲೆಯ ಮತಗಟ್ಟೆ ಸಂಖ್ಯೆ ೩೦-ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಮತಗಟ್ಟೆ ಸಂಖ್ಯೆ ೩೧-ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮತಗಟ್ಟೆ ಸಂಖ್ಯೆ ೩೨-ಮಡಿಕೇರಿ ನಗರಸಭೆ ಸಭಾಂಗಣ (ಬಲಭಾಗ), ಮತಗಟ್ಟೆ ೩೨ಎ- ನಗರಸಭೆ ಸಭಾಂಗಣ(ಎಡಭಾಗ), ಮತಗಟ್ಟೆ ೩೩-ವೀರಾಜಪೇಟೆ ಪುರಸಭೆ ಕಚೇರಿ, ಮತಗಟ್ಟೆ ಸಂಖ್ಯೆ ೩೪- ಪೊನ್ನಂಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಮತದಾನ ನಡೆಯಲಿದೆ.
ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲೆಯಲ್ಲಿ ಒಟ್ಟು ೧೫೭೮ ಮತದಾರರು ಇದ್ದು, ಇವರಲ್ಲಿ ೫೪೩ ಪುರುಷರು ಮತ್ತು ೧೦೩೫ ಮಹಿಳಾ ಮತದಾರರು ಇದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ೨೩೪, ಕುಶಾಲನಗರ ತಾಲೂಕಿನಲ್ಲಿ ೩೩೭, ಮಡಿಕೇರಿ ತಾಲೂಕಿನಲ್ಲಿ ೪೪೧, ವೀರಾಜಪೇಟೆ ತಾಲೂಕಿನಲ್ಲಿ ೨೬೮ ಮತ್ತು ಪೊನ್ನಂಪೇಟೆ ತಾಲೂಕಿನ ೨೯೮ ಮಂದಿ ಮತದಾರರು ಇದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲೆಯಲ್ಲಿ ಒಟ್ಟು ೩,೯೦೯ ಮತದಾರರು ಇದ್ದು, ಇವರಲ್ಲಿ ೧,೬೯೯ ಪುರುಷ ಮತ್ತು ೨೨೧೦ ಮಹಿಳಾ ಮತದಾರರು ಇದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೮೧೧, ಕುಶಾಲನಗರ ತಾಲೂಕಿನಲ್ಲಿ ೭೯೫, ಮಡಿಕೇರಿ ತಾಲೂಕಿನಲ್ಲಿ ೧೧೪೩, ವೀರಾಜಪೇಟೆ ತಾಲೂಕಿನಲ್ಲಿ ೬೩೦ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ೫೩೦ ಮಂದಿ ಮತದಾರರು ಇದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆ ಒಳಗೊಂಡಿದೆ.