ಕೂಡಿಗೆ, ಮೇ ೩೦: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಶಾಲನಗರ-ಹಾಸನ ಹೆದ್ದಾರಿಯ ಸಮೀಪದಲ್ಲಿರುವ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ರಥೋತ್ಸವವು ತಾ.೩೧ರಂದು (ಇಂದು) ನಡೆಯಲಿದೆ.

ದೊಡ್ಡಮ್ಮ ತಾಯಿಯು ಅವಳಿ ಗ್ರಾಮಗಳಾದ ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ಗ್ರಾಮ ದೇವತೆಯಾಗಿದ್ದು, ತಾ.೩೧ ರಂದು ೧೨ ಗಂಟೆಗೆ ರಾತ್ರಿ ಅವಳಿ ಗ್ರಾಮಗಳ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದು ನಂತರ ಅಲಂಕೃತವಾದ ಭವ್ಯ ರಥದಲ್ಲಿ ತಾಯಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ಎಳೆದುಕೊಂಡು ಬಂದು ದೊಡ್ಡಮ್ಮ ತಾಯಿ ಸನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಬಲಿಪೂಜೆಯು ನಡೆಯಲಿದೆ. ಮರು ದಿನ ದೇವಾಲಯದ ಆವರಣದಲ್ಲಿ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ದೊಡ್ಡಮ್ಮ ತಾಯಿ ದೇವಾಲಯ ಸಮಿತಿಯ ಅಧ್ಯಕ್ಷ ಪವನ್ ಕುಮಾರ್ ತಿಳಿಸಿದ್ದಾರೆ.