ಮಡಿಕೇರಿ, ಮೇ ೩೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ಕೊಡಗು ಜಿಲ್ಲಾ ಕಾರ್ಮಿಕರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ತಾ. ೨೭ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆವರೆಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ನುರಿತ ವೈದ್ಯರಿಂದ ಕಣ್ಣು, ಕಿವಿ, ಹೃದಯ, ಲಿವರ್, ಕಿಡ್ನಿಯ ಕಾರ್ಯ ಕ್ಷಮತೆಯನ್ನು ಮತ್ತು ಬಿ.ಪಿ., ಶುಗರ್ ಪರೀಕ್ಷೆ ನಡೆಯಿತು. ಅಲ್ಲದೇ ಅಗತ್ಯವಿರುವವರಿಗೆ ಔಷಧಿ ನೀಡಲಾಯಿತು. ಡಾ. ಜಿ.ಎಸ್. ಸಚಿನ್, ನೇತ್ರ ತ್ರಜ್ಞ ಪ್ರಕಾಶ್, ಶ್ರವಣ ತ್ರಜ್ಞ ಪಿ.ಹೆಚ್. ಮೋನಿಶಾ, ಲ್ಯಾನ್ಸಿ, ರೇಷ್ಮ ಪರ್ವೀನ್, ಟಿ.ಕೆ. ಮೋನಿಕಾ, ಟಿ.ಎಲ್. ಯಶ್ವಂತ್ ಶಿಬಿರವನ್ನು ನಡೆಸಿಕೊಟ್ಟರು.