ಐಗೂರು, ಮೇ ೩೧: ಕಿರುಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ನಗರದ ನಿವಾಸಿಗಳು ನೀರಿಗಾಗಿ ಎದುರಿ ಸುತ್ತಿದ್ದ ಸಮಸ್ಯೆ ಮನಗಂಡು ಐಗೂರು ಕೃಷಿ ಸಂಘ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುವ ಮೂಲಕ ನೆರವು ನೀಡಿದೆ. ಭಾರಿ ಗುಡುಗು, ಸಿಡಿಲಿನ ರಭಸಕ್ಕೆ ದುರ್ಗಾ ನಗರ ಭಾಗದ ಕುಡಿಯುವ ನೀರಿಗಾಗಿ ಉಪಯೋಗಿಸುವ ಎರಡು ಮೋಟಾರ್ ಯಂತ್ರಗಳು ಸುಟ್ಟು ಹೋಗಿದ್ದವು. ಗ್ರಾಮ ಪಂಚಾಯಿತಿಯಿAದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕಿರುಗಂದೂರು ಗ್ರಾಮ ಪಂಚಾಯಿತಿಯಿAದ ಗ್ರಾಮಸ್ಥರಿಗೆ ಏಳು ದಿನಗಳ ಕಾಲ ನೀರು ಸರಬರಾಜು ಮಾಡಲು ಸಾಧ್ಯವಾಗಲಿಲ್ಲ. ಈ ವಿಷಯವನ್ನರಿತ ಸ್ಥಳೀಯ ಐಗೂರು ಕೃಷಿ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯನಿರ್ವಹಣಾಧಿಕಾರಿ ಡಿಕ್ಕಿ ರಾಜು, ಕೃಷಿ ಸಂಘದ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಮಾಜಿ ಗ್ರಾ.ಪಂ. ಸದಸ್ಯ ಕೆ.ಪಿ. ಮುತ್ತಪ್ಪ ಕೃಷಿ ಸಂಘದ ಕೊಳವೆ ಬಾವಿಯಿಂದ ನೀರನ್ನು ಟ್ಯಾಂಕರಿಗೆ ತುಂಬಿಸಿ ಪಿಕಪ್ ಮೂಲಕ ದುರ್ಗಾ ನಗರ ಭಾಗದ ಜನರಿಗೆ ಪ್ರತಿದಿನ ನೀರು ಸರಬರಾಜು ಮಾಡುತ್ತಿದ್ದಾರೆ. ಸಂಘದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.