ಕಣಿವೆ, ಮೇ ೩೧: ತೋಟ ಹಾಗೂ ತೋಟದ ಮನೆಗೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಮುರಿೆದು ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕೃಷಿಕರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿರುವ ಪ್ರಸಂಗ ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಕಾಫಿ ಬೆಳೆಗಾರರಾದ ಕುಮುದಾ ಧರ್ಮಪ್ಪ ಅವರ ಮನೆಯ ಗೇಟನ್ನು ಧ್ವಂಸಗೊಳಿಸಿದ ಕಾಡಾನೆ ತೋಟದೊಳಗೆ ತೆರಳಿ ಅಡಿಕೆ, ತೆಂಗು, ಬಾಳೆ ಫಸಲನ್ನು ತುಳಿದು ಹಾಗೂ ತಿಂದು ಹಾಕಿದೆ. ಜೊತೆಗೆ ಕಾಫಿ ಗಿಡಗಳನ್ನು ಮುರಿದು ನಷ್ಟ ಪಡಿಸಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದಲೂ ಕಾಡಾನೆಗಳ ಹಾವಳಿ ಮಿತಿ ಮೀರುತ್ತಲೇ ಇದೆ. ದಿನಂಪ್ರತೀ ಈ ಭಾಗದ ಕಾಫಿ ತೋಟಗಳ ಫಸಲನ್ನು ಹಾನಿ ಪಡಿಸುತ್ತಲೇ ಇವೆ. ಹಾಗಾಗಿ ಅ ಕಾಡಾನೆಗಳ ಕಾಟದಿಂದಾಗಿ ಮನುಷ್ಯರ ಜೀವ ಉಳಿದರೆ ಸಾಕು ಎಂಬAತಾಗಿದೆ ಎಂದು ಅವರು ನೊಂದು ನುಡಿದರು.