ಚೆಯ್ಯಂಡಾಣೆ, ಮೇ ೩೦: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಚೆಯ್ಯಂಡಾಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ (ಸಿಪಿಎಲ್) ೨೦೨೪ರ ಚಾಂಪಿಯನ್ ಆಗಿ ರೆಡ್ ಬುಲ್ ಫೈಟರ್ಸ್ ತಂಡ ಹೊರಹೊಮ್ಮಿತು. ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ೨ ದಿನ ನಡೆದ ಪಂದ್ಯಾಟದಲ್ಲಿ ಒಟ್ಟು ೭ ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯವನ್ನು ರೆಡ್ ಬುಲ್ ಫೈಟರ್ಸ್ ತಂಡ ೩೧ ರನ್‌ಗಳ ಭಾರಿ ಅಂತರದಿAದ ಗೆಲುವನ್ನು ಸಾಧಿಸಿತು.

ಫೈನಲ್ ಪಂದ್ಯಾಟವನ್ನು ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎಸ್. ಪುಷ್ಪ ಬ್ಯಾಟ್ ಬೀಸುವುದರ ಮೂಲಕ ಉದ್ಘಾಟಿಸಿ ಪಂದ್ಯಾಟಕ್ಕೆ ಶುಭಕೋರಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಮುಂಡಿಯೋಳAಡ ಪ್ರವೀಣ್ ಈರಪ್ಪ, ಚೇನಂಡ ಕಾಳಪ್ಪ, ಚೆಯ್ಯಂಡ ನಂದ, ಸಿಪಿಎಲ್‌ನ ಪದಾಧಿಕಾರಿಗಳು ಮತಿತ್ತರರು ಹಾಜರಿದ್ದರು.

ವೈಯಕ್ತಿಕ ಬಹುಮಾನ ವಿಜೇತರು

ಪ್ಲೇಯರ್ ಆಫ್ ದಿ ಸೀರೀಸ್ ಆಗಿ ರೆಡ್ ಬುಲ್ ಫೈಟರ್ಸ್ ತಂಡದ ಮಜೀದ್ ಎಡಪಾಲ, ಬೆಸ್ಟ್ ಬ್ಯಾಟ್ಸ್ಮ್ಯಾನ್ ಹಾಗೂ ಟಾಪ್ ಸಿಕ್ಸರ್ ಆಗಿ ಜಿಟಿ ಬಾಯ್ಸ್ ತಂಡದ ದರ್ಶನ್, ಉತ್ತಮ ಬೌಲರ್ ಆಗಿ ರೆಡ್ ಬುಲ್ ಫೈಟರ್ಸ್ ತಂಡದ ಮಜೀದ್, ಬೆಸ್ಟ್ ವಿಕೆಟ್ ಕೀಪರ್ ಹಾಗೂ ಫೀಲ್ಡರ್ ಆಗಿ ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡದ ಜಲೀಲ್, ಎಮರ್ಜಿಗ್ ಪ್ಲೇಯರ್ ಆಗಿ ಜಿಟಿ ಬಾಯ್ಸ್ ತಂಡದ ಯಶ್ವಂತ್ ಬಹುಮಾನ ಪಡೆದುಕೊಂಡರು.

ಚಾAಪಿಯನ್ ರೆಡ್ ಬುಲ್ ಫೈಟರ್ಸ್ ತಂಡಕ್ಕೆ ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡಕ್ಕೆ ೨೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಅತಿಥಿಗಳು ವಿತರಿಸಿದರು. ಪಂದ್ಯಾಟದ ತೀರ್ಪುಗಾರರಾಗಿ ಅಮನ್ ಹಾಗೂ ಸುಹೈಲ್ ಕಾರ್ಯನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು ಪೊನ್ನಚಂಡ ಕಾಳಪ್ಪ ಹಾಗೂ ಬಿಪಿನ್ ಬೋಪಣ್ಣ ನಿರ್ವಹಿಸಿದರು.