ಕುಶಾಲನಗರ, ಮೇ ೩೦: ಜನ ಸಾಮಾನ್ಯರು., ಸಮಾಜದ ರಕ್ಷಣೆಗಾಗಿ., ಕಳ್ಳ ಖದೀಮರನ್ನು ಹಿಡಿದು ಸರಿಯಾದ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನದಲ್ಲಿ ರಕ್ಷಣಾ ಇಲಾಖೆಯನ್ನು ಸ್ಥಾಪಿಸಿದ್ದು ಮಹತ್ತರ ಜವಾಬ್ದಾರಿಯನ್ನು ನೀಡಲಾಗಿದೆ. ಈ ಇಲಾಖೆಯ ಒಂದು ಭಾಗವಾಗಿ ಪೊಲೀಸ್ ಇಲಾಖೆ ಕೂಡ ಕಾರ್ಯನಿರ್ವಹಿಸುತ್ತಿದೆ. ಹಗಲು-ರಾತ್ರಿಯೆನ್ನದೆ ಪೊಲೀಸರು ಸಮಾಜದ ಕಣ್ಗಾವಲಾಗಿರುತ್ತಾರೆ. ಆದರೂ ಕಳ್ಳ-ಖದೀಮರು ಪೊಲೀಸರ ಕಣ್ತಪ್ಪಿಸಿ ತಮ್ಮ ಕೈ ಚಳಕ ತೋರುತ್ತಾರಾದರೂ ಒಂದಲ್ಲ ಒಂದು ದಿನ ಅವರ ಅತಿಥಿಗಳಾಗುವದಂತೂ ದಿಟ..! ಇಷ್ಟೆಲ್ಲ ಕರಾರುವ ಕ್ಕಾಗಿರುವ ಪೊಲೀಸರ ಮನೆಗೇ ಕಳ್ಳರು ಕನ್ನ ಹಾಕಿರುವ ಪ್ರಸಂಗ ನಡೆದಿದೆ..!

ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಮನೆಗೆ ಕಳ್ಳರು ನುಗ್ಗಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಹಾಡ ಹಗಲೇ ಈ ಘಟನೆ ನಡೆದಿದ್ದು, ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ. ಸುನಿಲ್ ಎಂಬವರ ಮನೆಯ ಹಿಂಬಾಗಿಲು ಒಡೆದು ನುಗ್ಗಿದ ಕಳ್ಳರು ೧೫ ಸಾವಿರ ನಗದು ಮತ್ತು ೪೦ ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಸಮೀಪದ ಮನೆಯಲ್ಲಿ ಕೂಡ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆಗೆ ಸಂಬAಧಿಸಿದAತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಸಿಂಚು