ವೀರಾಜಪೇಟೆ, ಮೇ ೩೦: ಕಲ್ಲು ಕಪ್ ತಂಡದ ವತಿಯಿಂದ ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲಾ ಮೈದಾನದಲ್ಲಿ ಮೊದಲ ವರ್ಷದ ವಿಲೇಜ್ ಲೆವೆಲ್ ಸೂಪರ್ ನೈನ್ ಕ್ರಿಕೆಟ್ ಪಂದ್ಯಾಟ ನಡೆಯಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಕೊಡಗಿನ ಹಲವಾರು ಭಾಗಗಳಿಂದ ಒಟ್ಟು ೩೦ ತಂಡಗಳು ಭಾಗವಹಿಸಿದವು. ಫೈನಲ್ ಪಂದ್ಯದಲ್ಲಿ ಚಂಕ್ಸ್ ವೀರಾಜಪೇಟೆ ತಂಡವು ೩ ವಿಕೆಟ್ ನಷ್ಟದಲ್ಲಿ ೫ ಓವರ್ಗಳಿಗೆ ೬೬ ರನ್ಗಳನ್ನು ಭಾರಿಸಿ ಫ್ರೆಂಡ್ಸ್ ವೀರಾಜಪೇಟೆ ತಂಡವನ್ನು ಆಲ್ ಔಟ್ ಮಾಡುವುದರ ಮೂಲಕ ಚಂಕ್ಸ್ ವೀರಾಜಪೇಟೆ ತಂಡವು ೪೫ ರನ್ಗಳ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಪAದ್ಯಾಟದ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಶಾರುಖ್, ಮ್ಯಾನ್ ಆಫ್ ದಿ ಸಿರೀಸ್ ಇಚಾವೋ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ರಜಾಕ್, ಬೆಸ್ಟ್ ಬೌಲರ್ ಅಜಯ್, ಬೆಸ್ಟ್ ಕ್ಯಾಚ್ ಸಕ್ಲೇನ್, ಉತ್ತಮ ಕಾಮೆಂಟರಿ ಟ್ರೋಫಿಯನ್ನು ಉಣ್ಣಿ ಪೆರುಂಬಾಡಿ ಅವರು ಪಡೆದುಕೊಂಡರು
ಪAದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಆರ್.ಕೆ. ಸಲಾಂ, ಕಲ್ಲುಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿ ಫಾತಿಮಾ, ವೀರಾಜಪೇಟೆ ಪುರಸಭೆ ಸದಸ್ಯ ರಾಫಿ, ಕಾಂಗ್ರೆಸ್ ಮುಖಂಡ ರಾದ ಚೇಕು, ಅನಿಲ್ ಕುಮಾರ್ ಅಮ್ಮತ್ತಿ, ಉದ್ಯಮಿ ಹೇಮಂತ್, ಶಫೀಕ್, ಕೆವೈಎ ಅಧ್ಯಕ್ಷ ನೌಫಲ್, ಆಯೋಜಕರಾದ ನೂರುದ್ದೀನ್, ಹರ್ಷದ್, ಫಂಸಿರ್, ರಾಶಿ ಸೇರಿದಂತೆ ಇನ್ನಿತರರು ಹಾಜರಿದ್ದರು.