ಮುಳ್ಳೂರು, ಮೇ ೩೧: ಹೆಣ್ಣು ಮತ್ತು ಗಂಡು ಮಕ್ಕಳು ವೈಯಕ್ತಿಕ ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಕರೆ ನೀಡಿದರು.

ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಋತುಚಕ್ರ ಎಂಬ ತಿಂಗಳ ಪ್ರಕ್ರಿಯು ಪ್ರಮುಖವಾಗುತ್ತದೆ. ಹೆಣ್ಣಿನ ಋತುಚಕ್ರದಿಂದ ಶಿಶು ಜನಿಸುತ್ತದೆ. ಈ ನಿಟ್ಟಿನಲ್ಲಿ ಋತುಚಕ್ರದ ಬಗ್ಗೆ ಹೆಣ್ಣು ಮಕ್ಕಳು ಮುಜುಗರ ಪಡಬಾರದು. ಈ ಪ್ರಕಿಯೆಗೆ ಪ್ರತಿಯೊಬ್ಬರು ಹೆಣ್ಣಿಗೆ ಗೌರವ ಕೊಡಬೇಕು ಎಂದರು. ಋತುಚಕ್ರ ಎಂಬ ಎಂಬದು ಹೆಣ್ಣಿನ ಆರೋಗ್ಯಕ್ಕೆ ಸಂಬAಧಿಸಿದ ಗಂಭೀರ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣಿನ ಆರೋಗ್ಯ, ಬೆಳವಣಿಗೆ ದೃಷ್ಟಿಯಿಂದ ಹೆಣ್ಣಿಗೆ ೧೮ ವರ್ಷ ಮತ್ತು ಗಂಡಿಗೆ ೨೧ ವರ್ಷ ದಾಟಿದ ನಂತರ ವಿವಾಹ ಮಾಡಬೇಕು ಎಂದರು.

ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶೈಲಜಾ ಮಾತನಾಡಿ, ಹೆಣ್ಣಿನ ಜೀವಿತಾ ವಧಿಯಲ್ಲಿ ೪೫೦ ಬಾರಿ ಋತುಚಕ್ರ ವಾಗುತ್ತದೆ. ಋತುಚಕ್ರ ಸಂದರ್ಭ ರಕ್ತಸ್ರಾವವಾಗುವುದ್ದರಿಂದ ರಕ್ತಹೀನತೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ತರಕಾರಿ, ಸೊಪ್ಪು, ನಾರಿನಾಂಶ ಇರುವಂತಹ ತರಕಾರಿಯನ್ನು ಸೇವಿಸುವುದರಿಂದ ದೇಹದಲ್ಲಿ ಉತ್ತಮವಾದ ರಕ್ತ ಸಂಗ್ರಹವಾಗುತ್ತದೆ ಎಂದರು.

ಈ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹದಿಹರೆಯದ ಹೆಣ್ಣು ಮತ್ತು ಗಂಡು ಮಕ್ಕಳು ಮೊಬೈಲ್ ಬಳಕೆಯಿಂದ ದೂರ ಇರಬೇಕು. ಅಗತ್ಯಕ್ಕಾಗಿ ಮಾತ್ರ ಮೊಬೈಲ್ ಬಳಸಬೇಕು. ಅತಿಯಾಗಿ ಮೊಬೈಲ್ ಬಳಸುವುದರಿಂದ ನಿದ್ರಾಹೀನತೆ ಸಮಸ್ಯೆಯಾಗುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪರಿಣಾಮ ಬೀರುತ್ತದೆ ಎಂದರು. ಕಾರ್ಯ ಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಮೋಹನ್, ಸುರೇಂದ್ರ, ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕದ ಕಾರ್ಯಕ್ರಮ ಸಂಯೋಜಕಿ ಶೋಭ, ಉಪನ್ಯಾಸಕಿ ಆಶಿಕಾ, ಉಪನ್ಯಾಸಕ ಹೆಚ್.ಎಂ. ವಿವೇಕ್ ಹಾಜರಿದ್ದರು.