ಸಿದ್ದಾಪುರ, ಮೇ ೩೦: ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ಹಾಗೂ ಸಿದ್ದಾಪುರದ ಸಂಜೀವಿನಿ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಪಂಚಾ ಯಿತಿ ಸಭಾಂಗಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಆರ್.ಐ. ಹೆಚ್.ಪಿ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ತಜ್ಞ ವೈದ್ಯ ಡಾ. ಚಂದ್ರ ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಓ ಸೆಫೀಕ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಮುಖ್ಯ ಆರೋಗ್ಯವೇ ಭಾಗ್ಯ ಎಂದು ಹೇಳಿದರು.

ಶಿಬಿರದಲ್ಲಿ ತಪಾಸಣೆ ಮಾಡಿಸಿ ಕೊಂಡವರಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶುಕೂರ್, ಅಭಿತಾ, ಸಂಜೀವಿನಿ ಒಕ್ಕೂಟದ ಪ್ರಮುಖರಾದ ದೇವ ಜಾನು, ಎಂ.ಆರ್. ಪೂವಮ್ಮ, ಓಡಿಪಿ ಮಹಿಳಾ ಒಕ್ಕೂಟದ ವಲಯ ಅಧ್ಯಕ್ಷೆ ಜಾಯ್ಸಿ ಮಿನೇಜಸ್, ಆರ್.ಐ.ಹೆಚ್.ಪಿ. ಆಸ್ಪತ್ರೆಯ ವೈದ್ಯರು ಗಳಾದ ಡಾ. ನಿಚ್ಚಲ, ಡಾ. ಅಪೂರ್ವ ಪ್ರಸನ್ನ, ಡಾ. ಕೃಷ್ಣ ಪ್ರಸಾದ್ ಜಿ., ಆರ್.ಐ.ಹೆಚ್.ಪಿ. ಆಸ್ಪತ್ರೆಯ ಆಡಳಿ ತಾಧಿಕಾರಿ ಡಾ. ಶುಭ ಹಾಗೂ ಸಿಬ್ಬಂದಿ ಹಾಜರಿದ್ದರು. ಅನುಷ ಕಾರ್ಯಕ್ರಮ ನಿರೂಪಿಸಿದರು. - ವಾಸು