ಸೋಮವಾರಪೇಟೆ, ಮೇ ೩೦: ಬಿರು ಬೇಸಿಗೆಯ ದಿನಗಳ ನಂತರ ಎಲ್ಲೆಡೆ ಆಶಾದಾಯಕ ಮಳೆಯಾಗಿದ್ದು, ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಕಾಫಿ ತೋಟಗಳಲ್ಲಿ ಸ್ಥಗಿತಗೊಂಡಿದ್ದ ಕೆಲಸ ಇದೀಗ ಮಳೆಯಾಗುತ್ತಲೇ ಮತ್ತೆ ಆರಂಭಗೊAಡಿದ್ದು, ಕಾರ್ಮಿಕರ ಕೊರತೆಯ ನಡುವೆಯೂ ತೋಟಗಳಲ್ಲಿ ಬಿಡುವಿಲ್ಲದ ಕೆಲಸ ಕಾರ್ಯ ನಡೆಯುತ್ತಿದೆ.

ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ಭಾಗದ ಕಾಫಿ ತೋಟಗಳಲ್ಲಿ ವಿವಿಧ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಕಾಫಿ ಗಿಡಗಳು ತಮ್ಮ ಜೀವ ಚೈತನ್ಯವನ್ನು ಮರಳಿ ಪಡೆದುಕೊಂಡಿವೆ.

ಬಹುತೇಕ ಕಾಫಿ ತೋಟಗಳಲ್ಲಿ ನಿರುಪಯುಕ್ತ ಚಿಗುರು ತೆಗೆಯುವುದು, ಮರದ ರೆಂಬೆ ಕೊಂಬೆಗಳ ತೆರವು, ಕಾಫಿ ಗಿಡದ ಅನಾವಶ್ಯಕ ರೆಂಬೆಗಳ ತೆರವು, ಬುಡ ಬಿಡಿಸುವುದು, ಗೊಬ್ಬರ ಹಾಕುವುದು, ಕೀಟನಾಶಕ ಸಿಂಪಡಣೆ, ಕುಕ್ಕೆ ಗಿಡಗಳ ತಯಾರಿ, ಹೆಪ್ಪು ಗಿಡಗಳ ತಯಾರಿ.. ಹೀಗೆ ಹತ್ತಾರು ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ.

ತೋಟದಲ್ಲಿರುವ ಸಿಲ್ವರ್ ಹಾಗೂ ಇತರ ಕಾಡು ಜಾತಿಯ ಮರಗಳ ಕಪಾತಿಗೆ ಸ್ಥಳೀಯ ಕಾರ್ಮಿಕ ರೊಂದಿಗೆ ತಮಿಳುನಾಡು ಮೂಲದ ಕಾರ್ಮಿಕರನ್ನು ಬಳಸಿಕೊಳ್ಳ ಲಾಗುವುದು. ಮರ ಕಪಾತು ಮಾಡುವ ಮಂದಿ ತಮ್ಮ ಕುಟುಂಬದೊAದಿಗೆ ಆಗಮಿಸಿ

(ಮೊದಲ ಪುಟದಿಂದ) ಸ್ಥಳೀಯ ಲೈನ್‌ಮನೆಗಳಲ್ಲಿ ನೆಲೆಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿ ಸುತ್ತಿದ್ದಾರೆ. ಇನ್ನೇನು ಮಳೆಗಾಲ ಆರಂಭಗೊಳ್ಳುವಷ್ಟರಲ್ಲಿ ಕಾಫಿ ತೋಟಕ್ಕೆ ರಿಪೇರಿ ಗಿಡಗಳನ್ನು ಹಾಕಬೇಕಿದೆ. ಫಸಲು ರಹಿತ ಗಿಡಗಳು, ಈ ಬಾರಿಯ ಬಿಸಿಲಿಗೆ ನಾಶವಾದ ಗಿಡಗಳು, ಬೋರರ್ ಪೀಡಿತ ಗಿಡಗಳನ್ನು ತೆಗೆದು ಹೊಸದಾಗಿ ಗಿಡಗಳನ್ನು ಹಾಕಬೇಕಿದೆ. ಇದಕ್ಕಾಗಿ ೨ ವರ್ಷ ಪ್ರಾಯದ ಹೆಪ್ಪು ಗಳನ್ನು ಬೆಳೆಸಲಾಗಿದ್ದು, ಮಳೆ ಆರಂಭಗೊಳ್ಳುತ್ತಿದ್ದAತೆ ನೆಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು, ಮಳೆ ಮುಗಿಯುವ ಸಮಯಕ್ಕೆ ಕುಕ್ಕೆ ಗಿಡಗಳನ್ನು ಹಾಕಬೇಕಿದ್ದು, ಇದಕ್ಕಾಗಿ ಬುಟ್ಟಿ ತುಂಬಿಸಿ ಗಿಡಗಳನ್ನು ಶೆಡ್‌ಗಳಲ್ಲಿ ಬೆಳೆಸಲಾಗಿದೆ.

ಕಾರ್ಮಿಕರ ಕೊರತೆಯ ನಡು ವೆಯೂ ಕಾಫಿ ತೋಟಗಳಲ್ಲಿ ಭರದಿಂದ ಕೆಲಸ ಸಾಗುತ್ತಿವೆ. ಇರುವ ಕಾರ್ಮಿ ಕರಿಗೆ ಬೇಡಿಕೆ ಹೆಚ್ಚಿದೆ. ಕೆಲ ವರ್ಷಗಳ ಹಿಂದೆ ಕಾಫಿ ತೋಟದ ಕೆಲಸಗಳಿಗೆ ಬೇಕಾದಷ್ಟು ಕಾರ್ಮಿಕರು ಲಭ್ಯವಾಗು ತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾರ್ಮಿ ಕರ ಕೊರತೆ ಹೆಚ್ಚಾಗಿ ಬೆಳೆಗಾರರನ್ನು ಕಾಡುತ್ತಿದೆ. ಹಲವಷ್ಟು ಮಂದಿ ತೋಟ ನಿರ್ವಹಣೆ ಮಾಡಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.

ಕಾರ್ಮಿಕರ ಕೊರತೆ, ಅಧಿಕ ಕೂಲಿ, ಹೆಚ್ಚುತ್ತಿರುವ ಕೀಟನಾಶಕ, ರಸಗೊಬ್ಬರದ ಬೆಲೆ, ಕಾರ್ಮಿಕರ ಸಾಗಾಟಕ್ಕೆ ವಾಹನಗಳ ಕೊರತೆ, ಮಾರುಕಟ್ಟೆಯಲ್ಲಿ ಬೆಲೆಯ ಅನಿಶ್ಚಿತತೆ, ಕುಂಠಿತಗೊಳ್ಳುತ್ತಿರುವ ಇಳುವರಿ, ಹವಾಮಾನ ವೈಪರೀತ್ಯ, ನೀರಿನ ಅಭಾವ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದ್ದು, ಲಾಭ ಕಡಿಮೆಯಾಗುತ್ತಿದೆ. ಆದರೂ ಕಾಫಿ ತೋಟವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬೆಳೆಗಾರ ವರ್ಗವಿದೆ.

ಈ ಬಾರಿಯ ಬರಗಾಲದ ಪರಿಸ್ಥಿತಿಯಿಂದಾಗಿ ಹಲವಷ್ಟು ತೋಟಗಳಲ್ಲಿ ಕಾಫಿ ಗಿಡಗಳು ಒಣಗಿ ಭಾರೀ ನಷ್ಟವಾಗಿದೆ. ಸರ್ಕಾರ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ಕಾಫಿ ಕೃಷಿಯನ್ನು ವೃದ್ಧಿಸಲು ಉತ್ತೇಜನಕಾರಿ ಯೋಜನೆ ಗಳನ್ನು ಅನುಷ್ಠಾನಗೊಳಿಸಬೇಕೆಂದು ಹರಗ ಗ್ರಾಮದ ಕೃಷಿಕ ಶರಣ್ ಗೌಡ ಮನವಿ ಮಾಡಿದ್ದಾರೆ.