ವೀರಾಜಪೇಟೆ, ಮೇ ೩೦: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಸಮಿತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ರ‍್ಯಾಗಿಂಗ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಆಗುವ ಮಾನಸಿಕ ಹಿಂಸೆ ಹಾಗೂ ಅದಕ್ಕೆ ಕಾನೂನಿನ ಅಡಿಯಲ್ಲಿ ಬರುವ ಶಿಕ್ಷೆಯ ಬಗ್ಗೆ ವೀರಾಜಪೇಟೆಯ ಕ್ರೆöÊಂ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಗಿರುವ ಶ್ರೀ ಕೃಷ್ಣಕುಮಾರ್ ಅವರು ಕೂಲಂಕಷವಾಗಿ ಮಾಹಿತಿ ನೀಡಿದರು.

ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಅವರು ವಿದ್ಯಾರ್ಥಿ ಶಿಕ್ಷಕರೊಡನೆ ಸಂವಾದ ನಡೆಸಿ, ಅವರ ಎಲ್ಲಾ ಸಂದೇಹಗಳಿಗೆ ಸ್ಪಷ್ಟ ಉತ್ತರ ನೀಡಿದರು. ರ‍್ಯಾಗಿಂಗ್ ತಡೆಗಟ್ಟುವ ಸಮಿತಿಯ ಸಂಚಾಲಕಿ ಪದ್ಮಲತಾ ಸ್ವಾಗತಿಸಿ, ವಿದ್ಯಾರ್ಥಿ ಶಿಕ್ಷಕಿ ರೋಸ್ಲಿ ವಂದಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲೆ ಡಾ. ವಾಣಿ ಎಂ., ಬೋಧಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.