ಮಡಿಕೇರಿ, ಮೇ ೩೦: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ದಿನಗಣನೆ ಆರಂಭಗೊAಡಿದ್ದು, ಎಲ್ಲಾ ರೀತಿಯ ಸಿದ್ಧತೆಯೂ ಭರದಿಂದ ಸಾಗುತ್ತಿದೆ. ದೇಶದ ಎಲ್ಲೆಡೆ ತಾ. ೪ ರಂದು ಮತ ಎಣಿಕೆ ನಡೆಯಲಿದ್ದು, ಕೊಡಗು-ಮೈಸೂರು ಕ್ಷೇತ್ರಕ್ಕೆ ಸಂಬAಧಿಸಿದAತೆ ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಫಲಿತಾಂಶದ ಮೇಲೆ ಕೌತುಕ ಹೆಚ್ಚಾಗುತ್ತಿದೆ.

ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವಿನ ನೇರ ಹಣಾಹಣಿ ಕಂಡುಬAದಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ? ಎಂಬ ಪ್ರಶ್ನೆಗೆ ಉತ್ತರ ತಾ. ೪ ರಂದು ಸಂಜೆ ವೇಳೆಗೆ ಸ್ಪಷ್ಟವಾಗಲಿದೆ. ಮೈಸೂರು ಜಿಲ್ಲಾಡಳಿತದಿಂದ ಮತ ಎಣಿಕೆ ಶಾಂತಿಯುತವಾಗಿ ನಡೆಸುವ ಸಂಬAಧ ಅಗತ್ಯ ಕಾರ್ಯ ಚಟುವಟಿಕೆಯನ್ನು ಕೈಗೊಂಡಿದ್ದು, ಪ್ರಕ್ರಿಯೆಗೆ ಯಾವ ತೊಡಕೂ ಉಂಟಾಗದAತೆ ಎಚ್ಚರ ವಹಿಸಲಾಗಿದೆ.

ಮತದಾನ ಎಷ್ಟಾಗಿತ್ತು?

ಏ.೨೬ ರಂದು ಚುನಾವಣೆ ನಡೆದ ಬಳಿಕ ಕೊಡಗು-ಮೈಸೂರು ಕ್ಷೇತ್ರ ವ್ಯಾಪ್ತಿಗೆ ಬರುವ ಜಿಲ್ಲೆಯ ವೀರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರ ಸೇರಿದಂತೆ ೮ ಕ್ಷೇತ್ರಗಳ ಮತಪೆಟ್ಟಿಗೆಯನ್ನು ಡಿ-ಮಸ್ಟರಿಂಗ್ ನಡೆಸಿ ಮೈಸೂರಿನ ಮಹಾರಾಣಿ ಕಾಲೇಜಿಗೆ ರವಾನಿಸಿ ಸೂಕ್ತ ಭದ್ರತೆಯೊಂದಿಗೆ ಇರಿಸಲಾಗಿದೆ.

ಕೊಡಗು-ಮೈಸೂರು ಕ್ಷೇತ್ರದಲ್ಲಿ ಒಟ್ಟು ೨೦,೯೨,೨೨೨ ಮತಗಳ ಪೈಕಿ ೧೪,೭೭,೫೭೧ ಮತಗಳು ಚಲಾವಣೆ ಗೊಂಡಿವೆ. ಇದರಲ್ಲಿ ಮಡಿಕೇರಿ ಕ್ಷೇತ್ರದಿಂದ ೨,೩೮,೭೩೩ ಮತದಾರರ ಪೈಕಿ ೧,೮೦,೦೩೭ ಮತದಾರರು, ವೀರಾಜಪೇಟೆ ಕ್ಷೇತ್ರದಿಂದ ೨,೩೨,೦೩೩ ಪೈಕಿ ೧,೭೧,೪೨೬ ಮತದಾರರು ಹಕ್ಕು ಚಲಾವಣೆ ಮಾಡಿದ್ದರು. ಇದರೊಂದಿಗೆ ಕ್ಷೇತ್ರ ವ್ಯಾಪಿ ಒಟ್ಟು ೨೦೮೮ ಸೇವಾ ಮತದಾರರ ಪೈಕಿ ೧೦೧೨, ೧೦,೯೯೦ ಅಂಚೆ ಮತ ಪೈಕಿ ೮,೬೦೬ ಮತದಾರರು ಮತ ಹಾಕಿದ್ದರು.

ಬೆಳಿಗ್ಗೆ ೮ ಗಂಟೆಯಿAದ ಮತ ಎಣಿಕೆ

ಬೆಳಿಗ್ಗೆ ೮ ಗಂಟೆಯಿAದ ಮತ ಎಣಿಕೆ ಪ್ರಕ್ರಿಯೆಗಳು ಆರಂಭ ಗೊಳ್ಳಲಿದ್ದು, ಮೊದಲು ಸೇವಾ ಹಾಗೂ ಅಂಚೆ ಮತ ಎಣಿಕೆ ನಡೆಯಲಿದೆ.

(ಮೊದಲ ಪುಟದಿಂದ) ಇದಕ್ಕೂ ಮುನ್ನ ಬೆ. ೭.೩೦ಕ್ಕೆ ಭದ್ರತೆಯಲ್ಲಿಡಲಾದ ಮತಪೆಟ್ಟಿಗೆಗಳನ್ನು ನಿಯಮಾನುಸಾರ ಸಕ್ಷಮ ಅಧಿಕಾರಗಳ ಸಮ್ಮುಖದಲ್ಲಿ ತೆರೆಯಲಾಗುವುದು. ಈ ಸಮಯದಲ್ಲಿ ಅಭ್ಯರ್ಥಿಗಳ ಅಥವಾ ಅವರ ಪರ ಏಜೆಂಟರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತ್ಯೇಕ ವ್ಯವಸ್ಥೆ

ಸೇವಾ ಮತದಾರರು ಮತ್ತು ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ೨ ಕೊಠಡಿಗಳ ವ್ಯವಸ್ಥೆಯನ್ನು ಮೈಸೂರು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ. ಹುಣಸೂರು, ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ, ಪಿರಿಯಾಪಟ್ಟಣ, ವೀರಾಜಪೇಟೆ, ಮಡಿಕೇರಿ, ನರಸಿಂಹರಾಜ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದು ಕೊಠಡಿಯನ್ನು ಮೀಸಲಿಡಲಾಗಿದೆ.

ಮತಗಳ ಎಣಿಕೆಗಾಗಿ ಪ್ರತಿ ಕ್ಷೇತ್ರಕ್ಕೆ ೧೪ ಎಣಿಕೆ ಮೇಜುಗಳನ್ನು ಹಾಗೂ ಅಂಚೆ ಮತ ಪತ್ರ ಮತ್ತು ಸೇವಾ ಮತದಾರರ ಅಂಚೆ ಮತ ಪತ್ರಗಳ ಎಣಿಕೆಗೆ ೨೫ ಟೇಬಲ್‌ಗಳ ವ್ಯವಸ್ಥೆಗೆ ಭಾರತ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನು ಮೈಸೂರು ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯೂ ಆಗಿರುವ ಡಾ. ರಾಜೇಂದ್ರ ಸಲ್ಲಿಸಿದ್ದಾರೆ.

ಇ.ವಿ.ಎಂ. ಮತ ಎಣಿಕೆ ಮತ್ತು ಅಂಚೆ ಮತಪತ್ರ/ ಇ.ಟಿ.ಪಿ.ಬಿ.ಎಂ.ಎಸ್ ಮತ ಎಣಿಕೆ ಕಾರ್ಯಕ್ಕೆ ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು ೧೬೦ ಮತ ಎಣಿಕೆ ಮೇಲ್ವಿಚಾರಕರು, ೧೮೭ ಮತ ಎಣಿಕೆ ಸಹಾಯಕರು ಮತ್ತು ೧೭೧ ಮತ ಎಣಿಕೆ ಮೈಕ್ರೊಆಬ್ಸರ್‌ವರ್‌ಗಳನ್ನು ನೇಮಕಾತಿ ಮಾಡಲಾಗುತ್ತದೆ.

ಪಾಲಿಸಬೇಕಾದ ಸೂಚನೆಗಳು

ಪ್ರತಿ ಎಣಿಕೆ ಏಜೆಂಟರಿಗೆ ಭಾವಚಿತ್ರವುಳ್ಳ ಒಂದು ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದನ್ನು ಏಜೆಂಟರು ಕಡ್ಡಾಯವಾಗಿ ಧರಿಸಿಕೊಂಡಿರಬೇಕು. ಮತ ಎಣಿಕೆ ಮುಖ್ಯ ಪ್ರವೇಶದ್ವಾರದ ಬಳಿ ಫ್ರಿಸ್ಕಿಂಗ್ (ತಪಾಸಣೆ) ಮಾಡಲಾಗುವದು. ಪಾಸ್ ತೆಗೆದುಕೊಂಡು ಬರದೇ ಹೋದರೆ ಅಂತಹ ಏಜೆಂಟರನ್ನು ಮತ ಎಣಿಕೆ ಕೇಂದ್ರದ ಒಳಗಡೆ ಬಿಡುವುದಿಲ್ಲ. ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿAಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುವಂತಿಲ್ಲ. ಈ ಶಿಸ್ತನ್ನು ಪಾಲಿಸದೇ ಇರುವ ಏಜೆಂಟರನ್ನು ಯಾವುದೇ ಸಂದರ್ಭದಲ್ಲಿಯೂ ಚುನಾವಣಾಧಿಕಾರಿ ಯಾವುದೇ ಪೂರ್ವ ಮುನ್ಸೂಚನೆ ನೀಡದೆ ಹೊರಗೆ ಹಾಕುವ ಅಧಿಕಾರ ಹೊಂದಿರುತ್ತಾರೆ. ಪ್ರತಿಯೊಬ್ಬ ಎಣಿಕೆ ಏಜೆಂಟ್ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ಸಂಪೂರ್ಣ ಶಿಸ್ತು ಮತ್ತು ತಾಳ್ಮೆಯಿಂದ ವರ್ತಿಸಬೇಕು. ಏಜೆಂಟರು ಕೇವಲ ಪೆನ್ನು ಮತ್ತು ಹಾಳೆಯನ್ನು ತೆಗೆದುಕೊಂಡು ಬರಲು ಅವಕಾಶವಿದೆ. ಬರೆದುಕೊಳ್ಳಲು ನೋಟ್ ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ ೧೭-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ. ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್ ದಾಟಿ ಹೋಗಲು ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶ ನೀಡಲಾಗುವುದಿಲ್ಲ. ಮೊಬೈಲ್ ಫೋನ್ ಬಳಕೆಗೆ ಅವಕಾಶ ಇರುವುದಿಲ್ಲ. ಮೊಬೈಲ್ ಫೋನ್‌ಗಳನ್ನು ಸಂಗ್ರಹಣಾ ಕೌಂಟರ್‌ನಲ್ಲಿ ಇರಿಸಬೇಕಾಗಿರುತ್ತದೆ.

ನಿರ್ಬಂಧಿತ ವಿಚಾರಗಳು

ಮತ ಎಣಿಕೆ ಕೇಂದ್ರದೊಳಗೆ ಕತ್ತರಿ/ಚಾಕು ಅಥವಾ ಇನ್ನಿತರ ಹರಿತವಾದ ವಸ್ತು, ಲೈಟರ್, ಬೆಂಕಿ ಪೊಟ್ಟಣ, ಸ್ಫೋಟಕ ಸಾಮಗ್ರಿಗಳನ್ನು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಮೆರವಣಿಗೆೆ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದನ್ನು ನಿಷೇಧಿಸಿದೆ. ಧ್ವನಿವರ್ಧಕ ಡಿ.ಜೆ ಉಪಯೋಗಿಸುವುದು ಮತ್ತು ಬೈಕ್ ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದ್ದು,

ಮತ ಎಣಿಕೆ ಕೇಂದ್ರದ ಸುತ್ತ ೧೦೦ ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟಾçನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. (ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು/ ಸಿಬ್ಬಂದಿಗಳನ್ನು ಹೊರತುಪಡಿಸಿ)

ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟ್, ಎಣಿಕೆ ಏಜೆಂಟ್‌ಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆಯನ್ನು ನಿಷೇಧಿಸಲಾಗಿರುತ್ತದೆ. ಟಿ ಹೆಚ್.ಜೆ. ರಾಕೇಶ್