ಮಡಿಕೇರಿ, ಮೇ ೩೧: ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ತಿಲಕ್‌ನಗರ ಮೈಸೂರು ಇಲ್ಲಿ ೨ ವರ್ಷಗಳ ವಿಶೇಷ ಡಿ.ಎಡ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಈ ವಿಶೇಷ ಡಿ.ಎಡ್ ಕಾರ್ಯಕ್ರಮಗಳು ಸಾಮಾನ್ಯ ಡಿ.ಎಡ್‌ಗೆ ಸಮಾನವಾಗಿವೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೫೦ (ಎಸ್.ಸಿ-ಎಸ್.ಟಿ ಮತ್ತು ವಿಶೇಷಚೇತನ ವಿದ್ಯಾರ್ಥಿಗಳಿಗೆ ಶೇ. ೪೫) ಅಂಕಗಳೊAದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳು ಜೂನ್ ೧೦ ರೊಳಗೆ ಅರ್ಜಿ ಸಲ್ಲಿಸಬಹುದು.
ಈ ತರಬೇತಿಗೆ ಸಂಬAಧಿಸಿದ ವಿವರವಾದ ಮಾಹಿತಿ ಹಾಗೂ ಅರ್ಜಿ ನಮೂನೆ ಮೈಸೂರು ಜಿಲ್ಲಾ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಿಸುವ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಂಧ ಮಕ್ಕಳ ಬೋಧಕರ ತರಬೇತಿ ಕಾರ್ಯಕ್ರಮದಲ್ಲಿ ಎಸ್.ಸಿ-ಎಸ್.ಟಿ ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ ಯಾವುದೇ ಬೋಧನ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಎಸ್.ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಿಶೇಷಚೇತನ ವ್ಯಕ್ತಿಯಾಗಿದ್ದಲ್ಲಿ ಯುಡಿಐಡಿ ಗುರುತಿನ ಪತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು (ತರಬೇತಿ) ಸರ್ಕಾರಿ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ತಿಲಕ್‌ನಗರ, ಮೈಸೂರು ಇವರ ದೂರವಾಣಿ ಸಂಖ್ಯೆ. ೦೮೨೧-೨೪೯೧೬೦೦, ೨೯೫೯೬೦೦, ೯೧೧೩೫೬೧೬೨೦ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.