ದೇಶದಲ್ಲಿ ಕೂಡು ಕುಟುಂಬಗಳು ಮರೆಯಾಗತೊಡಗಿ, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚತೊಡಗಿದಂತೆ, ಸಮಸ್ಯೆಯೊಂದು ಉಲ್ಬಣಿಸತೊಡಗಿದೆ. ಆಧುನೀಕರಣದ ಭರದಲ್ಲಿ, ವಿಭಕ್ತ ಕುಟುಂಗಳಲ್ಲಿ (ಓuಛಿಟeಚಿಡಿ ಈಚಿmiಟಥಿ), ಗಂಡ-ಹೆAಡತಿ ಮತ್ತು ಮಕ್ಕಳು ಎಂಬಷ್ಟಕ್ಕೇ ಕುಟುಂಬದ ಪರಿಕಲ್ಪನೆ ಸೀಮಿತವಾಗತೊಡಗಿದೆ. ದಂಪತಿಗೆ ತಮ್ಮ ತಂದೆ-ತಾಯಿ, ಅತ್ತೆ-ಮಾವ, ಅಜ್ಜ-ಅಜ್ಜಿ ಹೊರೆಯಾಗತೊಡಗಿದಂತೆ ಪರಿಭಾವಿಸುವ ಸನ್ನಿವೇಶ ಗೋಚರವಾಗತೊಡಗಿದೆ.

ಇದರಿಂದ, ಜೀವನದಲ್ಲಿ ತಾವು ಪಟ್ಟಿರುವ ಸಂಕಷ್ಟಗಳು ಮಕ್ಕಳಿಗೆ ಎದುರಾಗದಿರಲಿ, ಅವರ ಜೀವನ ಸುಖಮಯವಾಗಿರಲಿ ಎಂದು ತಮ್ಮ ಜೀವ-ಜೀವನವನ್ನೇ ಒತ್ತೆ ಇಟ್ಟ ಪೋಷಕರು, ವೃದ್ಧಾಪ್ಯದಲ್ಲಿ ನೆಲೆಗಾಗಿ ವೃದ್ಧಾಶ್ರಮಗಳಿಗೆ ಎಡತಾಕುತ್ತಿರುವ ಸನ್ನಿವೇಶ ಸಾಮಾನ್ಯವಾಗತೊಡಗಿದೆ.

ಜೀವನದಲ್ಲಿ ‘ಬಾಲ್ಯ’ ಮತ್ತು ‘ವೃದ್ಧಾಪ್ಯ’ ಅವಲಂಬನೆಯ ಘಟ್ಟಗಳು. ತಮ್ಮ ಏಳಿಗೆಗೆ ಜೀವನ ಮುಡಿಪಿಟ್ಟು, ತಮ್ಮ ‘ಬಾಲ್ಯ’ವನ್ನು ಜೋಪಾನವಾಗಿಸಿದ ಪೋಷಕರ ‘ವೃದ್ಧಾಪ್ಯ’ ಸಂತಸಮಯವಾಗಿಸುವ ಹೊಣೆಗಾರಿಕೆ ತಮ್ಮದೆಂಬುದನ್ನು ಮಕ್ಕಳು ನಿಭಾಯಿಸದಾದಾಗ, ವೃದ್ಧಾಪ್ಯದಲ್ಲಿ ಒಂಟಿತನ ಕಾಡತೊಡಗುತ್ತದೆ.

ಕೆಲವು ಕುಟುಂಬಗಳಲ್ಲಿ ಮಕ್ಕಳೆಲ್ಲರೂ ವಿದ್ಯಾವಂತರಾಗಿ, ಸ್ಥಿತಿವಂತರಾಗಿ, ಸಂಸಾರಿಗಳಾಗಿ ಪರ ಊರುಗಳಲ್ಲಿ ನೆಲೆಸಿ ಊರಿನತ್ತ ಮುಖ ಮಾಡುವುದೂ ಅಪರೂಪ. ಇಂತಹ ಸನ್ನಿವೇಶಗಳಲ್ಲಿ ಪೋಷಕರಿಗೆ ಎಲ್ಲವೂ ಇದ್ದರೂ, ಒಂಟಿತನ, ಖಿನ್ನತೆ, ಎಲ್ಲವನ್ನೂ ಕಳೆದುಕೊಂಡ ಭಾವ ಆವರಿಸುವುದು ಸಹಜ.

ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ ಯುವ ಜನರ ಸಂಖ್ಯೆ ಹೆಚ್ಚು. ೬೦ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ ೧೬ ಕೋಟಿಯಷ್ಟಿದೆ. ೨೦೫೦ ರ ವೇಳೆಗೆ ಇವರ ಸಂಖ್ಯೆ ಸುಮಾರು ೩೨ ಕೋಟಿಗೂ ಹೆಚ್ಚಲಿದೆ. ಆಗ ಸರಾಸರಿ ಪ್ರತಿ ೫ ಮಂದಿ ಭಾರತೀಯರಲ್ಲಿ ಒಬ್ಬ ಹಿರಿಯ ನಾಗರಿಕ ಇರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಈಗಿರುವ ೧೬ ಕೋಟಿ ಹಿರಿಯ ನಾಗರಿಕರಲ್ಲಿ ಸುಮಾರು ೨ ಕೋಟಿ ಹಿರಿಯ ನಾಗರಿಕರು ನಿರಾಶ್ರಿತರಾಗಿದ್ದಾರೆ ಎಂದು ಜನಸಂಖ್ಯೆ ಅಂದಾಜಿಸುವ ತಾಂತ್ರಿಕ ಸಮೂಹದ ವರದಿಯೊಂದು ತಿಳಿಸಿದೆ. ಇದು ಕಳವಳಕಾರಿ ಬೆಳವಣಿಗೆ.

ಹೀಗೆ ಅನಾದರಕ್ಕೊಳಗಾಗಿ ರುವವರ ಲಾಲನೆ-ಪಾಲನೆ, ಆಹಾರ, ಆಶ್ರಯ, ಆರೋಗ್ಯ, ಸಾಮಾಜಿಕ ಭದ್ರತೆ, ಮಾನಸಿಕ ಸಮತೋಲನದ ಪ್ರಶ್ನೆ ಎದುರಾದಾಗ, ಮನಗಳಲ್ಲಿ ಕಳವಳ ಮೂಡುತ್ತದೆ. ವೃದ್ಧಾಶ್ರಮಗಳಲ್ಲಿ ನೆಲೆಕಂಡುಕೊಳ್ಳಬಹುದೇನೋ ಎಂದು ಭಾವಿಸಿದರೆ, ದೇಶದಲ್ಲಿ ಇರುವ ವೃದ್ಧಾಶ್ರಮಗಳ ಸಂಖ್ಯೆಯೂ ಒಂದು ಸಾವಿರಕ್ಕೂ ಕಡಿಮೆ!

ಕೆಲವು ಸಮಾಜ ಸೇವಾ ಸಂಸ್ಥೆಗಳ ವೃದ್ಧಾಶ್ರಮಗಳಲ್ಲಿ ಮಾತ್ರ ಮನೆಯ ಮಾದರಿಯ ಆರೈಕೆ, ಆರೋಗ್ಯ ಕಾಳಜಿ, ಮನರಂಜನೆಯೊAದಿಗೆ ನೆಮ್ಮದಿಯ ಪರಿಸರ ಕಾಣಬಹುದು. ಕೆಲವು ವೃದ್ಧಾಶ್ರಮಗಳು ಉಚಿತ ಸೇವೆ ನೀಡಿದರೆ, ಇನ್ನುಳಿದವು ಶುಲ್ಕ ಭರ್ತಿ ಮಾಡಿದರೆ ಸೌಲಭ್ಯ ಒದಗಿಸುತ್ತವೆ. ಹೆಚ್ಚಿನ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತದೆ.

ಹಿರಿಯ ನಾಗರಿಕರಲ್ಲಿ ದೃಷ್ಟಿ ದೋಷ, ಶ್ರವಣದೋಷ, ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಯಕೃತ್ತು, ಮೂತ್ರಪಿಂಡಗಳ ಸಮಸ್ಯೆ ಸಾಮಾನ್ಯ ವಾಗಿ ವಯೋಸಹಜ ಎಂಬAತಿರುತ್ತದೆ. ಮನೆ ಮಂದಿಯ ಆರೈಕೆ ಇದ್ದರೆ, ಇಂತಹ ಸನ್ನಿವೇಶ ದಲ್ಲೂ ಜೀವನದಲ್ಲಿ ಇಳಿಹೊತ್ತಿನಲ್ಲಿ ತುಸು ನೆಮ್ಮದಿ ಇರುತ್ತದೆ.

ಜೀವನದ ಕೊನೆಗಾಲದಲ್ಲಿ ಮಗ-ಸೊಸೆ, ಮಗಳು-ಅಳಿಯ, ಮೊಮ್ಮಕ್ಕಳೊಂದಿಗೆ ಹಾಯಾಗಿ ಕಳೆಯಬಹುದು ಎನ್ನುವುದು ಪೋಷಕರ ಸಹಜ ಬಯಕೆ. ಆದರೆ ತಾವೇ ಕುಟುಂಬಕ್ಕೆ ಹೊರೆ ಎನ್ನುವ ಸನ್ನಿವೇಶ ಎದುರಾದರೆ, ಸಾಮಾಜಿಕ ಪ್ರತಿಷ್ಠೆ, ಆರ್ಥಿಕ ಭದ್ರತೆ ಇಲ್ಲದೆ, ನಿಂತ ನೆಲ ಕುಸಿದ ಅನುಭವವಾಗತೊಡಗುತ್ತದೆ.

ಪೋಷಕರಿಗೆ ಇಂತಹ ಸನ್ನಿವೇಶ ಎದುರಾಗಿಸಿದರೆ, ಭವಿಷ್ಯದಲ್ಲಿ ತಮಗೂ ಇಂತಹ ಸನ್ನಿವೇಶ ಎದುರಾಗಬಹುದು ಎಂಬ ಮುಂದಾಲೋಚನೆ, ಸೂಕ್ಷö್ಮ ಪ್ರಜ್ಞೆ ಮಕ್ಕಳಲ್ಲಿ ಇದ್ದರೆ, ಪೋಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಪರಿಪಾಟ ಕಡಿಮೆ ಆಗಬಹುದು. ವಿಶೇಷ ಆರೈಕೆ ಅಗತ್ಯವಾಗಿರುವ ಸನ್ನಿವೇಶದಲ್ಲಿ, ಹಿರಿಯ ನಾಗರಿಕರ ಮಾನಸಿಕ ತೊಳಲಾಟ ತಪ್ಪಬಹುದು. ಪೋಷಕರಿಗೂ ಘನತೆಯ ಬದುಕು ದೊರಕಿಸಬಹುದು. ಕುಟುಂಬ, ಸಮಾಜ ಮತ್ತು ದೇಶಕ್ಕೆ ಅವರು ಸಲ್ಲಿಸಿರುವ ಕೊಡುಗೆ ಗುರುತಿಸಿದಂತಾಗುತ್ತದೆ.

ನಮ್ಮನ್ನೇ ತಮ್ಮ ಆಸ್ತಿ ಎಂದು ಬೆಳೆಸಿ ಪೋಷಿಸಿದ ನಮ್ಮ ಪೋಷಕರನ್ನೇ ನಮ್ಮ ಆಸ್ತಿಯಾಗಿಸಿಕೊಳ್ಳೋಣ. ಇಂದು ಜಾಗತಿಕ ಪೋಷಕರ ದಿನಾಚರಣೆ. (ಉಟobಚಿಟ ಆಚಿಥಿ oಜಿ Pಚಿಡಿeಟಿಣs) ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಅನುಗುಣವಾಗಿ ೨೦೧೨ ರಿಂದ ಜೂನ್ ೧ ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ಭವಿಷ್ಯ ರೂಪಿಸಿ ಜೀವನ ಬೆಳಗಿದ ಹಿರಿಯ ಚೇತನಗಳಿಗೆ ಕೃತಜ್ಞತೆ ಸಲ್ಲಿಸೋಣ. ಪೋಷಕರಿಲ್ಲವೆಂದು ಪರಿತಪಿಸುವವರ ಬಗ್ಗೆಯೂ ಚಿಂತಿಸೋಣ.

ನಮ್ಮ ಬಾಲ್ಯದಲ್ಲಿ ಪೋಷಕರು ಕೆಲವು ನಿರ್ಧಾರಗಳನ್ನು ತಪ್ಪಾಗಿ ತೆಗೆದುಕೊಂಡಿದ್ದಾರೆ ಎಂದು ಆ ಸಂದರ್ಭಗಳಲ್ಲಿ ರೇಗಾಡಿರುತ್ತೇವೆ. ನಾವು ಬೆಳೆದು, ಮಕ್ಕಳ ಪೋಷಕರಾಗಿ ನಿರ್ಧಾರ ತೆಗೆದುಕೊಳ್ಳುವಾಗ, ನಮ್ಮ ಪೋಷಕರು ಅಂದು ತೆಗೆದುಕೊಂಡ ನಿರ್ಧಾರಗಳು ಸರಿ ಅನ್ನಿಸುತ್ತವೆ. ಹಾಗನ್ನಿಸಿದರೆ, ಈ ಸಂದರ್ಭದಲ್ಲಿ ಪೋಷಕರಿಗೆ ಅದನ್ನು ತಿಳಿಸೋಣ. ಅವರಿಗೂ ಸಂತಸವಾಗುತ್ತದೆ. ಏನೇ ಇರಲಿ ನಮ್ಮ ಪೋಷಕರನ್ನು ಖುಷಿಯಾಗಿಡೋಣ.

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.