ಟಿ ಹೆಚ್.ಜೆ. ರಾಕೇಶ್
ಮಡಿಕೇರಿ, ಮೇ ೩೧: ದೇಶದಲ್ಲಿ ಆನ್ಲೈನ್ ವಂಚನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಖಾತೆಯಿಂದ ಹಣ ಮಂಗಮಾಯವಾಗುತ್ತಿದೆ. ಮೊದಲೆಲ್ಲಾ ಓಟಿಪಿ ಕೇಳಿ, ಸಂದೇಶ ಕಳುಹಿಸಿ, ಕರೆ ಮಾಡಿ ದಾಖಲೆಗಳನ್ನು ಪಡೆದು ‘ಸ್ಕಾö್ಯಮ್’ ಮಾಡಿ ಹಣ ಲಪಟಾಯಿಸುತ್ತಿದ್ದ ವಂಚಕರ ಜಾಲ, ಇದೀಗ ಜನರ ‘ವಾಟ್ಸಾö್ಯಪ್’ಗೆ ಬ್ಯಾಂಕ್ನಿAದ ಸಂದೇಶ ರವಾನಿಸಿದಂತೆ ಮಾಡಿ ಹಣ ಎಗರಿಸುವ ಹಂತಕ್ಕೆ ತಲುಪಿದೆ.
ಎಷ್ಟೇ ಈ ರೀತಿ ಪ್ರಕರಣಗಳು ನಡೆಯುತ್ತಲ್ಲಿದ್ದರೂ ಇದಕ್ಕೆ ಕೊನೆ ಹೇಳಲು ಸಾಧ್ಯವಾಗದ ಸಂದಿಗ್ದತೆಯೂ ಇದೆ. ಅಧುನಿಕತೆ ಬಳಸಿಕೊಂಡು ಖಾಕಿ ಪಡೆಯ ಕೈಗೆ ಸಿಗದೆ ವಂಚಕರು ಹಣ ದೋಚುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹಲವು ‘ಆನ್ಲೈನ್ ದೋಖಾ’ ಘಟನೆಗಳು ಸಂಭವಿಸಿ ತನಿಖೆ ಹಂತದಲ್ಲಿವೆೆ. ಇದೀಗ ವಂಚಕ ಜಾಲವೊಂದು ವೃದ್ಧರೊಬ್ಬರಿಗೆ ಕರೆ ಮಾಡಿ ಹುಸಿ ಬೆದರಿಕೆಯೊಡ್ಡಿ ರೂ. ೨.೨೦ ಕೋಟಿಯನ್ನು ಪಡೆದುಕೊಂಡ ಘಟನೆ ನಡೆದಿದೆ.
ಹೌದು.. ಆಶ್ಚರ್ಯವಾದರೂ ಈ ಘಟನೆ ಸತ್ಯ. ಕರೆಗೆ ಹೆದರಿ ಯಾರನ್ನೂ ವಿಚಾರಿಸದೆ, ಪೊಲೀಸ್ ಸಹಾಯ ಪಡೆಯದೆ ಹೇಳಿದ ಮಾತ್ರಕ್ಕೆ ಬರೋಬ್ಬರಿ ರೂ. ೨.೨೦ ಕೋಟಿ ಹಣವನ್ನು ವರ್ಗಾವಣೆ ಮಾಡಿದ ವೃದ್ಧ ವ್ಯಕ್ತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿ ಕಳೆದುಕೊಂಡ ಹಣ ಪಡೆಯಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಹೆಸರು, ವಿಳಾಸಕ್ಕೆ ‘ಡ್ರಗ್ಸ್’ ಇರುವ ಪಾಸೆÀðಲ್ ಬಂದಿದೆ ಎಂದು ಹುಸಿ ಮಾತಿಗೆ ಹೆದರಿದ ಬೆಳೆಗಾರ ರೂ. ೨.೨೦ ಕೋಟಿ ಹಣವನ್ನು ಖದೀಮರ ಖಾತೆಗೆ ಹಾಕಿದ್ದಾರೆ. ಇದೀಗ ವಂಚಕರ ಜಾಲ ಪತ್ತೆಗೆ ಸೈಬರ್ ಪೊಲೀಸರು ಬಲೆ ಬೀಸಿದ್ದಾರೆ.
ನಿಮ್ಮ ವಿಳಾಸಕ್ಕೆ ಡ್ರಗ್ಸ್ ಬಂದಿದೆ
ಕರಡಿಗೋಡು ಗ್ರಾಮದ ೭೦ ವರ್ಷದ ಕಾಫಿ ಬೆಳೆಗಾರ ದೇವಯ್ಯ ಎಂಬವರಿಗೆ ಮೇ ೧೧ ರ ಬೆಳಿಗ್ಗೆ ಕರೆಯೊಂದು ಬಂದಿದ್ದು, ‘ನಿಮ್ಮ ವಿಳಾಸಕ್ಕೆ ಮಾದಕ ವ್ಯಸನ ಇರುವ ಪಾಸೆÀðಲ್ ಬಂದಿದೆ. ಈ ವಿಚಾರ ಪೊಲೀಸರಿಗೆ ಹೇಳಿದರೆ ನಿಮ್ಮನ್ನು ಬಂಧಿಸುತ್ತಾರೆ.’ ಎಂದು ಫೆಡೆಕ್ಸ್ ಪಾಸೆÀðಲ್ ಸರ್ವಿಸ್ ಎಂಬ ಸಂಸ್ಥೆ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೋರ್ವ ಹೆದರಿಸಿದ್ದಾನೆ.
ಬೆಳೆಗಾರ ದೇವಯ್ಯ ಕರೆ ಬಂದ ಸಂದರ್ಭ ಹೆದರಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ ಮತ್ತಷ್ಟು ಭಯಪಡಿಸಲು ಮುಂದಾಗಿದ್ದಾನೆ. ರೂ. ೨.೨೦ ಕೋಟಿ ಹಣ ನೀಡಿದರೆ ಯಾರಿಗೂ ವಿಷಯ ಹೇಳುವುದಿಲ್ಲ ಎಂದು ನಂಬಿಸಿದ್ದಾನೆ. ಅವನ ಮಾತಿನಿಂದ ಆತಂಕಕ್ಕೆ ಒಳಗಾದ ದೇವಯ್ಯ ಪೊಲೀಸರ ವಿಚಾರಣೆ, ಬಂಧಿಸುವ ಭಯದಿಂದ ವ್ಯಕ್ತಿ ಹೇಳಿದ ಮಾತ್ರಕ್ಕೆ ಹಣವನ್ನು ನೇರವಾಗಿ ನೀಡಿದ ೨ ಪ್ರತ್ಯೇಕ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಅನಂತರ ಈ ವಿಚಾರವನ್ನು ಕುಟುಂಬಸ್ಥರಿಗೆ, ಸ್ನೇಹಿತರಿಗೆ ತಿಳಿಸಿದ್ದು, ಇದೊಂದು ಮೋಸ ಎಂದು ಅವರುಗಳು ತಿಳಿಸಿದ ಹಿನ್ನೆಲೆ ಮಡಿಕೇರಿ ಸೈಬರ್ ಪೊಲೀಸ್ ಠಾಣೆಗೆ ಎರಡು ದಿನಗಳ ಹಿಂದೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಚುರುಕಿನ ತನಿಖೆ ಕೈಗೊಂಡಿದ್ದಾರೆ. ಕರೆ ಬಂದ ಮೊಬೈಲ್ ಸಂಖ್ಯೆ, ಖಾತೆ ವಿವರಗಳನ್ನು ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.