ಮಡಿಕೇರಿ, ಮೇ ೩೧: ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಮತ್ತು ಭಾರತೀಯ ಕೃಷಿ ಕೌಶಲ್ಯಾಭಿವೃದ್ಧಿ ಪರಿಷತ್, ನವದೆಹಲಿ ಇವರುಗಳ ಸಹಯೋಗದಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯದ ಕುರಿತ ೨೧ ದಿನಗಳ ಉಚಿತ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿ ಕಾರ್ಯಕ್ರಮ ವಾರದಲ್ಲಿ ಎರಡು ದಿನ ನಡೆಯಲಿದ್ದು, ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ೧೮ ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು. ಕೇಂದ್ರ ಸರ್ಕಾರದ ಭಾರತೀಯ ಕೃಷಿ ಕೌಶಲ್ಯಾಭಿವೃದ್ಧಿ ಪರಿಷತ್ ವತಿಯಿಂದ ೨೧ ದಿನಗಳ ತರಬೇತಿಯ ನಂತರ ಪ್ರಮಾಣ ಪತ್ರವನ್ನು ನೀಡಲಾಗುವುದು. ಆಸಕ್ತ ೨೦ ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಾ.ವೀರೇಂದ್ರ ಕುಮಾರ್.ಕೆ.ವಿ, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಮೊ ಸಂಖ್ಯೆ : ೯೭೪೧೬೨೧೪೯೩ ಮತ್ತು ೮೦೭೩೨೮೫೨೭೮ ಇವರುಗಳನ್ನು ಸಂಪರ್ಕಿಸಬಹುದು.