ಮಡಿಕೇರಿ, ಮೇ ೩೧: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಕೆಲಸ ಕಾರ್ಯಗಳಿಗಾಗಿ ಸಿದ್ಧತೆಗಳು ಆರಂಭವಾಗುತ್ತಿವೆ. ಈ ಬಾರಿ ಜಿಲ್ಲೆಯಲ್ಲಿ ಈ ತನಕ ಸರಾಸರಿ ೧೨.೬೪ ಇಂಚುಗಳಷ್ಟು ಮಳೆ ಮೇ ಅಂತ್ಯದ ವೇಳೆಗೆ ಸುರಿದಿದೆ. ಇದು ವಾಡಿಕೆಗಿಂತ ಶೇ. ೩೦ರಷ್ಟು ಹೆಚ್ಚಾಗಿದ್ದು, ರೈತರು ಈಗಾಗಲೇ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯಲ್ಲಿರುವುದಾಗಿ ಕೃಷಿ ಇಲಾಖೆ ತಿಳಿಸಿದೆ. ಭತ್ತದ ಸಸಿಮಡಿ ಕಾರ್ಯ ಜೂನ್ ಅಂತ್ಯದಿAದ ಪ್ರಾರಂಭವಾಗಲಿದ್ದು, ಜುಲೈ - ಆಗಸ್ಟ್ನಲ್ಲಿ ಈ ಬಾರಿ ನಾಟಿ ಕಾರ್ಯ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ಕೃಷಿ ಪರಿಕರಗಳನ್ನು ದಾಸ್ತಾನೀಕರಿಸಲಾಗುತ್ತಿದೆ. ಮುಂಗಾರು ಹಂಗಾಮಿಗೆ ಒಟ್ಟು ೧೮೭೧ ಕ್ವಿಂಟಾಲ್ ಭತ್ತ ಮತ್ತು ೪೧ ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನ ಬೀಜಗಳನ್ನು ದಾಸ್ತಾನೀಕರಿಸುವ ಗುರಿ ಹೊಂದಲಾಗಿದೆ. ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಕೆ.ಎಸ್.ಎಸ್.ಸಿ., ಎನ್.ಎಸ್.ಸಿ. ಹಾಗೂ ಖಾಸಗಿ ಸಂಸ್ಥೆಗಳಿAದ ಸರಬರಾಜು ಪಡೆದು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿ ಮೇ ೩೦ರ ದಿನಾಂಕಕ್ಕೆ ಒಟ್ಟು ೫೦೩ ಕ್ವಿಂಟಾಲ್ ಭತ್ತ ಹಾಗೂ ೨.೪ ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳ ದಾಸ್ತಾನು ಇರುವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ತಿಳಿಸಿದ್ದಾರೆ.

ರಸಗೊಬ್ಬರ ದಾಸ್ತಾನು

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು ೮೦೯೪೬ ಮೆಟ್ರಿಕ್ ಟನ್‌ಗಳಷ್ಟು ವಿವಿಧ ಗ್ರೇಡ್‌ಗಳ ರಸಗೊಬ್ಬರಗಳಿಗೆ ಬೇಡಿಕೆ ಇದೆ. ಮೇ ಅಂತ್ಯದವರೆಗೆ ೨೪೩೨೧ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಒಟ್ಟು ೩೫,೦೬೨ ಮೆಟ್ರಿಕ್ ಟನ್ ರಸಗೊಬ್ಬರ ವಿವಿಧ ಸಹಕಾರ ಸಂಘ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದಾಸ್ತಾನು ಇದೆ. ರೈತರ ಬೇಡಿಕೆ ಹಾಗೂ ಗುರಿಯನ್ವಯ ಹಂತಹAತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಪೂರೈಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.