ಸಿದ್ದಾಪುರ, ಜೂ. ೧: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ಧಾಳಿ ನಡೆಸಿದ್ದು, ಬೆಳೆಗಾರ ಸೇರಿದಂತೆ ಇನ್ನೋರ್ವ ಸಿಬ್ಬಂದಿ ಸೇರಿ ಮೂವರು ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಿದ್ದಾಪುರದಲ್ಲಿ ಶನಿವಾರ ಸಂಜೆ ನಡೆದಿದೆ.
ಗುಹ್ಯ ಗ್ರಾಮ ಸಮೀಪದ ಇಂಜಿಲಗೆರೆಯ ನಿವಾಸಿಯಾಗಿರುವ ಮಂಡೇಪAಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದಲ್ಲಿ ಮರಿಯಾನೆ ಸೇರಿದಂತೆ ೧೫ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿವೆ. ಈ ಕಾಡಾನೆಗಳನ್ನು ಶನಿವಾರದಂದು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ನಡೆಸಿದರು.
ಈ ಸಂದರ್ಭ ಪ್ರವೀಣ್ ಬೋಪಯ್ಯ ಅವರು ತೋಟದಿಂದ ಕಾಡಾನೆಗಳನ್ನು ಕಾರ್ಯಾಚರಣೆಯ ಮೂಲಕ ಕಾಡಿಗೆ ಅಟ್ಟುವ ಸಂದರ್ಭ ಕಾಡಾನೆಗಳ ಹಿಂಡಿನಲ್ಲಿದ್ದ ಹೆಣ್ಣಾನೆಯೊಂದು
(ಮೊದಲ ಪುಟದಿಂದ) ಹಠಾತ್ತನೇ ಆನೆ ಕಾರ್ಯಪಡೆ ಸಿಬ್ಬಂದಿಗಳಾದ ಮುರುಗನ್ ಹಾಗೂ ವಿನೋದ್ ಮೇಲೆ ಧಾಳಿ ನಡೆಸಿತ್ತು. ಪರಿಣಾಮ ಮುರುಗನ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿನೋದ್ ಅವರ ಮೇಲೆ ಆನೆ ಧಾಳಿ ಮಾಡುವುದನ್ನು ತಪ್ಪಿಸಲು ತೋಟದ ಮಾಲೀಕ ಪ್ರವೀಣ್ ಬೋಪಯ್ಯ ಯತ್ನಿಸಿದ ಸಂದರ್ಭ ಕಾಲು ಜಾರಿ ಬಿದ್ದು ಪ್ರವೀಣ್ ಅವರ ಕಾಲಿಗೂ ಗಾಯವಾಗಿದೆ. ಈ ಮೂವರು ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ.
ಗುಹ್ಯ ಹಾಗೂ ಇಂಜಿಲಗೆರೆ ಭಾಗದ ಕಾಫಿ ತೋಟಗಳಲ್ಲಿ ಮರಿಯಾನೆಗಳು ಸೇರಿದಂತೆ ೩೫ ಕ್ಕೂ ಅಧಿಕ ಕಾಡಾನೆಗಳು ಬೇರೆ ಬೇರೆ ಗುಂಪುಗಳಾಗಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ, ಇತ್ತೀಚೆಗೆ ಸಿದ್ದಾಪುರದ ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಮರಿಯಾನೆಗಳು ಸೇರಿದಂತೆ ೨೫ಕ್ಕೂ ಅಧಿಕ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿದ್ದ ದೃಶ್ಯ ಕಂಡು ಬಂದಿತ್ತು.
ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆಯನ್ನು ಅರಣ್ಯ ಇಲಾಖಾಧಿಕಾರಿಗಳು ಕೈಗೊಂಡಿದ್ದಾರೆ. ಆದರೆ ಕಾಡಾನೆಗಳು ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದು ಹಿಂತಿರುಗಿ ಕಾಡಿಗೆ ತೆರಳದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಮ್ಮತ್ತಿ ಹೋಬಳಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರೂ ಆದ ಪ್ರವೀಣ್ ಬೋಪಯ್ಯ, ಗುಹ್ಯ ಹಾಗೂ ಇಂಜಿಲಗೆರೆಯ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು. ಆನೆ ಕಾರ್ಯಪಡೆ ಸಿಬ್ಬಂದಿಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಅವರಿಗೆ ಅರಣ್ಯ ಇಲಾಖೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು. ಗಾಯಗೊಂಡಿರುವ ಮುರುಗನ್ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ವೀರಾಜಪೇಟೆ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ.
- ವರದಿ : ವಾಸು ಎ.ಎನ್.