ಮಡಿಕೇರಿ, ಜೂ. ೧: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಂದರನಗರ-ಕುಶಾಲನಗರ ರಸ್ತೆಯಲ್ಲಿ ನಿನ್ನೆ ದಿನ ನಡೆದ ಟ್ರಾö್ಯಕ್ಟರ್ - ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆಗೆ ಸಂಬAಧಿಸಿದAತೆ ಟ್ರಾö್ಯಕ್ಟರ್ ಚಾಲನೆ ಮಾಡಿದ ಅಪ್ರಾಪ್ತ ಬಾಲಕನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಟ್ರಾö್ಯಕ್ಟರ್ ಮಾಲೀಕರಾದ ಟಿ. ತುಳಸಿ ಬಂಧಿತ ಮಹಿಳೆ. ಈಕೆಯ ಅಪ್ರಾಪ್ತ ವಯಸ್ಸಿನ ಮಗ ಟ್ರಾö್ಯಕ್ಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೈಕ್‌ಗೆ ಡಿಕ್ಕಿಪಡಿಸಿರುವುದು ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಆರೋಪಿ ಅಪ್ರಾಪ್ತ ವಯಸ್ಸಿನವನಾದ ಹಿನ್ನೆಲೆಯಲ್ಲಿ ಆತನ ತಾಯಿಯನ್ನು ಬಂಧಿಸಿ ಟ್ರಾö್ಯಕ್ಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಪ್ರಾಪ್ತ ವಯಸ್ಸಿನ ಬಾಲಕ ಈ ಹಿಂದೆ ತಾ. ೩೧-೦೫-೨೦೨೩ ರಂದು ಸುಂದರನಗರ - ಹಾರಂಗಿ ರಸ್ತೆಯಲ್ಲಿ ಟ್ರಾö್ಯಕ್ಟರ್ ಚಲಾಯಿಸುತ್ತಿದ್ದ ಸಂದರ್ಭ ಪಾದಚಾರಿಗೆ ಅಪಘಾತಗೊಳಿಸಿರುವ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ¥್ರÀಕರಣ ದಾಖಲಾಗಿ ಆತನ ತಾಯಿ, ಟ್ರಾö್ಯಕ್ಟರ್ ಮಾಲೀಕರಾದ ತುಳಿಸಿ ಟಿ ವಿರುದ್ಧ ¥್ರÀಕರಣದ ದಾಖಲಿಸಿ ಪೊಲೀಸರು ಕ್ರಮ ಕೈಗೊಂಡಿದ್ದರು. ತುಳಸಿ ಅವರಿಗೆ ತಾ. ೦೮-೦೯-೨೦೨೩ ರಂದು ಕುಶಾಲನಗರ ಸಿಜೆ ಜೆಎಂಎಫ್‌ಸಿ ನ್ಯಾಯಾಲಯ ರೂ. ೨೫,೦೦೦ ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆ ವಿಧಿಸಿತ್ತು.