ಕಳೆದ ನವೆಂಬರ್ನಲ್ಲಿ ೫೦ ಓವರ್ಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು ಗೆಲ್ಲುವ ವಿಶ್ವಾಸ ಹೊಂದಿ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭರವಸೆ ತುಂಬಿದ್ದ ಭಾರತ ಕ್ರಿಕೆಟ್ ತಂಡವು ಕೊನೆ ಗಳಿಗೆಯಲ್ಲಿ ಪ್ರಭಾವಿ ಆಸ್ಟೆçÃಲಿಯಾ ತಂಡದ ವಿರುದ್ಧ ಮುಗ್ಗರಿಸಿ ವಿಶ್ವ ಕಪ್ ಎತ್ತಿಹಿಡಿಯಲು ವಿಫಲವಾಗಿ ಅಭಿಮಾನಿಗಳ ಆಘಾತಕ್ಕೆ ಕಾರಣ ವಾಯಿತು. ಇದೀಗ ಇಂದಿನಿAದ ನಡೆಯಲಿರುವ ಟಿ-೨೦ ವಿಶ್ವಕಪ್ ಮೂಲಕ ದಶಕದಿಂದ ಖಾಲಿ ಬಿದ್ದಿರುವ ತನ್ನ ಐ.ಸಿ.ಸಿ ಟ್ರೋಫಿ ಕ್ಯಾಬಿನೆಟ್ಗೆ ಟ್ರೋಫಿಯ ರುಚಿ ತೋರಿಸಲು ಭಾರತೀಯ ಕ್ರಿಕೆಟ್ ಪಡೆ ಸಿದ್ಧವಾಗಿದೆ. ಯು.ಎಸ್.ಎ ಹಾಗೂ ಕೆನಡಾ ನಡುವಿನ ಪಂದ್ಯದ ಮೂಲಕ ವಿಶ್ವಕಪ್ಗೆ ಇಂದು ಚಾಲನೆ ದೊರಕಲಿದೆ.
ಈ ಬಾರಿ ಪ್ರತಿಷ್ಠಿತ ಟ್ರೋಫಿ ಗಾಗಿ ದೂರದ ಯು.ಎಸ್.ಎ, ಗಯಾನ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ೨೦ ತಂಡಗಳು ಸೆಣೆಸಾಡ ಲಿದ್ದು, ಬೇಸ್ಬಾಲ್, ರಗ್ಬಿ, ಫುಟ್ ಬಾಲ್ ಕ್ರೀಡೆಗಳಿಗೆ ಹೆಸರಾಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯು.ಎಸ್.ಎ) ಮೊದಲನೇ ಬಾರಿಗೆ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ. ಫುಟ್ಬಾಲ್ ಕ್ರೀಡೆಗೆ ಹೋಲಿಸಿದರೆ ವಿಶ್ವದಾದ್ಯಂತ ಕಡಿಮೆ ಪ್ರಖ್ಯಾತಿ ಹೊಂದಿರುವ ಕ್ರಿಕೆಟ್ ಕ್ರೀಡೆಯನ್ನು ಹೆಚ್ಚಿನ ರಾಷ್ಟçಗಳಿಗೆ ವಿಸ್ತರಿಸಲು, ಪ್ರಚಾರ ಮಾಡಲು, ಕ್ರೀಡಾ ಪಟುಗಳನ್ನು, ಪ್ರೇಕ್ಷಕರನ್ನು ಕ್ರಿಕೆಟ್ನತ್ತ ಆಕರ್ಷಿಸಲು ಈ ಟೂರ್ನಿಯ ಮೂಲಕ ಅಂತರರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ ಪ್ರಯತ್ನಿಸಲಿದೆ. ಈ ನಿಟ್ಟಿನಲ್ಲಿ ಕ್ರಿಕೆಟ್ನ ಗಂಧ-ಗಾಳಿ ಇಲ್ಲದ ಅಮೇ ರಿಕಾದಲ್ಲಿ ಈ ಬಾರಿ ಟೂರ್ನಿ ಆಯೋಜಿಸಲಾಗುತ್ತಿದೆ ಹಾಗೂ ಅತಿ ಹೆಚ್ಚು ತಂಡಗಳು (೨೦) ಭಾಗವಹಿ ಸುವ ವಿಶ್ವಕಪ್ ಕೂಡ ಇದಾಗಲಿದೆ.
ಪಂದ್ಯಾಟ ವೀಕ್ಷಣೆಗೆ ಸಮಯ-ವ್ಯತ್ಯಾಸಗಳ ತೊಡಕು -
೨ ಖಂಡಗಳ
೯ ಕ್ರೀಡಾಂಗಣಗಳಲ್ಲಿ ಪಂದ್ಯಾವಳಿ
ಯು.ಎಸ್.ಎ, ವೆಸ್ಟ್ ಇಂಡೀಸ್, ಗಯಾನದಲ್ಲಿ ಪಂದ್ಯಾಟ ಆಯೋ ಜನೆಗೊಳ್ಳುತ್ತಿರುವುದರಿಂದ ಭಾರ ತೀಯ ಪ್ರೇಕ್ಷಕರಿಗೆ ಇತರ ರಾಷ್ಟçಗಳ ಎಲ್ಲಾ ಪಂದ್ಯಾಟಗಳನ್ನು ಸಂಪೂರ್ಣ ವಾಗಿ ವೀಕ್ಷಿಸಲು ತೊಡ ಕುಂಟಾಗಲಿದೆ.
ಯು.ಎಸ್.ಎ ರಾಷ್ಟçದಲ್ಲಿ, ಟೆಕ್ಸಸ್ ರಾಜ್ಯದ ಡಾಲಸ್ (ಭಾರತ ಸಮಯ ಕ್ಕಿಂತ ಹತ್ತುವರೆ ಗಂಟೆ ಹಿಂದೆ), ನ್ಯೂ ಯಾರ್ಕ್ ರಾಜ್ಯದ ನ್ಯೂಯಾರ್ಕ್ ಸಿಟಿ (ಭಾರತ ಸಮಯಕ್ಕಿಂತ ಒಂಭತ್ತುವರೆ ಗಂಟೆ ಹಿಂದೆ) ಹಾಗೂ ಫ್ಲೋರಿಡಾ ರಾಜ್ಯದ ಲಾಡರ್ಹಿಲ್ (ಭಾರತ ಸಮಯಕ್ಕಿಂತ ಒಂಭತ್ತುವರೆ ಗಂಟೆ ಹಿಂದೆ)- ಈ ೩ ಕಡೆಗಳಲ್ಲಿ ಕ್ರಿಕೆಟ್ ಪಂದ್ಯಾಟಗಳು ಆಯೋ ಜನೆಗೊಂಡಿವೆ.
ನ್ಯೂಯಾರ್ಕ್ನಲ್ಲಿನ ಕ್ರೀಡಾಂಗಣವು ತಾತ್ಕಾಲಿಕ ಕ್ರಿಕೆಟ್ ಕ್ರೀಡಾಂಗಣ ವಾಗಿದ್ದು, ಪ್ರಸ್ತುತ ನಡೆಯಲಿರುವ ವಿಶ್ವಕಪ್ಗೆಂದೇ ಕ್ರೀಡಾಂಗಣ ನಿರ್ಮಿ ಸಲಾಗಿದೆ. ಟೂರ್ನಿಯ ನಂತರ ಕ್ರೀಡಾಂಗಣವು ಈ ಹಿಂದೆ ಇದ್ದ ಪಾರ್ಕ್ ಆಗಿಯೇ ಮರುಪರಿ ವರ್ತನೆಗೊಳ್ಳಲಿದೆ.
ಫ್ಲೋರಿಡಾದ ಲೌಡರ್ಹಿಲ್ನಲ್ಲಿನ ಕ್ರೀಡಾಂಗಣವನ್ನು ೨೦೦೭ ರಲ್ಲಿ ನಿರ್ಮಿಸಲಾಗಿದ್ದು, ಹಲವಾರು ಸ್ಥಳೀಯ ಕ್ರಿಕೆಟ್ ಪಂದ್ಯಗಳಿಗೆ ಹಾಗೂ ಅಂತರರಾಷ್ಟಿçÃಯ ಪಂದ್ಯಗಳಿಗೆ ಆತಿಥ್ಯ ನೀಡಿದೆ.
ಟೆಕ್ಸಸ್ನ ಡಾಲಸ್ನಲ್ಲಿರುವ ಸ್ಟೇಡಿಯಂ, ಈ ಹಿಂದೆ ಅಲ್ಲಿ ಇದ್ದ ಅಮೇರಿಕಾದ ಪ್ರಖ್ಯಾತ ಕ್ರೀಡೆ ಬೇಸ್ಬಾಲ್ಗೆಂದು ನಿರ್ಮಿಸಲಾಗಿದ್ದ ಸ್ಟೇಡಿಯಂ ಅನ್ನು ೨೦೨೦ ರಲ್ಲಿಯೇ ಪರಿವರ್ತಿಸಿ ತಯಾರಿಸಲಾಗಿದೆ. ಮುಂದೆಯೂ ಇದು ಕ್ರಿಕೆಟ್ ಸ್ಟೇಡಿಯಂ ಆಗಿಯೇ ಉಳಿಯಲಿದೆ.
ವೆಸ್ಟ್ ಇಂಡೀಸ್ ದ್ವೀಪ ಸಮೂಹದ ಬಾರ್ಬಡೋಸ್, ಆಂಟಿಗ್ವ , ಟರೌ , ಸೈಂಟ್ ವಿನ್ಸೆಂಟ್, ಸೈಂಟ್ ಲೂಸಿಯ ಹಾಗೂ ದಕ್ಷಿಣ ಅಮೇರಿಕಾ ಖಂಡದ ಗಯಾನದಲ್ಲಿ ಕೂಡ ಅಲ್ಲಿನ ಕ್ರೀಡಾಂಗಣಗಳಲ್ಲಿ ವಿಶ್ವಕಪ್ನ ಪಂದ್ಯಾವಳಿಗಳು ಆಯೋ ಜಿಸಲ್ಪಟ್ಟಿವೆ. ಇವೆಲ್ಲ ಕಡೆಗಳಲ್ಲಿನ ಸಮಯ ಭಾರತ-ಸಮಯಕ್ಕಿಂತ ಒಂಭತ್ತುವರೆ ಗಂಟೆ ಹಿಂದಕ್ಕಿವೆ.
ಭಾರತ ಪಂದ್ಯಗಳೆಲ್ಲವೂ ಭಾರತೀಯ ವೀಕ್ಷಕರ ಅನುಕೂಲಕ್ಕನುಗುಣವಾಗಿ ಆಯೋಜನೆ
ಅಮೇರಿಕಾ ಹಾಗೂ ಭಾರತದ ನಡುವೆ ಸಮಯದ ಅಜಗಜಾಂತರ ವ್ಯತ್ಯಾಸ ಇರುವ ಕಾರಣ ಭಾರತ ದಲ್ಲಿನ ಅಪ್ಪಟ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದು ಕಷ್ಟವಿದೆ. ಆದಾಗ್ಯೂ ಅಂತರರಾಷ್ಟಿçÃಯ ಕ್ರಿಕೆಟ್ ಮಂಡಳಿ (Iಅಅ) ಹಾಗೂ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಃಅಅI) ಚಾಣಾಕ್ಷತನದಿಂದಾಗಿ ಭಾರತ ತಂಡದ ಪಂದ್ಯಾವಳಿಗಳನ್ನು ಭಾರತೀಯ ವೀಕ್ಷಕರಿಗೆ ಅನು ಕೂಲವಾಗುವಂತಹ ಸಮಯದಲ್ಲಿ ಆಯೋಜಿಸಿದೆ. ಸಾಮಾನ್ಯವಾಗಿ ಅಂದಾಜು ೪ ಗಂಟೆಗಳ ಕಾಲ ನಡೆಯುವ ಟಿ-೨೦ ಪಂದ್ಯಗಳನ್ನು ರಾತ್ರಿ ೭ ಅಥವಾ ೮ ಗಂಟೆಗೆ ಪ್ರಾರಂಭಿಸಿ ಮಧ್ಯರಾತ್ರಿ ಒಳಗೆ ಮುಗಿಸಲಾಗುತ್ತದೆ. ಐ.ಪಿ.ಎಲ್ ಕೂಡ ಈ ಕ್ರಮವನ್ನೇ ಅನುಸರಿಸಿತ್ತು. ಆದರೆ ಅಮೇರಿಕಾ ದಲ್ಲಿ ಇಷ್ಟು ಹೊತ್ತಿಗೆ ಪಂದ್ಯಾವಳಿ ಪ್ರಾರಂಭಿಸಿದರೆ ಭಾರತದಲ್ಲಿ ಮುಂದಿನ ದಿನ ಬೆಳಿಗ್ಗೆ ೫-೬ ಗಂಟೆ ಅಷ್ಟಾಗಿರುತ್ತದೆ. ಈ ಕಾರಣದಿಂದ ಭಾರತ ಆಡುವ ಪಂದ್ಯಗಳೆಲ್ಲವೂ ಅಮೇರಿಕಾದಲ್ಲಿ ಬೆಳಿಗ್ಗೆ ೯-೧೦ ಗಂಟೆಗೆ ಆಯೋಜಿಸಲಾಗಿದೆ. ಇದರಿಂದಾಗಿ ಭಾರತದಲ್ಲಿನ ಕ್ರಿಕೆಟ್ ಪ್ರೇಮಿಗಳು ಆರಾಮವಾಗಿ ರಾತ್ರಿ ೮ ಗಂಟೆಗೆ ನಿದ್ರೆ ಹಾಳುಮಾಡದೆ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಕ್ರಿಕೆಟ್ ವೀಕ್ಷಕರ, ಪ್ರೇಮಿಗಳ ಸಂಖ್ಯೆ ವಿಶ್ವದಲ್ಲಿ ಭಾರತದಲ್ಲಿಯೇ ಅತಿ ಹೆಚ್ಚಿರುವ ಕಾರಣ ಪ್ರಸಾರ ಚಾನಲ್ ಸ್ಟಾರ್ ಸ್ಪೋಟ್ಸ್ನ ಟಿ.ಆರ್.ಪಿ, ದುಬಾರಿ ಜಾಹಿರಾತುಗಳು ಅತಿ ಹೆಚ್ಚಿನ ಜನರನ್ನು ತಲುಪುವುದು ಭಾರತೀಯ ವೀಕ್ಷಕರಿಂದಲೇ ಎಂದು ತಿಳಿದಿರುವ ಆಯೋಜಕರು ಭಾರ ತದ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಯನ್ನು ಈ ರೀತಿ ಸಿದ್ಧಪಡಿಸಿದ್ದಾರೆ. ಉಳಿದ ಎಲ್ಲಾ ರಾಷ್ಟçಗಳ ಪಂದ್ಯಗಳು ಅಮೇರಿಕ, ಗಯಾನ ಹಾಗೂ ವೆಸ್ಟ್
ಇಂಡಿಸ್ನಲ್ಲಿ ರಾತ್ರಿ ಅಂದಾಜು ೭- ೮ ಗಂಟೆ
ಸಂದರ್ಭ ಆಯೋ
ಜಿಸಲಾಗಿದೆ. -ಪ್ರಜ್ವಲ್ ಜಿ.ಆರ್