ಕೂಡಿಗೆ, ಜೂ. ೧: ಶ್ರೀ ಶನೈÃಶ್ಚರ ಸ್ವಾಮಿ ದೇವಸ್ಥಾನ ಹೆಗ್ಗಡಹಳ್ಳಿ-ಕೂಡಿಗೆ ವತಿಯಿಂದ ತಾ. ೬ ರಂದು ಶನೈÃಶ್ಚರ ಜಯಂತಿ ಪ್ರಯುಕ್ತ ಶನೈÃಶ್ಚರ ಸ್ವಾಮಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳಾದ ಗಣಯಾಗ, ನವಕಲಶಾರಾಧನೆ, ಪ್ರಧಾನ ಹೋಮ, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಪೂರ್ಣಾಹುತಿ ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ.

ನಂತರ ಅಲಂಕೃತ ಭವ್ಯ ರಥದಲ್ಲಿ ನದಿಯಲ್ಲಿ ಜಳಕದ ನಂತರ ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಾಲಯದ ಸ್ವಸ್ಥಳ ಸೇರುವುದು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.