ಕೂಡಿಗೆ, ಜೂ. ೧: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮ ದಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಅನೇಕ ಚರ್ಚೆಗಳು ನಡೆದವು. ಸಂಘದ ಈಗಿನ ಕಟ್ಟಡವು ೪೫ ವರ್ಷಗಳು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಬಗ್ಗೆ ಹಾಜರಿದ್ದ ನಿರ್ದೇಶಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು

ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆ ಮತ್ತು ಸಂಘದ ಸದಸ್ಯರಿಗೆ ಸರಕಾರದ ಹೊಸ ಯೋಜನೆಯ ಅಡಿಯಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಹಂತಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆಗಳು ನಡೆದವು. ನೂತನ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಸಹಕಾರ ಇಲಾಖೆಯ ಮೂಲಕ ಅನುದಾನವನ್ನು ಪಡೆಯಲು ಪತ್ರ ವ್ಯವಹಾರ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳುವ ಮೂಲಕ ಸಂಘದ ಸದಸ್ಯರುಗಳಿಗೆ ಅರಣ್ಯ ಕಿರು ಉತ್ಪನ್ನಗಳಿಂದ ಅನುಕೂಲವಾಗುವ ಯೋಜನೆ ಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಮನು, ನಿರ್ದೇಶಕರಾದ ಆರ್.ಕೆ. ಚಂದ್ರು, ಉದಯ್ ಕುಮಾರ್, ಅಣ್ಣಯ್ಯ, ಕಾವೇರಮ್ಮ ಯಶೋಧ ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಹನಿಕುಮಾರ್ ಹಾಜರಿದ್ದರು.