ಮಡಿಕೇರಿ, ಜೂ. ೧: ನಗರದ ಬಸಪ್ಪ ಶಿಶುವಿಹಾರ ಹಾಲ್‌ನಲ್ಲಿ ಇತ್ತೀಚೆಗೆ ಬ್ಯೂಟೀಶಿಯನ್ ಮತ್ತು ಬ್ರೆöÊಡಲ್ ಮೇಕಪ್ ಕೌಶಲ್ಯ ತರಬೇತಿ ಶಿಬಿರವನ್ನು ನಬಾರ್ಡ್ ಹಾಗೂ ಒ.ಡಿ.ಪಿ. ವತಿಯಿಂದ ಆಯೋಜಿಸ ಲಾಗಿತ್ತು. ಮಡಿಕೇರಿ ಹಾಗೂ ಕುಶಾಲನಗರದಿಂದ ಸುಮಾರು ೬೦ ಮಂದಿ ಶಿಬಿರದ ಉಪಯೋಗ ಪಡೆದುಕೊಂಡರು.
ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಒ.ಡಿ.ಪಿ. ಸಂಸ್ಥೆ ನಿರ್ದೇಶಕ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರ ಅವರು, ಬ್ಯೂಟೀಷಿಯನ್ ಹಾಗೂ ಬ್ರೆöÊಡಲ್ ಮೇಕಪ್‌ಗೆ ಬಹಳ ಬೇಡಿಕೆಯಿದೆ. ಶಿಬಿರಾರ್ಥಿಗಳು ತರಬೇತಿ ಪಡೆದ ನಂತರ ಹೆಚ್ಚಿನ ಅನುಭವ ಹೊಂದಿ ಸರಕಾರದಿಂದ ದೊರಕುವ ಸವಲತ್ತುಗಳನ್ನು ಸದುಪಯೋಗಿಸಿ ಕೊಂಡು ಸ್ವಉದ್ಯೋಗ ರಚಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಅವರು, ಸಂಸ್ಥೆಯು ರೈತರ ಹಾಗೂ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರು ಹಾಗೂ ಯುವತಿಯರು ಬ್ಯೂಟೀಷಿಯನ್ ಹಾಗೂ ಬ್ರೆöÊಡಲ್ ಮೇಕಪ್ ಶಿಬಿರವನ್ನು ಪಡೆದು ಸ್ವಂತ ಉದ್ದಿಮೆ ಸ್ಥಾಪಿಸುವಂತಾಗಬೇಕೆAದರು.
ಜಿ.ಪA. ಉಪಕಾರ್ಯದರ್ಶಿ ಜಿ. ಧನರಾಜ್ ಮಾತನಾಡಿ, ಕೊಡಗಿನಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಭೆ ಸಮಾರಂಭ ಗಳಿಗೆ ಹೋಗುವ ಮೊದಲು ಪಾರ್ಲರಿಗೆ ಕಡ್ಡಾಯವಾಗಿ ಹಲವಾರು ಮಹಿಳೆಯರು, ಯುವತಿಯರು ಭೇಟಿ ನೀಡುತ್ತಾರೆ. ತರಬೇತಿಯನ್ನು ಸದುಪಯೋಗಿಸಿ ಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒ.ಡಿ.ಪಿ. ಮೈಸೂರು ಸಂಯೋಜಕಿ ಮೋಲಿ ಪೊಡ್ತಾರೊ, ಸಂಯೋಜಕಿ ಲಲಿತಾ, ಕೊಡಗು ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೆಜಸ್, ಒ.ಡಿ.ಪಿ.ಯ ಮೆಲ್ವಿನ್, ವಿಜಯ ನಾರಾಯಣ, ಮಮತಾ, ತರಬೇತುದಾರರಾದ ರಾಣಿ ಡಿಸೋಜ ಅವರುಗಳು ಹಾಜರಿದ್ದರು.