ಮಡಿಕೇರಿ, ಜೂ. ೧: ಒಂದಲ್ಲಾ... ಎರಡಲ್ಲಾ... ಮೂರಲ್ಲಾ... ಸತತ ನಾಲ್ಕುದಿನ ಮದ್ಯದಂಗಡಿಗಳು ಬಂದ್... ಅಯ್ಯಯ್ಯೋ ಮಳೆ ಹಿಡಿಯುವ ಸನ್ನಿವೇಶ, ತುಂತುರು ಮಳೆ, ಚಳಿಯ ವಾತಾವರಣ ಬೇರೆ, ಹೇಗಪ್ಪಾ ದಿನ ಕಳೆಯೋದು... ಇದು ಮದ್ಯಪ್ರಿಯರ ಪರದಾಟವಾಗಿದೆ. ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜೂನ್ ೧ರ ಶನಿವಾರ ಸಂಜೆ ೪ ರಿಂದ ಜೂನ್ ೩ರ ಮಧ್ಯರಾತ್ರಿ ೧೨ ರತನಕ ಜಿಲ್ಲೆಯ ಎಲ್ಲಾ ಮದ್ಯದಂಗಡಿ, ಬಾರ್‌ಗಳನ್ನು ಮುಚ್ಚಲು ಒಂದು ಆದೇಶವಾದರೆ ಜೂನ್ ೪ ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಯ ಹಿನ್ನೆಲೆ ಆದಿನವೂ ಮತ್ತೊಂದು ಆದೇಶದಂತೆ ಮದ್ಯದಂಗಡಿಗಳ ಬಾಗಿಲು ಬಂದ್ ಆಗಿರುತ್ತದೆ. ಈಗಾಗಲೇ ಈ ಬಗ್ಗೆ ನಿಷೇಧದ ಆದೇಶ ಜಾರಿಯಾಗಿದೆ. ಕೆಲವರು ಜೂನ್ ೪ರಂದು ಬಾಗಿಲು ತೆರೆಯಲಿದೆ ಅಂದುಕೊAಡಿದ್ದರೆ ಆದಿನವೂ ‘ಎಣ್ಣೆ’ ಸಿಗದು ಎಂಬುದು ಅರಿವಿಗೆ ಬಂದAತೆ ತಮಗಳಿಗೆ ಬೇಕಾದಷ್ಟು ಮದ್ಯ ಸಂಗ್ರಹ ಮಾಡಿಕೊಳ್ಳಲು ಶನಿವಾರದಂದು ವೈನ್‌ಸ್ಟೋರ್, ಬಾರ್‌ಗಳತ್ತ ದೌಡಾಯಿಸುತ್ತಿದ್ದರು. ಅದೂ ಸಂಜೆ ೪ ಗಂಟೆಯಿAದಲೇ ಮುಚ್ಚಲು ಆದೇಶವಿದ್ದರಿಂದ ಜಿಲ್ಲೆಯ ಬಹುತೇಕ ಶಾಪ್‌ಗಳು, ಬಾರ್‌ಗಳ ಎದುರು ಜನಜಂಗುಳಿ, ವಾಹನ ಜಂಗುಳಿ ಕಂಡುಬAತು. ಸರತಿ ಸಾಲಿನಲ್ಲಿ ನಿಂತು ತಮ್ಮ ‘ಔಷಧಿ’ಯನ್ನು ಪಾನಪ್ರಿಯರು ಪಡೆದುಕೊಳ್ಳುವಂತಾಗಿತ್ತು. ಅಪರೂಪಕ್ಕೆ ಕೇವಲ ಒಂದು ದಿನ ಮಾತ್ರ ಬಾಗಿಲು ಬಂದ್ ಆದರೇನೇ ಎಲ್ಲೆಡೆ ನೀರಸ ವಾತಾವರಣದೊಂದಿಗೆ ಅಘೋಷಿತ ಬಂದ್‌ನ ರೀತಿಯ ಸನ್ನಿವೇಶ ಕಂಡುಬರುತ್ತದೆ. ಇದೀಗ ವಿಧಾನ ಪರಿಷತ್ ಚುನಾವಣೆ ಹಾಗೂ ಮತ ಎಣಿಕೆಯ ಕಾರಣದಿಂದಾಗಿ ಸತತ ದಿನಗಳು ಬಾಗಿಲು ತೆರೆಯಲ್ಪಡುತ್ತಿಲ್ಲ. ಇದು ಇನ್ನಿತರ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ ಎಂಬದರಲ್ಲಿ ಸಂಶಯವಿಲ್ಲ.

ಆದರೆ ಶುಕ್ರವಾರ, ಶನಿವಾರದಂದು ‘ಎಣ್ಣೆ’ ಅಂಗಡಿಗಳಲ್ಲಿ ಮಾತ್ರ ಭರ್ಜರಿ ವಹಿವಾಟು ಕಂಡು ಬಂತು.