ಮಡಿಕೇರಿ, ಜೂ. ೧: ಪಿಸಿ & ಪಿಎನ್‌ಡಿಟಿ ಕಾಯ್ದೆ ಉಲ್ಲಂಘನೆ ಮಾಡಿದ ಸ್ಕಾö್ಯನಿಂಗ್ ಸೆಂಟರ್‌ವೊAದನ್ನು ರಾಜ್ಯಮಟ್ಟದ ತಪಾಸಣಾ ಮತ್ತು ಮೇಲ್ವಿಚಾರಣೆ ಸಮಿತಿ ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ.
ಕುಶಾಲನಗರದ ಗಣೇಶ್ ಸ್ಕಾö್ಯನಿಂಗ್ ಸೆಂಟರ್‌ನಲ್ಲಿ ಗರ್ಭಧಾರಣಾ ಮತ್ತು ಪ್ರಸವಪೂರ್ವ ಪತ್ತೆ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ೧೯೯೪ ಹಾಗೂ ನಿಯಮ ೧೯೯೬ರ ಉಲ್ಲಂಘನೆಯಾಗಿದ್ದು, ಮಾಹಿತಿ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ತಪಾಸಣೆ ಮತ್ತು ಮೇಲ್ವಿಚಾರಣಾ ತಂಡದ ವರದಿ ಅನ್ವಯ ರಾಜ್ಯಮಟ್ಟದ ತಪಾಸಣಾ ಮತ್ತು ಮೇಲ್ವಿಚಾರಣಾ ತಂಡದ ಸದಸ್ಯರಾದ ಡಾ. ವಿವೇಕ್ ದೊರೈ ಮತ್ತು ತಂಡ, ಗಣೇಶ್ ಸ್ಕಾö್ಯನಿಂಗ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿ ಕಾಯ್ದೆ ಉಲ್ಲಂಘನೆ ಆಗಿರುವುದು ಖಾತರಿಯಾದ ಹಿನ್ನೆಲೆಯಲ್ಲಿ ದಾಖಲಾತಿಗಳನ್ನು ವಶಪಡಿಸಿಕೊಂಡು, ಕೇಂದ್ರವನ್ನು ಮುಟ್ಟುಗೋಲು ಹಾಕಿಕೊಂಡು ಈ ಸ್ಕಾö್ಯನಿಂಗ್ ಸೆಂಟರ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಜಿಲ್ಲಾ ಸಮಿತಿಗೆ ನಿರ್ದೇಶನ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.