ಮಡಿಕೇರಿ, ಜೂ. ೧: ಮಡಿಕೇರಿ ತಾಲೂಕು ಹಿಂದೂ ಮಲಯಾಳಿ ಸಂಘದ ನೂತನ ಆಡಳಿತ ಮಂಡಳಿ ಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ವಿ.ಧರ್ಮೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ದಿನೇಶ್ ಆಯ್ಕೆಯಾಗಿದ್ದಾರೆ. ನಗರ ದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾ ರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಖಜಾಂಚಿಯಾಗಿ ಎಂ.ಪಿ.ರವಿ, ಉಪಾ ಧ್ಯಕ್ಷರುಗಳಾಗಿ ಪಿ.ಟಿ.ಉತ್ತಮನ್, ವಿಜಯ ಕುಮಾರ್, ಟಿ.ವಿ. ಗೋಪಿನಾಥ್, ಕಾರ್ಯದರ್ಶಿಯಾಗಿ ಹೆಚ್.ಪಿ.ಅಶೋಕ್, ಸಹ ಖಜಾಂಚಿ ಯಾಗಿ ಪಿ.ವಿ.ಸುಬ್ರಮಣಿ, ಸಂಘ ಟನಾ ಕಾರ್ಯದರ್ಶಿಯಾಗಿ ಟಿ.ಆರ್.ಪ್ರಮೋದ್ ಸಹ ಸಂಘಟನಾ ಕಾರ್ಯದರ್ಶಿಯಾಗಿ ಒ.ಎನ್. ಬಾಬು, ಕಚೇರಿ ಕಾರ್ಯದರ್ಶಿಗಳಾಗಿ ಕೆ.ಕೆ.ಮೋಹನ್, ಪ್ರಚಾರ ಸಮಿತಿ ಸಂಚಾಲಕರಾಗಿ ರವಿ ಅಪ್ಪು ಕುಟ್ಟನ್ ಹಾಗೂ ಪ್ರಚಾರ ಸಮಿತಿ ಸಹ ಸಂಚಾಲಕರಾಗಿ ಪ್ರಕಾಶ್ (ಉಣ್ಣಿ ), ಯುವ ಘಟಕದ ಅಧ್ಯಕ್ಷರಾಗಿ ಆರ್.ಅರವಿಂದ, ಉಪಾಧ್ಯಕ್ಷರಾಗಿ ಕೆ.ಎ.ಹರೀಶ್, ಕಾರ್ಯದರ್ಶಿಯಾಗಿ ಎಸ್.ಸಂದೀಪ್, ಸಹ ಕಾರ್ಯದರ್ಶಿ ಯಾಗಿ ಮನು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ರದೀಶ್ ಅವರುಗಳು ಆಯ್ಕೆಯಾದರು.
ನೂತನ ನಿರ್ದೇಶಕರುಗಳಾಗಿ ಚಂದ್ರ, ಎನ್.ಸಿ.ಸುನಿಲ್, ಪ್ರಭಾಕರ್, ಎಂ.ಎA.ಸುರೇಶ್, ಪಿ.ಪಿ.ಶ್ರೀಧರ್, ಸಿ.ಕೆ.ಹರೀಶ್, ಗೌರವ ಸಲಹೆಗಾರ ರಾಗಿ ಟಿ.ಆರ್. ವಾಸುದೇವ, ಟಿ.ಕೆ. ಸುಧೀರ್, ಪಿ.ಟಿ.ಉಣ್ಣಿಕೃಷ್ಣ, ಎಂ.ಅಚ್ಚುತ್ತ ನಾಯರ್, ಆರ್. ಗಿರೀಶ್, ಕೆ.ವಿ.ಸುಬ್ರಮಣಿ, ಎನ್.ವಿ. ಉಣ್ಣಿಕೃಷ್ಣ, ಎಂ.ರದಿಕೇಶನ್ ಅವರು ಗಳನ್ನು ಆಯ್ಕೆ ಮಾಡಲಾಯಿತು.
ಈ ಹಿಂದಿನ ನಿರ್ದೇಶಕರು ಗಳಾದ ದಿನೇಶ್ ನಾಯರ್, ಸಿ.ಕೆ. ಪ್ರಭಾಕರ್, ಕೆ.ಪಿ.ಶಿವ, ಸುಕುಮಾರ್ ನಾಯರ್, ಎನ್.ರಮೇಶ್, ಕೆ.ಕೆ. ಅನಿಲ್ ಹಾಗೂ ವಿನೋದ್ ನಿರ್ದೇ ಶಕರಾಗಿ ಮುಂದುವರೆಯಲಿದ್ದಾರೆ ಎಂದು ಸಂಘದ ಪ್ರಮುಖರು ತಿಳಿಸಿದರು.
ಗೌರವಾಧ್ಯಕ್ಷ ಕೆ.ಎಸ್. ರಮೇಶ್, ಸಂಘದ ಜಿಲ್ಲಾ ಸಮಿತಿಯ ಉಪಾ ಧ್ಯಕ್ಷÀ ಟಿ.ಕೆ.ಸುಧೀರ್ ಹಾಗೂ ಗೌರವ ಸಲಹೆಗಾರ ಟಿ.ಆರ್.ವಾಸುದೇವ್, ಸಂಘದ ಸದಸ್ಯರಾದ ಲೇಖಾ ಪ್ರಮೋದ್ ಅವರು ರಚಿಸಿರುವ ಶೀರ್ಷಿಕೆ ಗೀತೆಯನ್ನು ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಪೊಲೀಸ್ ಅಧಿಕಾರಿ ಅಚ್ಚುತ್ತನ್ ನಾಯರ್ ಬಿಡುಗಡೆ ಮಾಡಿದರು. ಶ್ರಾವ್ಯ ಸುಬ್ರಮಣಿ ಪ್ರಾರ್ಥಿಸಿ, ಕೆ.ವಿ. ಧರ್ಮೇಂದ್ರ ಸ್ವಾಗತಿಸಿ, ಹೆಚ್.ಪಿ.ಅಶೋಕ್ ವಂದಿಸಿದರು. ಸಂಘದ ಮೃತ ಸದಸ್ಯರಿಗೆ ಸಭೆಯಲ್ಲಿ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.