ಕುಶಾಲನಗರ, ಜೂ. ೨: ಬೇಸಿಗೆ ಅವಧಿಯಲ್ಲಿ ಬೆಂಕಿಯಿAದ ಹಾನಿಗೊಳಗಾದ ಹಲವಾರು ಶ್ರೀಗಂಧದ ಮರಗಳಿಗೆ ನೀರು ಹಾಕಿ ಆರೈಕೆ ಮಾಡುವ ಮೂಲಕ ಮತ್ತೆ ಮರಗಳು ಚಿಗುರಿ ಬೆಳೆದು ನಿಂತಿರುವ ದೃಶ್ಯ ಸಮೀಪದ ಹೆಬ್ಬಾಲೆ -ಬಾಣಾವರ ರಸ್ತೆಯಲ್ಲಿರುವ ಭೈರಪ್ಪನ ಗುಡಿ ವ್ಯಾಪ್ತಿಯ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಕಾಣಬಹುದು.

ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮದ ಬಾಣಾವರ ರಸ್ತೆಯಲ್ಲಿರುವ ಭೈರಪ್ಪನ ಗುಡಿ ವ್ಯಾಪ್ತಿಯಲ್ಲಿ ಖಾಸಗಿ ಜಮೀನಿನಲ್ಲಿ ಬೆಳೆದು ನಿಂತಿದ್ದ ಹಲವು ಶ್ರೀಗಂಧದ ಮರಗಳನ್ನು ಬೆಂಕಿ ಹಾಕಿ ನಾಶಗೊಳಿಸಿರುವ ಬಗ್ಗೆ ಮಾರ್ಚ್ ೧೫ ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ನಾಡಿನ ಅಪರೂಪದ ಮರಗಳನ್ನು ಉಳಿಸುವ ಸಮಯ ಪ್ರಜ್ಞೆಯ ವರದಿಗೆ ದೊರೆತ ಸ್ಪಂದನ ಇದಾಗಿದೆ.

ನಿಡ್ತ ಮೀಸಲು ಅರಣ್ಯಕ್ಕೆ ಒತ್ತಿನಲ್ಲಿರುವ ಹೆದ್ದಾರಿ ರಸ್ತೆ ಬದಿಯ ಬೇಲಿ ಹಾಕಿರುವ ಖಾಸಗಿ ಜಮೀನೊಂದರಲ್ಲಿ ಪೊದೆಗಳಿಗೆ ಬೆಂಕಿ ಹಾಕುವ ಸಂದರ್ಭ ಜಾಗದಲ್ಲಿದ್ದ ಹಲವು ಶ್ರೀಗಂಧದ ಮರಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಘಟನೆ ಬಗ್ಗೆ ಶಕ್ತಿಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಕೂಡಲೇ ಸಂಬAಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಜಾಗದ ಮಾಲೀಕರಿಗೆ ಸುಟ್ಟು ಹೋಗಿರುವ ಗಿಡಗಳನ್ನು ನೀರು ಹಾಕಿ ನಿರ್ವಹಣೆ ಮಾಡುವ ಮೂಲಕ ಸಂರಕ್ಷಣೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಿರು ಬಿಸಿಲಿನ ಬೇಗೆಗೆ ಹಲವಾರು ಗಿಡ ಮರಗಳು ಸಂಪೂರ್ಣ ನಾಶವಾಗುವ ಪರಿಸ್ಥಿತಿ ಎದುರಾಗಿತ್ತು.

ಅರಣ್ಯ ಅಧಿಕಾರಿಗಳ ಸೂಚನೆಯಂತೆ ಜಾಗದ ಮಾಲೀಕರು ತನ್ನ ಕಾರ್ಮಿಕರ ಮೂಲಕ ಟ್ಯಾಂಕರ್‌ನಲ್ಲಿ ನೀರು ತರಿಸಿ ಬೆಂಕಿಯಿAದ ಹಾನಿಗೆ ಒಳಗಾದ ಶ್ರೀಗಂಧ ಗಿಡಗಳಿಗೆ ಆರೈಕೆ ಮಾಡಿದ ಹಿನ್ನೆಲೆಯಲ್ಲಿ ಅವುಗಳು ಮತ್ತೆ ಚಿಗುರಿ ನಿಂತಿರುವ ದೃಶ್ಯ ಇದೀಗ ಕಂಡು ಬಂದಿದೆ.

‘ಶಕ್ತಿ' ವರದಿ ಮೂಲಕ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮತ್ತು ಜಾಗದ ಮಾಲೀಕರ ಸೂಕ್ತ ಸ್ಪಂದನೆಯಿAದ ಇದೀಗ ಈ ಪ್ರದೇಶದಲ್ಲಿ ಹಲವಾರು ಶ್ರೀಗಂಧದ ಮರಗಳು ಮತ್ತೆ ಚಿಗುರಿ ತಲೆ ಎತ್ತಿ ನಿಂತಿವೆ.