ರಾತ್ರಿಯ ವೇಳೆ ಶುಭ್ರ ಆಗಸದಲ್ಲಿ ನಕ್ಷತ್ರ ವೀಕ್ಷಣೆಯಲ್ಲಿ ವಿಹರಿಸುವವರಿಗೆ ಮತ್ತು ಖಗೋಳಪ್ರಿಯರಿಗೆ ಕುತೂಹಲಕರ ಮಾಹಿತಿಯೊಂದು ಇಲ್ಲಿದೆ. ಜೂನ್ ೩ರಂದು (ಇಂದು) ಸೂರ್ಯೋದಯಕ್ಕೆ ಸ್ವಲ್ಪ ಮೊದಲು, ಬಾನಿನಲ್ಲಿ ೬ ಗ್ರಹಗಳ ಪಥ ಸಂಚಲನ ನಡೆಯಲಿದೆ.

ಸೂರ್ಯನ ಸುತ್ತ ಅಂಡಾಕಾರದಲ್ಲಿನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುವ ಬುಧ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳು ನೇರ ಸರಳ ರೇಖೆಯಲ್ಲಿ ಗೋಚರಿಸುವುದು ಈ ವಿದ್ಯಮಾನ.

ಜೂನ್ ೩ಕ್ಕೆ ಒಂದು ವಾರ ಮೊದಲಿನಿಂದ ಮತ್ತು ಜೂನ್ ೩ರ ನಂತರ ೧೦ ದಿನಗಳ ಕಾಲ ನಿರ್ದಿಷ್ಟ ಅಂತರದಲ್ಲಿ ಬರಿಗಣ್ಣಿನಿಂದ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ನಂತರ ಈ ವಿದ್ಯಮಾನವನ್ನು ಶುಭ್ರ ಆಗಸದಲ್ಲಿ ವೀಕ್ಷಿಸಬಹುದು.

ಅಪರೂಪದ ನೈಸರ್ಗಿಕ ವಿದ್ಯಮಾನದಲ್ಲಿ ಈ ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ತಮ್ಮ ಕಕ್ಷೆಗಳಲ್ಲಿ ಒಂದು ಸರಳ ರೇಖೆಯಲ್ಲಿರುವಂತೆ ಭಾಸವಾಗುತ್ತದೆ. ಈ ವಿದ್ಯಮಾನಕ್ಕೆ Pಟಚಿಟಿeಣ Pಚಿಡಿಚಿಜe ಎನ್ನುತ್ತಾರೆ. ಈ ಗ್ರಹಗಳು ಭೂಮಿಯಿಂದ ಅನತಿ ದೂರದಲ್ಲಿರುವುದರಿಂದ ಸೂರ್ಯನ ಸುತ್ತಲಿನ ಕಕ್ಷೆಯಲ್ಲಿ ಒಂದು ಮತ್ತೊಂದಕ್ಕಿAತ ಸ್ವಲ್ಪ ಮೇಲೆ, ಮತ್ತೊಂದು ಇನ್ನೊಂದಕ್ಕಿAತ ಸ್ವಲ್ಪ ಕೆಳಗೆ ಇದ್ದರೂ, ಅವು ಪರಸ್ಪರ ದೂರದಲ್ಲಿದ್ದರೂ, ಒಂದು ನಿರ್ದಿಷ್ಟ ಕೋನದಿಂದ ಸರಳ ರೇಖೆಯಲ್ಲಿರುವಂತೆ ಗೋಚರಿಸುತ್ತವೆ.

ಅಪರೂಪದ ನೈಸರ್ಗಿಕ ವಿದ್ಯಮಾನಕ್ಕೆ ಸಾಕ್ಷಿಯಾಗಲು ಖಗೋಳ ಪ್ರಿಯರು ದುರ್ಬೀನು, ದೂರದರ್ಶಕಗಳನ್ನು ಬಳಸುವ ಸುಸಂದರ್ಭವಿದು. ಮಂಗಳ ಮತ್ತು ಶನಿ ಗ್ರಹಗಳು ಬರಿಗಣ್ಣಿಗೆ ಸುಲಭವಾಗಿ ಗೋಚರಿಸಬಲ್ಲವು. ತಮ್ಮ ಕಕ್ಷೆಯಲ್ಲಿ ಸೂರ್ಯನ ಸಾಮೀಪ್ಯದಿಂದ ಬುಧ ಮತ್ತು ಗುರು ಗ್ರಹಗಳನ್ನು ಪತ್ತೆ ಹಚ್ಚುವುದು ಸ್ವಲ್ಪ ತ್ರಾಸದಾಯಕವಾಗಬಹುದು.

ಸೂರ್ಯನಿಂದ ದೂರವಿರುವ ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳನ್ನು ಗುರುತಿಸಲು ಉನ್ನತ ಸಾಮರ್ಥ್ಯದ ದುರ್ಬೀನು ಅಥವಾ ದೂರದರ್ಶಕಗಳು ಸೂಕ್ತ. ದೇಶದ ನಾನಾ ತಾರಾಲಯಗಳಲ್ಲಿ ಇವುಗಳ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಅಕ್ಷಿಪಟಲಕ್ಕೆ ಹಾನಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹಗಲಿನಲ್ಲಿ ದೂರದರ್ಶಕ, ಬೈನಾಕ್ಯುಲರ್‌ನಿಂದ ಈ ವಿದ್ಯಮಾನ ವೀಕ್ಷಿಸಲು ಪ್ರಯತ್ನಿಸುವುದು ಸೂಕ್ತವಲ್ಲ ಎಂಬುದು ಖಗೋಳತಜ್ಞರ ಎಚ್ಚರಿಕೆ.

ಮೂರು ಗ್ರಹಗಳು ಸರಳ ರೇಖೆಯಲ್ಲಿ ಗೋಚರಿಸುವುದು ಸಾಮಾನ್ಯ ವಿದ್ಯಮಾನ. ಹಾಗೆಯೇ ೪ ಗ್ರಹಗಳ ಜೋಡಣೆಯೂ ನಡೆಯುತ್ತಿರುತ್ತದೆ. ೫, ೬ ಅಥವಾ ೭ ಗ್ರಹಗಳು ನೇರವಾಗಿರುವ ರೇಖೆಯಲ್ಲಿ ಗೋಚರಿಸುವ ವಿದ್ಯಮಾನ ಅತಿ ವಿರಳ.

ಇದೇ ಮಾದರಿಯಲ್ಲಿ ಆಗಸ್ಟ್ ೨೮ರಂದು ೬ ಗ್ರಹಗಳ ಪಥ ಸಂಚಲನ ಮತ್ತೆ ಬಾನಂಗಳದಲ್ಲಿ ಗೋಚರಿಸಲಿದೆ. ೨೦೨೫ರ ಫೆಬ್ರವರಿ ೨೮ರಂದು ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಫ್ಚೂನ್ ಈ ೭ ಗ್ರಹಗಳೂ ನೇರ ಸರಳ ರೇಖೆಯಲ್ಲಿ ಗೋಚರಿಸಲಿವೆ.

ಈ ಎಲ್ಲಾ ವಿದ್ಯಮಾನಗಳ ವೀಕ್ಷಣೆಗೆ ಶುಭ್ರ ಆಗಸ ಅಗತ್ಯ. ಗ್ರಹಗಳು ಸೂರ್ಯನ ಸುತ್ತ ತಮ್ಮದೇ ಕಕ್ಷೆಗಳಲ್ಲಿ ಪರಿಭ್ರಮಣೆ ಮಾಡುವಾಗ ಸೃಷ್ಟಿಯಾಗುವ ಇಂತಹ ಕೌತುಕಗಳ ವೀಕ್ಷಣೆಗೆ ಮನೆಗಳ ಮೇಲ್ಚಾವಣಿ, ಸಮುದ್ರ ತೀರ, ಬೆಳಕಿನ ಮಾಲಿನ್ಯವಿರದ ತಾಣಗಳು ಸೂಕ್ತ. ಜೂನ್೩ ರಂದು ಬಾನಿನಲ್ಲಿ ಗ್ರಹಗಳನ್ನು ನೇರ ಸಾಲಿನಲ್ಲಿ ನೋಡುವ ಅನನ್ಯ ಅನುಭವಕ್ಕೆ ಮಂಜು ಮುಸುಕಿದ ವಾತಾವರಣವಾಗಲೀ, ಮೋಡ ಕವಿದ ವಾತಾವರಣವಾಗಲಿ ಅಡ್ಡಿಯಾಗದಿರಲಿ.

(ಸಂಗ್ರಹ)

ಕಲ್ಲುಮಾಡAಡ ದಿನೇಶ್ ಕಾರ್ಯಪ್ಪ, ಮಡಿಕೇರಿ.

ಮೊ. ೯೮೪೫೪೯೯೧೧೨