ನಾಪೋಕ್ಲು, ಜೂ. ೨: ನಾಪೋಕ್ಲುವಿನಲ್ಲಿ ಹೋಬಳಿ ಉಪತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ (೪೩) ಅನಾರೋಗ್ಯದಿಂದ ನಿಧನರಾದರು.
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಸವನ ಹಳ್ಳಿ ನಿವಾಸಿ ಸುನಿಲ್ ಕುಮಾರ್ ಶನಿವಾರ ನಾಪೋಕ್ಲುವಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯ ಮುಗಿಸಿ ಶನಿವಾರ ಸಂಜೆ ಮನೆಗೆ ತೆರಳಿದ್ದ ಸುನಿಲ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಕುಮಾರ್ ಇಂದು ನಿಧನ ಹೊಂದಿದ್ದಾರೆ. ಅವಿವಾಹಿತರಾಗಿರುವ ಸುನಿಲ್ ಕುಮಾರ್ ಅವರ ಅಂತ್ಯಕ್ರಿಯೆ ಬಸವನಹಳ್ಳಿಯ ಅವರ ಸಹೋದರಿಯ ಮನೆಯಲ್ಲಿ ಸೋಮವಾರ ಜರುಗಲಿದೆ.