ಸೋಮವಾರಪೇಟೆ,ಜೂ.೨: ಪಟ್ಟಣ ಸಮೀಪವಿರುವ ನಗರೂರು ಗ್ರಾಮದಲ್ಲಿ ಈಗಷ್ಟೇ ಅಭಿವೃದ್ಧಿ ಕಾಣುತ್ತಿರುವ ಬಡಾವಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಕಂಡುಬAದಿದ್ದು, ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮೃತನ ಕುಟುಂಬಸ್ಥರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರೂರು ಗ್ರಾಮದಲ್ಲಿ, ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅವರು ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಯಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕೆ.ಪಿ. ಲೋಕೇಶ ಹಾಗೂ ಬಿ.ಯು. ಹರ್ಷಿಣಿ ಅವರ ಪುತ್ರ, ಉಲ್ಲಾಸ್ (೨೧) ಎಂಬ ಯುವಕನ ಮೃತದೇಹ ಪತ್ತೆಯಾಗಿದೆ.

ಬಡಾವಣೆಯಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಉಲ್ಲಾಸ್‌ನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರು ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ, ಇದೊಂದು ಹತ್ಯೆ ಎಂದು ಪೊಲೀಸ್ ದೂರು ನೀಡಿದ್ದಾರೆ.

ಟ್ರಾನ್ಸ್ಫಾರ್ಮರ್‌ನ ಅಡ್ಡಲಾದ ಕಂಬಿಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಕಾಲುಗಳು ನೆಲಕ್ಕೆ ತಾಗುತ್ತಿದ್ದವು. ನಿನ್ನೆ ರಾತ್ರಿ ೯.೩೦ರವರೆಗೂ ಮೊಬೈಲ್‌ನಲ್ಲಿ ಮಾತನಾಡಿದ್ದ ಯುವಕ, ಇಂದು ಬೆಳಿಗ್ಗೆ ಇಂತಹ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸಂಶಯಕ್ಕೆಡೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮೃತನ ಸಂಬAಧಿಕರು ದೂರಿನಲ್ಲಿ ಮನವಿ ಮಾಡಿದ್ದಾರೆ. ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಹಾಗೂ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುಟುಂಬಸ್ಥರು, ಮೃತದೇಹವನ್ನು ಅಷ್ಟರಲ್ಲಾಗಲೇ ಕೆಳಗಿಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ದಿನ ಕಿರಗಂದೂರಿನ ಕೆಲವರು ಮನೆಗೆ ಆಗಮಿಸಿ ಗಲಾಟೆ ಮಾಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಈ ಕೃತ್ಯ ನಡೆದಿದೆ. ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಅಲ್ಲಿ ಯವರೆಗೂ ಮೃತದೇಹವನ್ನು ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಪೊಲೀಸ್ ಅಧಿಕಾರಿಗಳು ಆಗಮಿಸಿ ದೂರು ನೀಡಿದ ನಂತರ ತನಿಖೆ ನಡೆಸುವು ದಾಗಿ ಭರವಸೆ ನೀಡಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಸಾಗಿಸಲಾಯಿತು.

ಘಟನೆಯ ಹಿನ್ನೆಲೆ: ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕೆ.ಪಿ. ಲೋಕೇಶ್ ಹಾಗೂ ಹರ್ಷಿಣಿ ದಂಪತಿ ಪುತ್ರ ಉಲ್ಲಾಸ್, ಈ ಹಿಂದೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ತಿಂಗಳ ಹಿಂದಷ್ಟೇ ಗ್ರಾಮದ ಸುಗ್ಗಿ ಹಬ್ಬಕ್ಕೆ ಬಂದು ಇಲ್ಲೇ ನೆಲೆಸಿದ್ದ. ಪಟ್ಟಣದ ಹಾರ್ಡ್ವೇರ್ ಅಂಗಡಿಯೊAದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಲ್ಲಾಸ್, ಕಿರಗಂದೂರು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಈ ವಿಷಯ ಹುಡುಗಿಯ ಮನೆಯವರಿಗೆ ತಿಳಿದು, ನಿನ್ನೆ ದಿನ ಹಾನಗಲ್ಲು ಶೆಟ್ಟಳ್ಳಿಗೆ ಆಗಮಿಸಿ ಜಗಳ ಮಾಡಿದ್ದರು.

ಇದೇ ಘಟನೆಗೆ ಸಂಬAಧಿಸಿ ದಂತೆ ಮನೆಯವರು ಪೊಲೀಸ್ ದೂರು ನೀಡಲೆಂದು ಠಾಣೆಗೆ ಆಗಮಿಸಿದ್ದು, ಉಲ್ಲಾಸ್‌ಗೆ ಮೊಬೈಲ್ ಕರೆ ಮಾಡಿ ಬರುವಂತೆ ತಿಳಿಸಿದ್ದರು. ರಾತ್ರಿ ೮ ಗಂಟೆಯ ಸಮಯದಲ್ಲಿ ತಾನು ಕೂಡಿಗೆಯಿಂದ ಬರುತ್ತಿರುವುದಾಗಿ ಹೇಳಿದ್ದ ಉಲ್ಲಾಸ್, ನಂತರ ಮೊಬೈಲ್ ಕರೆಗೆ ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಬಡಾವಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತಂದೆಯಿAದ ದೂರು: ಉಲ್ಲಾಸ್‌ನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಂದೆ ಲೋಕೇಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಿರಗಂದೂರು ಗ್ರಾಮದ ಪವನ್ ಮತ್ತು ಚರಣ್ ಸೇರಿದಂತೆ ಇತರರು ನಿನ್ನೆ ಸಂಜೆ ೫ ಗಂಟೆ ಸುಮಾರಿಗೆ ಮನೆಗೆ ಆಗಮಿಸಿ ಜಗಳ ಮಾಡಿದ್ದು, ತನಗೂ ಸೇರಿದಂತೆ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರೊಂದಿಗೆ ತಮ್ಮ ಮಗ ಉಲ್ಲಾಸ್‌ನನ್ನು ೨ ದಿನಗಳಲ್ಲಿ ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದೀಗ ತಮ್ಮ ಪುತ್ರ ಸಾವನ್ನಪ್ಪಿದ್ದು, ಈ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರ ಪೇಟೆ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು. ಇದರೊಂದಿಗೆ ಮಡಿಕೇರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷö್ಯಗಳನ್ನು ಸಂಗ್ರಹಿಸಿದರು.