ಸಿದ್ದಾಪುರ, ಜೂ. ೨: ಸದಾ ಕರ್ತವ್ಯದ ಒತ್ತಡದಲ್ಲಿರುವ ಪೊಲೀಸರು ಬಿಡುವಿನ ಸಮಯದಲ್ಲಿ ಒಂದಿಷ್ಟು ವ್ಯಾಯಾಮ, ವಾಕಿಂಗ್, ಯೋಗ ಸೇರಿದಂತೆ ಆರೋಗ್ಯ ಕಾಳಜಿಗಾಗಿ ಹಲವು ರೀತಿಯ ಅಭ್ಯಾಸಗಳನ್ನ ಮಾಡುವುದು ಸಹಜ ಆದರೆ ಇದ್ದಕ್ಕಿದ್ದಂತೆ ಬೆಳ್ಳಂಬೆಳಿಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಸಿಬ್ಬಂದಿಗಳು ಸೇರಿ ಬೆಟ್ಟ ಹತ್ತಿ ಅರಣ್ಯದ ಪ್ರಕೃತಿ ಸೌಂದರ್ಯವನ್ನ ಸವಿಯುವ ಮೂಲಕ ಬೆಟ್ಟದ ತಪ್ಪಲಿನ ಕಲ್ಲು ಬಂಡೆಗಳ ನಡುವೆ ಹತ್ತಿ ಇಳಿಯುವ ಸಾಹಸಮಯ ತರಬೇತಿ ಪಡೆದರು. ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭದಲ್ಲಿ ಪ್ರವಾಹ ಪ್ರಕೃತಿ ವಿಕೋಪ ಸೇರಿದಂತೆ ಹಲವು ಅನಾಹುತಗಳನ್ನು ತಡೆಯಲು ಹಾಗೂ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ದಾಪುರ ಪೊಲೀಸರು ಸಜ್ಜಾಗಿದ್ದಾರೆ.

ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಠಾಣೆಯ ೩೭ ಸಿಬ್ಬಂದಿ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದೊಂದಿಗೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟಕ್ಕೆ ಚಾರಣ ತೆರಳಿ ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯದೊAದಿಗೆ ಕೆಲಕಾಲ ಕಳೆದಿದ್ದಾರೆ. ನಂತರ ಕಲ್ಲು ಬಂಡೆಗಳ ನಡುವೆ ಕಡಿದಾದ ಮಾರ್ಗಗಳಲ್ಲಿ ಸಂಚರಿಸಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ರಕ್ಷಣಾ ಕಾರ್ಯದ ಬಗ್ಗೆ ತರಬೇತಿ ಪಡೆದುಕೊಂಡರು. ಪೊಲೀಸ್ ಇಲಾಖೆಯ ನಿರ್ದೇಶನಗಳನ್ನ ಪಾಲಿಸುವುದರೊಂದಿಗೆ ಸಿಬ್ಬಂದಿಗಳು ಸಾಹಸಮಯ ತರಬೇತಿಯಲ್ಲಿ ಪಾಲ್ಗೊಂಡರು.

ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಅವರ ನಿರ್ದೇಶನ ದಂತೆ ಡಿವೈಎಸ್ಪಿ ಮಹೇಶ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಪಿ.ಕೆ ರಾಜು ಮಾರ್ಗದರ್ಶನದಲ್ಲಿ ಪ್ರವಾಹ ಪ್ರಕೃತಿ ವಿಕೋಪ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇಲಾಖೆಯ ನಿರ್ದೇಶನದಂತೆ ಗದ್ದಿಗೆ ಬೆಟ್ಟ ಏರಿ ಇಳಿಯುವ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಈ ಸಂದರ್ಭ ಅಪರಾಧ ಪತ್ತೆದಳದ ಪಿಎಸ್‌ಐ ಹಾಲಪ್ಪ, ಶ್ರೀಮಂಗಲ ಪಿಎಸ್‌ಐ ಶಿವಾನಂದ, ಹೊನ್ನಂಪೇಟೆ ಪಿಎಸ್‌ಐ ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

-ಎಸ್.ಎA ಮುಬಾರಕ್