ಶನಿವಾರಸಂತೆ, ಜೂ.೨ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಬ್ಲಾಸಂ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಸಚಿನ್, ಡಾ.ಮೋನಿಷಾ, ಡಾ.ಪ್ರಕಾಶ್, ತಂಡದವರಾದ ಯಶ್ವಂತ್, ಲ್ಯಾಸ್ಸಿ, ರೇಷ್ಮಾ, ಮೋನಿಕಾ ಶಿಬಿರದಲ್ಲಿ ಹಾಜರಿದ್ದ ಬೆರಳೆಣಿಕೆಯ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಬಗ್ಗೆ ಸೂಕ್ತ ಸಲಹೆ, ಮಾಹಿತಿ ನೀಡಿದರು.

ಆದರೆ, ವೈದ್ಯರ ತಂಡ ಅಗತ್ಯವಾದ ಉಚಿತ ಔಷಧಿಗಳನ್ನು ತರದಿದ್ದ ಕಾರಣ, ಬಹುತೇಕ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಳ್ಳಲು ಇಚ್ಚಿಸದೇ ಆಕ್ಷೇಪ ವ್ಯಕ್ತಪಡಿಸಿದರಿಂದ ಶಿಬಿರ ಮುಂದೂಡಲ್ಪಟ್ಟಿತು. ಉಚಿತ ಔಷಧಿಗಳು ಲಭ್ಯವಿಲ್ಲದ ಕಾರಣ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮುಂದೂಡಲಾಗಿದೆ.ಮುAದಿನ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿಗಳ ವ್ಯವಸ್ಥೆಯೊಂದಿಗೆ ಶಿಬಿರವನ್ನು ಆಯೋಜಿಸಬೇಕು ಎಂದು ಆಗ್ರಹಿಸಿದ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎಂ.ಜೆ.ವಿಠಲ್ ನಾಗರಾಜ್, ಕಾರ್ಯದರ್ಶಿ ಬಿ.ಎಂ. ಲೋಕೇಶ್, ಖಜಾಂಚಿ ಬಿಂದಮ್ಮ, ನಿರ್ದೇಶಕ ಎಂ.ಕೃಷ್ಣಾ, ಸಿಬ್ಬಂದಿ ಗೀತಾ ಇತರರು ಹಾಜರಿದ್ದರು.