ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಜೂ.೨ : ಕೊಡಗು ಜಿಲ್ಲೆ ಹಾಕಿ ಕ್ರೀಡೆಯಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಹತ್ತಾರು ಹಾಕಿ ಪಂದ್ಯಾವಳಿಗಳು ಸೇರಿದಂತೆ ಈ ವರ್ಷ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದಂತಹ ವಿಶಿಷ್ಟವಾದ ಹಾಕಿ ಹಬ್ಬವೂ ವಾರ್ಷಿಕವಾಗಿ ಜರುಗುತ್ತಾ ಬಂದಿದೆ. ಇದೀಗ ಹೊಸ ಪ್ರಯತ್ನ ಹಾಗೂ ಹೊಸ ಪರಿಕಲ್ಪನೆಯ ಹಾಕಿ ಪಂದ್ಯಾವಳಿಯೊAದಕ್ಕೂ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗು ಸಜ್ಜಾಗುತ್ತಿದೆ.
ಇದೇ ಪ್ರಥಮ ಬಾರಿಗೆ ಕೇರಳ-ಕೂರ್ಗ್ ಮಾಸ್ಟರ್ಸ್ ಕಪ್ - ೨೦೨೪ ಎಂಬ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಪೊನ್ನಂಪೇಟೆಯಲ್ಲಿ ಇದೇ ಜೂನ್ ೨೮ ರಿಂದ ೩೦ರ ತನಕ ಈ ವಿಶೇಷವಾದ ಹಾಕಿ ಪಂದ್ಯಾಟಕ್ಕೆ ಸಿದ್ಧತೆ ನಡೆದಿದೆ.
ಕೇರಳ ಮಾಸ್ಟರ್ಸ್ ಹಾಕಿ ಹಾಗೂ ಕೂರ್ಗ್ ಹಾಕ್ಸ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಾರಿಯ ಈ ಪಂದ್ಯಾಟದಲ್ಲಿ ಸುಮಾರು ೨೨ ತಂಡಗಳು ಭಾಗವಹಿಸಲಿವೆ ಎಂದು ತಿಳಿದು ಬಂದಿದೆ. ಪುರುಷರು ಹಾಗೂ ಮಹಿಳಾ ವಿಭಾಗದ ಪಂದ್ಯಾಟ ಇದಾಗಿದೆ. ಎರಡೂ ವಿಭಾಗದಲ್ಲಿ ೪೦ + ಹಾಗೂ ೩೨-೪೦ ಎಂಬ ವಯೋಮಿತಿಯಲ್ಲಿ ಈ ಕೇರಳ-ಕೂರ್ಗ್ ಮಾಸ್ಟರ್ಸ್ ಕಪ್ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಹಲವು ಮಾಜಿ ಅಂತರರಾಷ್ಟಿçÃಯ, ರಾಷ್ಟಿçÃಯ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸದ್ಯದ ಮಟ್ಟಿಗೆ ಕೊಡಗಿನ ಹಲವು ತಂಡಗಳೊAದಿಗೆ ಕೇರಳ ರಾಜ್ಯದ ನಾಲ್ಕು ತಂಡ ಹಾಗೂ ಬೆಂಗಳೂರಿನ ಮೂರು ತಂಡಗಳು ಭಾಗವಹಿಸಲಿರುವುದು ಖಚಿತವಾಗಿದೆ.
ಉದ್ದೇಶವೇನು ?
ಕೇರಳ ಹಾಗೂ ಕೊಡಗು ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ದೈವಾರಾಧನೆ ಸಂಕೇತವಾದ ಎರಡು ರಾಜ್ಯಗಳು. ಕೊಡಗಿನ ದೈವ ಶಕ್ತಿಗಳು ಕೇರಳವನ್ನೇ ಅನುಕರಿಸುತ್ತವೆ. ಕ್ರೀಡೆಯಲ್ಲಿ ಕೇರಳ ಮಾಸ್ಟರ್ಸ್ ಹಾಕಿ ಹಾಗೂ ಕೂರ್ಗ್ ಹಾಕ್ಸ್ ಜೊತೆಗೂಡಿ, ಜೂನ್ ೨೮ ರಿಂದ ೩೦ರವರೆಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಮಾಸ್ಟರ್ಸ್ ಕಪ್ ೨೦೨೪ ಹಾಕಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸುತ್ತಿವೆ.
ಬಹಳಷ್ಟು ಅಂತರರಾಷ್ಟಿçÃಯ ಹಾಗೂ ರಾಜ್ಯ ಆಟಗಾರರು ತಮ್ಮ ಆಟದಿಂದ ನಿವೃತ್ತಿಯನ್ನು ಪಡೆದ ನಂತರ ತಮ್ಮ ದೇಹವನ್ನು ಸದೃಢವಾಗಿರಿಸಲು, ಯುವ ಆಟಗಾರರಿಗೆ ತಾವು ಕಲಿತ ಹಾಕಿಯ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಅವರಿಗೂ ಕಲಿಯಲು ಒಂದು ಅವಕಾಶವನ್ನು ಕಲ್ಪಿಸಿದಂತಾಗುತ್ತದೆ. ಬಹಳಷ್ಟು ರಾಜ್ಯಗಳಲ್ಲಿ ವಯಸ್ಕರ ಪಂದ್ಯಾವಳಿ ನಡೆಯುವುದು ಬಹಳಷ್ಟು ಸಹಜ. ಮುಂಬೈಯಲ್ಲAತೂ ಗಲ್ಲಿ ಗಲ್ಲಿಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಇದನ್ನು ನೋಡಬಹುದು.
೧೯೮೦ರ ಮಾಸ್ಕೋ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದ ಮೆರ್ವಿನ್ ಫರ್ನಾಂಡಿಸ್ ಒಬ್ಬ ಕಲಾತ್ಮಕ ಆಟಗಾರ, ಈಗಲೂ ತಮ್ಮ ಇಳಿ ವಯಸ್ಸಿನಲ್ಲೂ ಈ ರೀತಿಯ ಪಂದ್ಯಾವಳಿಗಳನ್ನು ಆಡುತ್ತಾ, ಬಹಳಷ್ಟು ಜನ- ಮನ ಗೆದ್ದಿದ್ದಾರೆ. ವಿಶ್ವಕಪ್ ಗೆದ್ದ ಲೆಸ್ಲಿ ಫರ್ನಾಂಡಿಸ್ ಕೂಡ ಈಗಲೂ ತಮ್ಮ ಇಳಿ ವಯಸ್ಸಿನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ.
ಮೂಲತಃ ಹಾಲುಗುಂದದವರಾದ ಮೇಕೇರಿರ ಬೆಲ್ಲು ಕುಟ್ಟಪ್ಪ ಸದಾ ಹಾಕಿಯನ್ನು ಪ್ರೀತಿಸುವ ಹಾಗೂ ಎಲ್ಲಾ ಜನಾಂಗದ ಆಟಗಾರರನ್ನು ಒಟ್ಟುಗೂಡಿಸುವ ಒಂದು ಆಯಸ್ಕಾಂತ. ಹಾಕಿ ಬೆಳೆಯಬೇಕು ಎಂಬ ಉದ್ದೇಶದಿಂದ ಇವರು ಈ ಚಿಂತನೆಯನ್ನು ಪೊನ್ನಂಪೇಟೆಯಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊಡಗಿನ ಆಟಗಾರರನ್ನು ದುಬೈ ಹಾಗೂ ಮಸ್ಕತ್‌ನಲ್ಲಿ ಇವರು ಆಡಿಸಿದ್ದಾರೆ ಎಂದು ಹಾಕಿ ವೀಕ್ಷಕ ವಿವರಣೆಗಾರರಾದ ಚೆಪ್ಪುಡೀರ ಕಾರ್ಯಪ್ಪ ಅವರು ತಿಳಿಸಿದ್ದಾರೆ.
ಬೆಲ್ಲು ಕುಟ್ಟಪ್ಪ ಅವರು ಕುಂಡ್ಯೋಳAಡ ಹಾಕಿ ಹಬ್ಬದಲ್ಲಿ ಪ್ರತಿಭಾವಂತ ಹಾಕಿ ಆಟಗಾರ ಹಾಗೂ ಆಟಗಾರ್ತಿಗೆ ಹಾಕಿ ಸ್ಟಿಕ್ ಅನ್ನು ಉದಾರವಾಗಿ ನೀಡಿದರು. ಇವರ ಈ ನಿರಂತರ ಸೇವೆಯನ್ನು ಗುರುತಿಸಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಂಡ್ಯೋಳAಡ ಹಾಕಿ ಹಬ್ಬದಲ್ಲಿ ಇವರನ್ನು ಸನ್ಮಾನಿಸಲಾಯಿತು ಎಂದು ಕಾರ್ಯಪ್ಪ ನೆನಪಿಸಿಕೊಂಡಿದ್ದಾರೆ. ಇದೀಗ ಬೆಲ್ಲು ಕುಟ್ಟಪ್ಪ ಅವರು ಈ ಪಂದ್ಯಾವಳಿಯ ಕೊಡಗಿನ ಸಂಚಾಲಕರಾಗಿದ್ದಾರೆ.
ಕೊಡಗಿನ ಎಲ್ಲಾ ಹಾಕಿ ಆಟಗಾರರು ಖುದ್ದಾಗಿ ಬಂದು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ, ಹಾಕಿಗೆ ಉತ್ತೇಜನ ನೀಡಬೇಕು. ಪ್ರಥಮ ಬಾರಿಗೆ ಎಲ್ಲರನ್ನು ಜಾತಿ-ಮತ-ಭೇದವಿಲ್ಲದೆ ಒಗ್ಗೂಡಿಸುವ ಈ ಹಾಕಿ ಪಂದ್ಯಾವಳಿಗೆ ಜನರು ಪಾಲ್ಗೊಂಡು ಸಹಕರಿಸಬೇಕು. ಯುವ ಆಟಗಾರರಿಗೆ ಉತ್ತಮ ಸಂದೇಶವನ್ನು ಹಾಗೂ ಈ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ತಾವುಗಳು ಸಹಕರಿಸಬೇಕು ಎಂದು ಕಾರ್ಯಪ್ಪ ಅವರು ವಿನಂತಿಸಿದ್ದಾರೆ.
ಮತ್ತೊAದು ವಿಶೇಷ
ಈ ಪಂದ್ಯಾವಳಿಯಲ್ಲಿ ಯಾವುದೇ ಜಾತಿ-ಮತದ ಬೇಧವಿಲ್ಲದೆ ಹಿರಿಯ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರು ಇದು ಪರಸ್ಪರ ಬಾಂಧವ್ಯ-ಸ್ನೇಹಾಚಾರ ಬೆಸೆಯುವ ಪ್ರಯತ್ನವಾಗಿದೆ. ಎಲ್ಲಾ ಜಾತಿ - ಧರ್ಮದ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳಿಗೆ ನೋಂದಣಿ ಶುಲ್ಕ ಇಲ್ಲ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿಯಿತ್ತರು. ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಡಿ.ವೈ.ಎಸ್.ಎಸ್. ಸಹಕಾರದಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದೆ.
ತಂಡಗಳು : ಬೆಂಗಳೂರಿನಿAದ ನಾಲ್ಕು ತಂಡ, ಕೇರಳದಿಂದ ನಾಲ್ಕು ತಂಡ ಸೇರಿದಂತೆ ಕೊಡಗಿನ ಹೆಸರಿನಲ್ಲಿ ಟೀಮ್ ಕೂರ್ಗ್ ಹಾಕ್ಸ್, ಕೂರ್ಗ್ ಸೌತ್, ಟರ‍್ಸ್ ಇಲವೆನ್, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ಬೊಟ್ಟಿಯತ್‌ನಾಡ್, ಕೊಡವ ಸಮಾಜ ನಾಪೋಕ್ಲು ಸೇರಿದಂತೆ ಪುರುಷರ ವಿಭಾಗದಲ್ಲಿ ಸುಮಾರು ೧೬ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ೬ ತಂಡಗಳು ಸೇರಿ ಒಟ್ಟು ೨೨ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದ್ದು, ಹಾಕಿ ಅಭಿಮಾನಿಗಳು ಪ್ರೋತ್ಸಾಹ ನೀಡುವಂತೆ ಅವರು ಕೋರಿದ್ದಾರೆ.