ಕಣಿವೆ, ಜೂ.೩: ಕಳೆದ ಹದಿನೆಂಟು ತಿಂಗಳ ಹಿಂದೆ ರಾಜ್ಯ ಸರ್ಕಾರದಿಂದ ಹೊಸದಾಗಿ ಆರಂಭ ಗೊಂಡ ಕೊಡಗು ವಿಶ್ವವಿದ್ಯಾನಿಲಯ ಮರಳಿ ಮಂಗಳೂರು ವಿಶ್ವ ವಿದ್ಯಾನಿಲ ಯಕ್ಕೆ ವಿಲೀನ ಗೊಳ್ಳುವುದೇ....? ಹೀಗೊಂದು ಪ್ರಶ್ವೆ ಎರಡೂ ವಿ.ವಿ.ಗಳ ಅಂಗಳದಲ್ಲಿ ಹರಿದಾಡುತ್ತಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕೊಡಮಾಡಿದ ಕೊಡಗು ವಿಶ್ವ ವಿದ್ಯಾಲಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಭಿವೃದ್ದಿಯಿಂದ ವಂಚಿತಗೊAಡಿದೆ ಎಂಬ ಅಸಮಾಧಾನ ವ್ಯಾಪಕವಾಗಿದೆ. ಸರ್ಕಾರ ಅಭಿವೃದ್ಧಿಗೆ ಪೂರಕವಾದ ಅನುದಾನವನ್ನು ಬಿಡುಗಡೆಗೊಳಿಸದ ಕಾರಣ ಕೊಡಗು ವಿವಿ ಮೇಲೇಳ ಲಾಗದೆ ನರಳುತ್ತಾ ಒದ್ದಾಡುತ್ತಿದೆ.

ಮಂಗಳೂರು ವಿವಿಗೆ ಮರಳಿಸಲು ಪ್ರಾಧ್ಯಾಪಕರ ಪತ್ರ

ಕೊಡಗು ವಿಶ್ವವಿದ್ಯಾಲಯ ಹೊಸದಾಗಿ ಘೋಷಣೆಗೊಂಡ ಸಂದರ್ಭ ಕೊಡಗಿನವರೇ ಆದ ಕೆಲವೊಂದು ಮಂದಿ ಹಿರಿಯ ಪ್ರಾಧ್ಯಾಪಕರು ನೂತನ ವಿವಿಗೆ ಕುಲಪತಿಗಳಾಗಲು ಹವಣಿಸಿದ್ದರು. ಆದರೆ ಬಾಗಲಕೋಟೆ ಮೂಲದ ಡಾ.ಅಶೋಕ್ ಸಂಗಪ್ಪ ಆಲೂರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು.

ಈ ಮಧ್ಯೆ ಕೊಡಗು ವಿವಿ ಯನ್ನು ಮಂಗಳೂರು ವಿವಿಗೆ ಮರಳಿಸುವಂತೆ ಕಳೆದ ಕೆಲ ತಿಂಗಳ ಹಿಂದೆ ಚಿಕ್ಕಳುವಾರದ ವಿವಿ ಕೇಂದ್ರದ ಹಲವು ಪ್ರಾಧ್ಯಾಪಕರುಗಳು (ಓರ್ವ ಮಹಿಳಾ ಪ್ರಾಧ್ಯಾಪಕಿಯನ್ನು ಹೊರತುಪಡಿಸಿ) ಸಾಮೂಹಿಕವಾಗಿ ರಾಜ್ಯ ಸರ್ಕಾರ ಹಾಗೂ ಮಂಗಳೂರು ವಿವಿ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ‘ಶಕ್ತಿ’ ಗೆ ಲಭಿಸಿದೆ.

ಕೊಡಗು ವಿವಿಗೆ ಕೇವಲ ೨೪ ಕಾಲೇಜುಗಳು

ಕೊಡಗು ವಿವಿಯಲ್ಲಿ ಅಭಿವೃದ್ದಿಗೆ ಸಂಬAಧಿತವಾಗಿ ಯಾವುದೇ ರೀತಿಯ ಮೂಲ ಬಂಡವಾಳವಿಲ್ಲ. ಯಾವುದೇ ಅನುದಾನಗಳೂ ಇಲ್ಲ. ಸರ್ಕಾರದಿಂದ ನಯಾಪೈಸೆ ಹಣ ಬರಲಿಲ್ಲ. ವಿವಿಯ ಅಭಿವೃದ್ದಿಯ ವಿಚಾರದಲ್ಲಿ ಒಂದಷ್ಟು ಕನಸು ಕಟ್ಟುವ ಮೂಲಕ ಕಾಯಕವೇ ಕೈಲಾಸ ಎಂಬAತೆ ಕರ್ತವ್ಯಗೈಯುತ್ತಿದ್ದ ನೂತನ ಕುಲಪತಿಗಳಾದ ಡಾ.ಅಶೋಕ್ ಸಂಗಪ್ಪ ಆಲೂರ ಅವರ ಪರಿಶ್ರಮ ಹಾಗೂ ಉತ್ತಮ ಸಂಪರ್ಕದಿAದಾಗಿ ಕೆಲವೊಂದು ಖಾಸಗಿ ಸಂಸ್ಥೆಗಳು ಕೊಡಗು ವಿವಿಗೆ ಅನುದಾನ ನೀಡಲು ಮುಂದಾಗಿದ್ದವು.

ಆದರೆ ಕೊಡಗು ವಿವಿಯನ್ನು ಮುಚ್ಚುವ ಬಗ್ಗೆ ಒಳಗೊಳಗೆ ಗುಮಾನಿಗಳು ಕೇಳಿ ಬಂದ ಕಾರಣ ದಾನಿಗಳು ಕೂಡ ಹಿಂದೆ ಸರಿದರು ಎನ್ನಲಾಗುತ್ತಿದೆ. ಜೊತೆಗೆ ಕೊಡಗು ವಿವಿ ವ್ಯಾಪ್ತಿಯಲ್ಲಿ ಕೇವಲ ೨೪ ಕಾಲೇಜುಗಳು ಮಾತ್ರವಿದ್ದು ಇವುಗಳಿಂದ ವಿವಿಗೆ ಯಾವುದೇ ರೀತಿಯ ಆದಾಯವನ್ನು ವಿವಿ ನಿರೀಕ್ಷಿಸುವಂತಿಲ್ಲ. ಹಾಗಾಗಿ ಕೊಡಗು ವಿವಿಯನ್ನು ಮರಳಿ ಮಂಗಳೂರು ವಿವಿಗೆ ವಿಲೀನಗೊಳಿಸಬೇಕೆಂಬ ಒತ್ತಾಯ ಒಳಗೊಳಗೆ ಬಲವಾಗುತ್ತಿದೆ ಎನ್ನಲಾಗುತ್ತಿದೆ.

(ಮೊದಲ ಪುಟದಿಂದ)

ಇನ್ನೆರಡು ತಿಂಗಳಲ್ಲಿ ಆಡಳಿತಾತ್ಮಕ ವ್ಯವಹಾರ ಸ್ಥಗಿತ

ಕೊಡಗು ವಿಶ್ವವಿದ್ಯಾಲಯ ದೊಂದಿಗೆ ಕಳೆದ ಅನೇಕ ವರ್ಷ ಗಳಿಂದ ಹೊಂದಿದ್ದ ಆಡಳಿತಾತ್ಮಕವಾದ ವ್ಯವಹಾರವನ್ನು ಇನ್ನೆರಡು ತಿಂಗಳಲ್ಲಿ ಸ್ಥಗಿತಗೊಳಿಸುವು ದಾಗಿ ಮಂಗಳೂರು ವಿವಿಯ ಆಡಳಿತ ವಿಭಾಗದಿಂದ ಕೇಳಿ ಬರುತ್ತಿದೆ. ಹಾಗೆಯೇ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನೊಂದಿಗೆ ಹೊಂದಿದ್ದ ಶೈಕ್ಷಣಿಕ ವ್ಯವಹಾರ ಮುಂದಿನ ಒಂದು ವರ್ಷದೊಳಗೆ ಸ್ಥಗಿತಗೊಳ್ಳಲಿರುವುದಾಗಿ ಬಲ್ಲ ಮೂಲಗಳು ‘ಶಕ್ತಿ' ಗೆ ಮಾಹಿತಿ ನೀಡಿವೆ.

ಕೊಡಗು ವಿವಿ : ಗಂಭೀರ ಚರ್ಚೆ ಅನಿವಾರ್ಯ

ಕೊಡಗು ಜಿಲ್ಲೆಗೆ ಪ್ರತ್ಯೇಕ ವಿವಿಯನ್ನು ನೀಡಿದ ಮೇಲೆ ಪೂರಕವಾದ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸದೇ ಇರುವುದು ಸರಿಯಲ್ಲ. ಹಾಗಾಗಿ ಕೊಡಗು ವಿವಿ ಉಳಿಯಬೇಕಾದರೆ ಕೂಡಲೇ ರಾಜ್ಯ ಸರ್ಕಾರ ಕನಿಷ್ಟ ನೂರು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಿ. ಇಲ್ಲವೇ ಸಂಪೂರ್ಣವಾಗಿ ವಿವಿಯ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಸಂಶೋಧನಾ ಕೇಂದ್ರವಾಗಿ ಉಳಿಸಿಕೊಳ್ಳಲಿ ಎಂಬ ವಿಚಾರದ ಬಗ್ಗೆಯೂ ಜಿಲ್ಲೆಯ ಪ್ರಜ್ಞಾವಂತರಿAದ ಗಂಭೀರ ಚರ್ಚೆಯಾಗಬೇಕಿದೆ.

ಉನ್ನತ ಶಿಕ್ಷಣಕ್ಕೆ ದೂರ ಹೋಗುವುದು ತಪ್ಪಬೇಕಿದೆ

ದೇಶದಲ್ಲಿಯೇ ವಿಶೇಷವಾದ ಸಂಸ್ಕೃತಿ, ಸಂಪ್ರದಾಯಗಳನ್ನು ಹೊಂದಿರುವ ಕೊಡಗು ಜಿಲ್ಲೆಯ ಮಂದಿ ಉನ್ನತ ಶಿಕ್ಷಣ ಅರಸಿ ದೂರದ ಪ್ರದೇಶಗಳಿಗೆ ತೆರಳಬಾರದು. ಅವರಿಗೆ ಬೇಕಾದಂತಹ ಶಿಕ್ಷಣ ಕೊಡಗಿನಲ್ಲಿಯೇ ದೊರಕುವಂತಾಗಬೇಕಿದೆ. ವಿವಿ ಬೇಕೆಂದಲ್ಲಿ ಸರ್ಕಾರದ ಕಣ್ತೆರೆಸಿ ಸೂಕ್ತ ಅನುದಾನ ತರುವಷ್ಟರ ಮಟ್ಟಿನ ಹೋರಾಟ ರೂಪುಗೊಳ್ಳಬೇಕಿದೆ.

-ವಿಶೇಷ ವರದಿ : ಕೆ.ಎಸ್.ಮೂರ್ತಿ ನಿರ್ಧಾರ ಕೈಗೊಂಡಿಲ್ಲ

ಕೊಡಗು ವಿವಿಯನ್ನು ಮಂಗಳೂರು ವಿವಿಯ ಜೊತೆ ವಿಲೀನಗೊಳಿಸುವ ಬಗ್ಗೆ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ. ತಿಂಗಳ ವೇತನ ಪಾವತಿ ಆಗದ ಬಗ್ಗೆ ಹಲವು ಉಪನ್ಯಾಸಕರು ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ್ದು ಈ ಬಗ್ಗೆ ಅವರುಗಳನ್ನು ತಾನು ಸಂಬAಧಿತ ಸಚಿವರ ಬಳಿ ಕರೆದುಕೊಂಡು ಹೋಗಿದ್ದೆ, ಅಲ್ಲಿ ಉಪನ್ಯಾಸಕರು ಕೊಡಗು ವಿವಿಯನ್ನು ಮಂಗಳೂರು ವಿವಿಯೊಂದಿಗೆ ವಿಲೀನ ಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಆ ಸಂದರ್ಭದಲ್ಲಿ ಸಚಿವರು ಜಿಲ್ಲೆಯ ಶಾಸಕರುಗಳ ಅಭಿಪ್ರಾಯವನ್ನು ಪಡೆದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬುದಾಗಿ ಹೇಳಿದ್ದಾರೆಂದು ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ.

ನನ್ನ ಸಹಮತವಿಲ್ಲ

ಕೊಡಗು ವಿವಿಯನ್ನು ಮಂಗಳೂರು ವಿವಿಗೆ ವಿಲೀನಕ್ಕೆ ನನ್ನ ಸಹಮತವಿಲ್ಲ. ಕೊಡಗು ವಿವಿಗೆ ಅಗತ್ಯವಿರುವ ಸರ್ಕಾರದ ಸವಲತ್ತುಗಳು ಹಾಗೂ ಪೂರಕ ಅನುದಾನವನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ. ಸರ್ಕಾರ ಒಮ್ಮೆ ಕೊಡಗು ಜಿಲ್ಲೆಗೆ ವಿವಿ ಯನ್ನು ನೀಡಿದ ಮೇಲೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಅನುದಾನ ಬಂದಿಲ್ಲ ಎಂದು ವಿಲೀನಗೊಳಿಸಿ ಎಂದು ಕೇಳುವುದು ಸರಿಯಾದ ಕ್ರಮವಲ್ಲ. ಯಾರೂ ಕೂಡ ಇಂತಹ ದುಸ್ಸಾಹಕ್ಕೆ ಕೈಹಾಕಬಾರದು.