ಸೋಮವಾರಪೇಟೆ,ಜೂ.೩: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಇಂದು ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ ದಟ್ಟ ಮೋಡದೊಂದಿಗೆ ಗುಡುಗು ಮಿಂಚು ಸಹಿತ ಆರಂಭಗೊAಡ ಮಳೆ ಸಂಜೆಯವರೆಗೂ ಮುಂದುವರೆಯಿತು. ದಟ್ಟಮೋಡದಿಂದಾಗಿ ಹಗಲಿನಲ್ಲಿಯೂ ವಾತಾವರಣ ಕತ್ತಲಾದಂತೆ ಕಂಡು ಬಂತು.
ಸAತೆ ದಿನವಾದ ಸೋಮವಾರದಂದು ಡಿಢೀರ್ ಮಳೆ ಬಂದ ಹಿನ್ನೆಲೆ ಪಟ್ಟಣಕ್ಕೆ ಆಗಮಿಸಿದ್ದ ಮಂದಿ ಪರದಾಟ ಅನುಭವಿಸಿದರು. ಇಲ್ಲಿನ ಹೈಟೆಕ್ ಮಾರುಕಟ್ಟೆ ಆವರಣ ಮಳೆಯಿಂದಾಗಿ ಕೆಸರುಮಯವಾಗಿತ್ತು. ಸಂತೆ ವ್ಯಾಪಾರಖರೀದಿಗೆ ಆಗಮಿಸಿದ್ದ ಮಂದಿ ಮಳೆಯಿಂದಾಗಿ ಎರಡು ಗಂಟೆಗಳ ಕಾಲ ಮಾರುಕಟ್ಟೆಯ ಒಳಗೆ ನಿಲ್ಲುವಂತಾಗಿತ್ತು.
ಮಾರುಕಟ್ಟೆಯಲ್ಲಿ ಛತ್ರಿ, ಪ್ಲಾಸ್ಟಿಕ್, ರೈನ್ಕೋಟ್ಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಇನ್ನು ಧಾರಾಕಾರ ಮಳೆ ಕಾಫಿ ತೋಟದ ಕೆಲಸ ಕಾರ್ಯಗಳಿಗೆ ತಡೆಯೊಡ್ಡಿದ್ದು, ಬೆಳೆಗಾರ ವರ್ಗದಲ್ಲಿ ಚಿಂತೆ ಮೂಡಿಸಿದೆ. ಹಲವು ತೋಟಗಳಲ್ಲಿ ಇನ್ನೂ ಮರ ಕಟಾವು, ಗಿಡ ಕಟಾವು, ಗೊಬ್ಬರ ಹಾಕುವುದು, ಸ್ಪೆçà ಕೆಲಸಗಳು ಉಳಿದುಕೊಂಡಿದ್ದು, ಮಳೆ ಬಿಡುವು ನೀಡಿದ ನಂತರವಷ್ಟೇ ಕೆಲಸ ಕಾರ್ಯಗಳನ್ನು ಆರಂಭಿಸಬೇಕಿದೆ. ಸ್ಪೆçà ಮಾಡದೇ ಹೋದರೆ ಕಾಫಿ ಗಿಡಗಳನ್ನು ಆರೋಗ್ಯವಂತವಾಗಿ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆ ಬೆಳೆಗಾರ ವರ್ಗ ಚಿಂತೆಗೀಡಾಗುವAತೆ ಮಾಡಿದೆ.