ಕಡಂಗ, ಜೂ. ೩: ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಅಧೀನದಲ್ಲಿರುವ ಡಿವಿಷನ್ ಹಾಗೂ ಸೆಕ್ಟರ್ ಸಮಿತಿಗಳ ನಾಯಕರ ಕ್ಯಾಂಪ್ ಹಾಗೂ ಜಿಲ್ಲಾ ಸಮಿತಿಯ ಕೌನ್ಸಿಲ್ ಸಭೆ ಕೊಂಡAಗೇರಿಯ ಶಾದಿ ಮಹಲ್ ನಲ್ಲಿ ನಡೆಯಿತು. ಸಯ್ಯಿದುನಾ ಅಬ್ದುಲ್ಲಾಹಿ ಸಖಾಫ್ ಹಳ್ರಮಿ ಅವರ ಝಿಯಾರತ್ ನೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವನ್ನು ಎಸ್.ಎಸ್.ಎಫ್. ಮಾಜಿ ರಾಜ್ಯ ಕಾರ್ಯದರ್ಶಿ ಮುಬಶ್ಶಿರ್ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು. ಎಸ್ ಎಸ್ ಎಫ್ ಜಿಲ್ಲಾಧಕ್ಷ ಝುಬೈರ್ ಸಅದಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು

ರಾಜ್ಯ ಸಮಿತಿ ಸದಸ್ಯರಾದ ಆರಿಫ್ ಸಖಾಪಿ ಅವರ ನೇತೃತ್ವದಲ್ಲಿ ಜಿಲ್ಲಾ ಕೌನ್ಸಿಲ್ ನಡೆಯಿತು. ನಂತರ ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ನಾಯಕರಿಗೆ ಎಸ್.ವೈ.ಎಸ್. ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ಕಲಾಂ ಮಾಸ್ಟರ್ ಅವರು ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ SSಈ ರಾಜ್ಯ ಕಾರ್ಯದರ್ಶಿ ಮುಜೀಬ್, ರಾಜ್ಯ ಸಮಿತಿ ಸದಸ್ಯರಾದ ಇಬ್ರಾಹಿಂ ಮಾಸ್ಟರ್ ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಶಿಹಾಬ್ ತಂಙಳ್, ರಫೀಕ್ ಲತೀಫಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ ಸ್ವಾಗತಿಸಿ, ಕಾರ್ಯದರ್ಶಿ ಶಾಫಿ ಕುಂಜಿಲ ವಂದಿಸಿದರು.