ಗೋಣಿಕೊಪ್ಪಲು, ಜೂ. ೩ : ಮುಂಗಾರು ಪ್ರಾರಂಭವಾಗುತ್ತಿದ್ದAತೆಯೇ ಮಳೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಜವಾಬ್ದಾರಿ ನಡುವೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೀರೆ ಹೊಳೆಯ ಪರಿಸ್ಥಿತಿಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಎ.ಎಸ್.ಪೊನ್ನಣ್ಣ ಪರಿಶೀಲನೆ ಮಾಡಿದರು.
ಘನತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಇನ್ನಿತರ ವಸ್ತುಗಳು ಹೊಳೆಯಲ್ಲಿ ಹರಿದು ಬರುವ ಸಂದರ್ಭ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇತುವೆ ಬಳಿ ಅತ್ಯಾಧುನಿಕ ಮಾದರಿಯಲ್ಲಿ ಮೆಸ್ ಅಳವಡಿಸುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಘನತ್ಯಾಜ್ಯದ ನಿರ್ವಹಣೆ ಬಗ್ಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯನವರಿಂದ ಮಾಹಿತಿ ಪಡೆದರು. ಮಳೆಗಾಲದಲ್ಲಿ ಹೊಳೆಯಲ್ಲಿ ಹೆಚ್ಚಾಗಿ ಘನತ್ಯಾಜ್ಯ ಬರುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಈ ವೇಳೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯ ಮುಂಜಾಗ್ರತಾ ಕ್ರಮವಾಗಿ ಕೀರೆಹೊಳೆ ಹಾಗೂ ಬೈಪಾಸ್ ಕೈತೋಡನ್ನು ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವ ರೀತಿಯಲ್ಲಿ ಕಾಮಗಾರಿ ಕೈಗೊಂಡಿದ್ದೇವೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಬೈಪಾಸಿನಿಂದ ನೇರವಾಗಿ ಮಂಜುನಾಥ ಬೇಕರಿ ಸಮೀಪದ ರಸ್ತೆ ಮಾರ್ಗದಿಂದ ಸಂಪರ್ಕವಾಗುವ ಕೀರೆ ಹೊಳೆಗೆ ಸೇತುವೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಗಣಪತಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಆದಷ್ಟು ಬೇಗನೆ ಕಾಮಗಾರಿಯ ರೂಪುರೇಷೆಗಳ ಬಗ್ಗೆ ನೀಲಿ ನಕಾಶೆ ತಯಾರಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರ ಭೇಟಿ ವೇಳೆ ಗ್ರಾ.ಪಂ.ಸದಸ್ಯರುಗಳಾದ ಧ್ಯಾನ್ ಸುಬ್ಬಯ್ಯ, ಅಬ್ಸಲ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ನಾಯಂದರ ಶಿವಾಜಿ ಸೇರಿದಂತೆ ಪ್ರಮುಖರು ಇದ್ದರು.