ಸೋಮವಾರಪೇಟೆ, ಜೂ. ೩: ಲೋಕ ಕಲ್ಯಾಣಾರ್ಥವಾಗಿ ತಾ. ೫ ಮತ್ತು ೬ ರಂದು ಸಿದ್ಧಲಿಂಗಪುರದ ಅರಸಿನಕುಪ್ಪೆ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ನವ ಚಂಡಿಕಾ ಯಾಗ ನೆರವೇರಿಸಲಾಗುವುದು ಎಂದು ದೇವಾಲಯದ ಚಂಡಿಕಾಯಾಗ ನಿರ್ವಹಣಾ ಸಮಿತಿ ಅಧ್ಯಕ್ಷ ಹೊಸೊಕ್ಲು ಸತೀಶ್ ತಿಳಿಸಿದ್ದಾರೆ.

ಅರಸಿನಕುಪ್ಪೆಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಈಗಾಗಲೇ ನವನಾಗನಾಥ ದೇವಾಲಯ ನಿರ್ಮಾಣಗೊಂಡಿದ್ದು, ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಎನ್.ಎಂ. ಮುತ್ತಪ್ಪ ಹಾಗೂ ಗೌರವಾಧ್ಯಕ್ಷರಾಗಿ ಎನ್.ಎಂ. ಮುದ್ದಪ್ಪ ಅವರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್ ಜೀ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಪಂಚಮಿ ಪೂಜೆ, ವಾರ್ಷಿಕ ಮಹಾಶಿವರಾತ್ರಿ ಉತ್ಸವ, ಯುಗಾದಿ, ಧರ್ನುಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ ಎಂದರು.

ಇದೇ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ನವ ಚಂಡಿಕಾಯಾಗ ಆಯೋಜಿಸಿದ್ದು, ಎರಡು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ತಾ. ೫ ರಿಂದ ಶ್ರೀ ರಾಜೇಶ್‌ನಾಥ್ ಜೀ ಅವರ ಮಾರ್ಗದರ್ಶನದಂತೆ ಬೆಂಗಳೂರಿನ ಕೇಶವ ಅಡಿಗ ಅವರ ನೇತೃತ್ವದಲ್ಲಿ, ಕ್ಷೇತ್ರದ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಮೃತ್ಯುಂಜಯ ಹೋಮ ಸಹಿತ ನವ ಚಂಡಿಕಾ ಯಾಗ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ತಾ. ೫ ರಂದು ಬೆಳಿಗ್ಗೆ ೮ ಗಂಟೆಯಿAದ ಮಹಾಗಣಪತಿ ಹೋಮ, ಅಭಿಷೇಕಾಧಿಗಳು, ಅಲಂಕಾರ ಪೂಜೆಗಳು, ಮಹಾ ಮೃತ್ಯುಂಜಯ ಹೋಮ, ಪ್ರಸಾದ ವಿತರಣೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಸಂಜೆ ೫ ಗಂಟೆಯಿAದ ಚಂಡಿಕಾ ಪಾರಾಯಣ, ದುರ್ಗಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು. ತಾ. ೬ ರಂದು ಬೆಳಿಗ್ಗೆ ೮.೩೦ರಿಂದ ನವ ಚಂಡಿಕಾ ಯಾಗದ ಅಂಗವಾಗಿ ಗಣಪತಿ ಹೋಮ, ರುದ್ರಾಭಿಷೇಕ, ಮೃತ್ಯುಂಜಯ ಹೋಮ, ದುರ್ಗಾಪೂಜೆ, ಶ್ರೀ ಚಂಡಿಕಾ ಪಾರಾಯಣ, ನವ ಚಂಡಿಕಾ ಹೋಮ, ಅಲಂಕಾರ ಸೇವೆ, ಅನ್ನಸಂತರ್ಪಣೆ ನೆರವೇರಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೮೭೬೨೨೧೨೯೪೬ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಹೊಸೊಕ್ಲು ಸತೀಶ್ ಮಾಹಿತಿ ನೀಡಿದರು.