ಗ್ರಾಮ ಪಂಚಾಯಿತಿಗೆ ‘ಪವರ್ ಕಟ್’..!
ಕೂಡಿಗೆ,ಜೂ. ೩: ಕೂಡಿಗೆ ಗ್ರಾಮ ಪಂಚಾಯಿತಿಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಬಳಕೆ ಮಾಡಿಕೊಂಡAತಹ ವಿದ್ಯುತ್ ಬಿಲ್ ಅನ್ನು ನಿಗಮಕ್ಕೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಪಂಚಾಯತಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಪ್ರಸಂಗ ನಡೆದಿದೆ.
ಕಳೆದ ಮೂರು ತಿಂಗಳುಗಳಿAದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಿ ದೀಪ, ಕುಡಿಯುವ ನೀರಿನ ಘಟಕ ಸೇರಿದಂತೆ ಕಚೇರಿ ವಿದ್ಯುತ್ ಸಂಪರ್ಕದ ಬಿಲ್ ರೂ. ೭ ಲಕ್ಷಕ್ಕೂ ಅಧಿಕವಾದ ಹಿನ್ನೆಲೆಯಲ್ಲಿ ನಿಗಮದವರು ಕಛೇರಿ ವಿದ್ಯುತ್ ಸಂಪರ್ಕವನ್ನು ಕಳೆದ ೫ ದಿನಗಳ ಹಿಂದೆ ಕಡಿತಗೊಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿರ ಕಚೇರಿಯ ಯಾವುದೇ ಕೆಲಸಗಳು ನಡೆಯುತ್ತಿಲ್ಲ.
ಬಿಲ್ ಪಾವತಿಸಲು ಚೆಕ್ ಸಿದ್ದತೆ ಮಾಡಿದರೂ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಬAಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.