*ಗೋಣಿಕೊಪ್ಪ, ಜೂ. ೩: ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಜೂನ್ ತಿಂಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.

ಸ್ಥಳೀಯರಿಗೆ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿAಗ್ ಶಿಕ್ಷಣ ನೀಡುವ ಉದ್ದೇಶದಿಂದ ೧೯೯೯ ರಲ್ಲಿ ಸ್ಥಾಪನೆಗೊಂಡ ಸಂಸ್ಥೆ ೨೫ ವರ್ಷಗಳ ಸೇವೆ ಪೂರೈಸಿರುವ ಹೆಮ್ಮೆ ನಮಗಿದೆ. ಇದರಂತೆ ಜೂನ್ ತಿಂಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಸಂಭ್ರಮಕ್ಕೆ ಮೆರಗು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷ ಮುಕಾಟೀರ ಎಂ. ಚಂಗಪ್ಪ, ಕಾರ್ಯದರ್ಶಿ ಚಿರಿಯಪಂಡ ಕೆ. ಪೂವಪ್ಪ ಸೇರಿದಂತೆ ಹಲವಾರು ಮಹನೀಯರ ದೂರದೃಷ್ಠಿ, ಚಿಂತನೆಯAತೆ ಖಾಸಗಿ ತಾಂತ್ರಿಕ ಕಾಲೇಜು ಆರಂಭವಾಯಿತು. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ಅತ್ಯುನ್ನತ ಉದ್ಯೋಗವಕಾಶ, ಭಾರತೀಯ ಸೇನೆ, ಪೊಲೀಸ್ ಇಲಾಖೆ, ಐಪಿಎಸ್, ಬಹುರಾಷ್ಟಿçÃಯ ಕಂಪೆನಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.

(ಮೊದಲ ಪುಟದಿಂದ) ಪದವಿಪೂರ್ವ ಕಾಲೇಜು ಪ್ರಾಂಶು ಪಾಲೆ, ಕಾರ್ಯಕ್ರಮ ಸಂಚಾಲಕಿ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬೆಳ್ಳಿ ಉತ್ಸವದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೂ. ೮ ರಂದು ಎಥ್‌ನಿಕ್ ಡೇ ಆಚರಿಸಲಾಗುತ್ತಿದ್ದು, ವಿವಿಧ ರೀತಿಯ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ವಿದ್ಯಾರ್ಥಿ ಗಳು ಕಂಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಥಾಪನೆಗೆ ಭದ್ರ ಬುನಾದಿ ಹಾಕಿರುವ ಮಹನೀಯರನ್ನು ನಾವು ಸ್ಮರಿಸುವ ಸಲುವಾಗಿ ಜೂ.೧೦ ರಂದು ಸಂಸ್ಥಾಪಕರ ದಿನವನ್ನು ಆಚರಿ ಸಲಾಗುತ್ತಿದೆ. ಇದುವರೆಗೆ ಸೇವೆ ಸಲ್ಲಿಸಿದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸ ಲಾಗುವುದು ಎಂದು ತಿಳಿಸಿದರು.

ಜೂ.೧೧ ಮತ್ತು ೧೨ ರಂದು ಇಂಟರ್ ಕಾಲೇಜ್ ಫೆಸ್ಟ್ ಆಯೋಜಿಸಲಾಗಿದೆ. ಆ ಮೂಲಕ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶ ಕಲ್ಪಿಸಿದ್ದೇವೆ ಹಾಗೂ ಜೂ. ೧೩ ರಂದು ಕಾಲೇಜು ವಾರ್ಷಿಕೋತ್ಸವ ಸಂಭ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಇದೇ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ಹೆಮ್ಮೆಯ ಕಲ್ಬುರ್ಗಿಂ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಪೊಲೀಸ್ ಕಮಿಷನರ್ ಆಗಿರುವ ಆರ್. ಚೇತನ್, ಎಂಐಕ್ಯೂ ಇಂಡಿಯಾ ಡೈರೆಕ್ಟರ್ ಡೇಟಾ ಸೈನ್ಸ್ ತನುಷ್ ಬಿದ್ದಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಾಂಸ್ಕೃತಿಕ ಮೆರಗು

ಬೆಳ್ಳಿ ಮಹೋತ್ಸವದ ಸಂಭ್ರಮದ ವೈಭವಕ್ಕೆ ಮೆರಗು ನೀಡುವ ಸಲುವಾಗಿ ಕನ್ನಡದ ಹೆಸರಾಂತ ಸಂಗೀತಗಾರ ವಿಜಯಪ್ರಕಾಶ್ ಒಳಗೊಂಡAತೆ ಹಲವಾರು ಜನಪ್ರಿಯ ಗಾಯಕ ಗಾಯಕಿಯರ ತಂಡ ಜೂ.೧೩ ರಂದು ಸಂಜೆ ೭ ಗಂಟೆಗೆ ಸಂಗೀತ ಗಾನಸುಧೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದರು.

ಈಗಾಗಲೇ ನ್ಯಾಕ್ ಸಮಿತಿಯಿಂದ ಎ ಗ್ರೇಡ್ ಮಾನ್ಯತೆ ಪಡೆಯಲಾಗಿದೆ. ಬೆಳ್ಳಿ ಮಹೋತ್ಸವ ಹಿನ್ನೆಲೆ, ಲಾಂಛನ ಅನಾವರಣ ನಡೆಸಲಾಗಿದೆ. ೧೦ ಕಿ.ಮೀ. ಮ್ಯಾರಥಾನ್ ನಡೆದಿದೆ. ರಾಜ್ಯಮಟ್ಟದ ಬೃಹತ್ ಕೃಷಿ ಮೇಳದ ಮೂಲಕ ಸ್ಥಳೀಯ ಕೃಷಿಕರಿಗೆ ಕೃಷಿ ಯಂತ್ರಗಳ ಪರಿಚಯ ಮಾಡಿಕೊಡಲಾಗಿದೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿರಿಯಪಂಡ ಪಿ. ರಾಕೇಶ್ ಪೂವಯ್ಯ, ಉಪಾಧ್ಯಕ್ಷ ಕುಪ್ಪಂಡ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ಚಿರಿಯಪಂಡ ರಾಜ ನಂಜಪ್ಪ, ಖಜಾಂಜಿ ಕಟ್ಟೇರ ಎನ್. ಉತ್ತಪ್ಪ ಇದ್ದರು.

-ಎನ್.ಎನ್. ದಿನೇಶ್